AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಲ್ಕಿ’ ಪೋಸ್ಟರ್ ಮೇಲೆ ಬಿತ್ತು ‘ಶಾಸ್ತ್ರಿ’ ಸಿನಿಮಾ ಬ್ಯಾನರ್​; ಜನ ಜಂಗುಳಿ ತೋರಿಸಲು ಫೇಕ್ ವಿಡಿಯೋ?

ದರ್ಶನ್ ಫ್ಯಾನ್ಸ್ ‘ಕಲ್ಕಿ 2898 ಎಡಿ’ ಚಿತ್ರದ ಮೇಲೆ ‘ಶಾಸ್ತ್ರಿ’ ಸಿನಿಮಾ ಪೋಸ್ಟರ್ ಅಂಟಿಸಿದ್ದಾರೆ. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ದರ್ಶನ್ ಅವರ ವಿಚಾರಣಾದೀನ ಖೈದಿ ಸಂಖ್ಯೆಯನ್ನು ದೊಡ್ಡದಾಗಿ ಹಾಕಿದ್ದಾರೆ. ಇದನ್ನು ಕೆಲವರು ಟೀಕಿಸಿದ್ದಾರೆ. ಅಲ್ಲಿ ಖೈದಿ ಸಂಖ್ಯೆ ಹಾಕುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.

‘ಕಲ್ಕಿ’ ಪೋಸ್ಟರ್ ಮೇಲೆ ಬಿತ್ತು ‘ಶಾಸ್ತ್ರಿ’ ಸಿನಿಮಾ ಬ್ಯಾನರ್​; ಜನ ಜಂಗುಳಿ ತೋರಿಸಲು ಫೇಕ್ ವಿಡಿಯೋ?
‘ಕಲ್ಕಿ’ ಪೋಸ್ಟರ್ ಮೇಲೆ ಬಿತ್ತು ‘ಶಾಸ್ತ್ರಿ’ ಸಿನಿಮಾ ಬ್ಯಾನರ್​; ಜನ ಜಂಗುಳಿ ತೋರಿಸಲು ಫೇಕ್ ವಿಡಿಯೋ?
TV9 Web
| Edited By: |

Updated on:Jul 13, 2024 | 10:52 AM

Share

ದರ್ಶನ್ ಅವರು ಸದ್ಯ ಜೈಲಿನಲ್ಲಿ ಇದ್ದಾರೆ. ಅವರ ವಿಚಾರ ಭರ್ಜರಿಯಾಗಿ ಚರ್ಚೆ ಆಗುತ್ತಿದೆ. ಹೀಗಾಗಿ, ‘ಶಾಸ್ತ್ರಿ’ ಸಿನಿಮಾ ಜುಲೈ 12ರಂದು ರೀ-ರಿಲೀಸ್ ಆಗಿದೆ. ಮುಂಜಾನೆಯ ಶೋಗೆ ಫ್ಯಾನ್ಸ್ ಆಗಮಿಸಿದ್ದರು. ಈ ಸಿನಿಮಾ ರಿಲೀಸ್ ಆಗಿದ್ದು ಫ್ಯಾನ್ಸ್​ಗೆ ಖುಷಿ ನೀಡಿದೆ. ಈ ಮಧ್ಯೆ ಕೆಲವು ಕಿರಿಕ್​ಗಳು ಆಗಿವೆ. ಇನ್ನೂ ಕೆಲವು ಕಡೆಗಳಲ್ಲಿ ವಿಡಿಯೋಗಳನ್ನು ಎಡಿಟ್ ಮಾಡಿ ‘ಶಾಸ್ತ್ರಿ’ ಸಿನಿಮಾಗೆ ಹೈಪ್ ಇದೆ ಎಂದು ತೋರಿಸುವ ಪ್ರಯತ್ನ ನಡೆದಿದೆ. ಆ ಬಗ್ಗೆ ಇಲ್ಲಿದೆ ವಿವರ.

ಖೈದಿ ಸಂಖ್ಯೆ

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಥಿಯೇಟರ್​ನಲ್ಲಿ ನಡೆದ ಘಟನೆ ಸದ್ಯ ಚರ್ಚೆ ಆಗುತ್ತಿದೆ. ಅಲ್ಲಿ ‘ಕಲ್ಕಿ 2898 ಎಡಿ’ ಹಾಗೂ ‘ಶಾಸ್ತ್ರಿ’ ಎರಡೂ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ‘ಕಲ್ಕಿ’ ಚಿತ್ರಕ್ಕೆ ಎರಡು ಹಾಗೂ ಶಾಸ್ತ್ರಿ ಚಿತ್ರಕ್ಕೆ ಎರಡು ಶೋ ನೀಡಲಾಗಿದೆ. ದರ್ಶನ್ ಅಭಿಮಾನಿಗಳು ‘ಕಲ್ಕಿ 2898 ಎಡಿ’ ಚಿತ್ರದ ಮೇಲೆ ‘ಶಾಸ್ತ್ರಿ’ ಸಿನಿಮಾ ಪೋಸ್ಟರ್ ಅಂಟಿಸಿದ್ದಾರೆ. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ದರ್ಶನ್ ಅವರ ವಿಚಾರಣಾಧೀನ ಖೈದಿ ಸಂಖ್ಯೆಯನ್ನು ದೊಡ್ಡದಾಗಿ ಹಾಕಿದ್ದಾರೆ. ಇದನ್ನು ಕೆಲವರು ಟೀಕಿಸಿದ್ದಾರೆ. ಅಲ್ಲಿ ಖೈದಿ ಸಂಖ್ಯೆ ಹಾಕುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.

ಫೇಕ್ ವಿಡಿಯೋ?

‘ಶಾಸ್ತ್ರಿ’ ಸಿನಿಮಾ ಟಿಕೆಟ್ ತೆಗೆದುಕೊಳ್ಳಲು ನೂಕು ನುಗ್ಗಲು ಎಂದು ಕ್ಯಾಪ್ಶನ್ ಹಾಕಿ ವಿಡಿಯೋ ಒಂದನ್ನು ಶೇರ್ ಮಾಡಿಕೊಳ್ಳಲಾಗಿತ್ತು. ಆ ಬಳಿಕ ಅದನ್ನು ಡಿಲೀಟ್ ಮಾಡಲಾಗಿದೆ. ಅಸಲಿಗೆ ಈ ವಿಡಿಯೋ ಗುಜರಾತ್​ನದ್ದು. 10 ಹುದ್ದೆಗಳಿಗೆ ಬರೋಬ್ಬರಿ 1800 ಜನರು ಬಂದಿದ್ದರು. ಇದರಿಂದ ನೂಕು ನುಗ್ಗಲು ಉಂಟಾಗಿತ್ತು. ಇದು ‘ಶಾಸ್ತ್ರಿ’ ಸಿನಿಮಾದ ಟಿಕೆಟ್ ಕೌಂಟರ್ ಎಂದು ಬಣ್ಣಿಸೋ ಪ್ರಯತ್ನ ಆಗಿದೆ.

ಇದನ್ನೂ ಓದಿ: ಜುಲೈ 12ಕ್ಕೆ ದರ್ಶನ್​ ನಟನೆಯ ‘ಶಾಸ್ತ್ರಿ’ ಸಿನಿಮಾ ಮರು ಬಿಡುಗಡೆ; ಏನಿದು ಪ್ಲ್ಯಾನ್?

ಇವತ್ತಿನಿಂದ ಖಾಲಿ?

ಮೊದಲ ದಿನ ಮೊದಲ ಶೋ ನೋಡಲು ಫ್ಯಾನ್ಸ್ ನುಗ್ಗಿದ್ದರು. ಆ ಬಳಿಕ ಯಾರೂ ಸಿನಿಮಾಗೆ ಹೋಗುತ್ತಿಲ್ಲ. ಪ್ರಸನ್ನ ಥಿಯೇಟರ್​ನಲ್ಲಿ ಇಂದು ಬೆಳಗ್ಗಿನ 10.30ರ ಶೋಗೆ 10.25 ಆದರೂ ಬುಕ್ ಆಗಿದ್ದು ಕೆಲವೇ ಕೆಲವು ಶೋಗಳು. ಹೀಗಾಗಿ, ಇವತ್ತಿನಿಂದ ಥಿಯೇಟರ್​ಗಳು ಖಾಲಿ ಆಗಿ ಉಳಿಯಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:49 am, Sat, 13 July 24