ಅಂಬಾನಿಯಿಂದ ಯಶ್​ಗೆ ಸಿಕ್ಕಿತು ಎರಡು ಕೋಟಿ ಮೌಲ್ಯದ ಉಡುಗೊರೆ

ಅನಂತ್ ಅಂಬಾನಿ-ರಾಧಿಕಾ ಮದುವೆಯಲ್ಲಿ ದೇಶ-ವಿದೇಶದ ಹಲವು ಗಣ್ಯರು ಅತಿಥಿಗಳಾಗಿ ಭಾಗಿಯಾಗಿದ್ದರು. ನಟ ಯಶ್ ಸಹ ಮದುವೆಯಲ್ಲಿ ಭಾಗಿಯಾಗಿದ್ದರು. ಯಶ್​ಗೆ ಅಂಬಾನಿ ಕುಟುಂಬದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಉಡುಗೊರೆ ದೊರೆತಿದೆ.

ಅಂಬಾನಿಯಿಂದ ಯಶ್​ಗೆ ಸಿಕ್ಕಿತು ಎರಡು ಕೋಟಿ ಮೌಲ್ಯದ ಉಡುಗೊರೆ
Follow us
ಮಂಜುನಾಥ ಸಿ.
|

Updated on: Jul 14, 2024 | 12:57 PM

ವಿಶ್ವದ ಟಾಪ್ ಹತ್ತು ಶ್ರೀಮಂತರಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ತಮ್ಮ ಪುತ್ರ ಅನಂತ್ ಅಂಬಾನಿಯ ಮದುವೆಯನ್ನು ಬಲು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ದೇಶ, ವಿದೇಶದ ಹಲವು ಸಿನಿಮಾ, ಪಾಪ್ ತಾರೆಯರು, ರಾಜಕಾರಣಿಗಳು, ಉದ್ಯಮಿಗಳು ಅಂಬಾನಿ ಪುತ್ರನ ಮದುವೆಗೆ ಆಗಮಿಸಿದ್ದಾರೆ. ಸುಮಾರು 6000 ಕೋಟಿ ಹಣವನ್ನು ಮುಕೇಶ್ ಅಂಬಾನಿ ತಮ್ಮ ಮಗನ ಮದುವೆಗೆ ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ. ಎಷ್ಟರ ಮಟ್ಟಿಗೆ ಅದ್ಧೂರಿಯಾಗಿ ಮದುವೆ ಮಾಡುತ್ತಿದ್ದಾರೆಂದರೆ ಮದುವೆಗೆ ಬಂದ ಅತಿಥಿಗಳಿಗೆ ಕೋಟ್ಯಂತರ ಮೌಲ್ಯದ ಉಡುಗೊರೆಯನ್ನು ಅಂಬಾನಿ ನೀಡಿದ್ದಾರೆ.

ಕನ್ನಡದ ನಟ ಯಶ್ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್ ಸಹ ಮದುವೆಯಲ್ಲಿ ಭಾಗಿಯಾಗಿದ್ದರು. ಅವರಿಗೂ ಸಹ ಕೋಟ್ಯಂತರ ಮೌಲ್ಯದ ಉಡುಗೊರೆ ಅಂಬಾನಿ ಅವರಿಂದ ದೊರೆತಿದೆ. ಅಂಬಾನಿ, ಮದುವೆಗೆ ಬಂದ ಅತಿಥಿಗಳಿಗೆ ಬರೋಬ್ಬರಿ ಎರಡು ಕೋಟಿ ರೂಪಾಯಿ ಮೌಲ್ಯದ ದುಬಾರಿ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಶಾರುಖ್ ಖಾನ್ ಸೇರಿದಂತೆ ಮದುವೆಯಲ್ಲಿ ಭಾಗವಹಿಸಿರುವ ಎಲ್ಲರಿಗೂ ಈ ದುಬಾರಿ ವಾಚು ಉಡುಗೊರೆಯಾಗಿ ದೊರೆತಿದೆ.

ಸ್ವಿಟ್ಜರ್​ಲ್ಯಾಂಡ್​ನ ಆಡಿಮೆರಾಸ್ ಪಿಗೆಟ್ ಬ್ರ್ಯಾಂಡ್​ನ ಲಿಮಿಟೆಡ್ ಎಡಿಷನ್ ವಾಚ್ ಅನ್ನು ಅಂಬಾನಿ ಕುಟುಂಬದವರು ಬಂದ ಅತಿಥಿಗಳಿಗೆ ನೀಡಿದ್ದಾರೆ. ಈ ವಾಚಿನ ಬೆಲೆ ಸುಮಾರು 1.5 ರಿಂದ 2 ಕೋಟಿ ಎನ್ನಲಾಗುತ್ತಿದ್ದು, ಬಂದ ಪ್ರತಿಯೊಬ್ಬ ಅತಿಥಿಗೂ ಈ ವಾಚನ್ನು ನೀಡಲಾಗಿದೆ. ಸುಮಾರು ಎರಡು ಸಾವಿರ ಕೋಟಿಗಿಂತಲೂ ಹೆಚ್ಚಿನ ಮೊತ್ತವನ್ನು ಕೇವಲ ಉಡುಗೊರೆಗಾಗಿಯೇ ಮುಕೇಶ್ ಅಂಬಾನಿ ಖರ್ಚು ಮಾಡಿದ್ದಾರೆ. ಅಂಬಾನಿ ಮದುವೆಯಲ್ಲಿ ಉಡುಗೊರೆಯಾಗಿ ಸಿಕ್ಕ ವಾಚುಗಳನ್ನು ಧರಿಸಿಕೊಂಡು ಕೆಲ ಸೆಲೆಬ್ರಿಟಿಗಳು ಫೋಟೊಗಳನ್ನು ತೆಗೆಸಿಕೊಂಡಿದ್ದಾರೆ.

ಮದುವೆಯ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಶಾರುಖ್ ಖಾನ್, ಸಲ್ಮಾನ್ ಖಾನ್ ಇನ್ನೂ ಕೆಲವರಿಗೆ ವಾಚ್​ನ ಜೊತೆಗೆ ಕೆಲವು ದುಬಾರಿ ಉಡುಗೊರೆಗಳನ್ನು ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಮದುವೆಯಲ್ಲಿ ಭಾಗವಹಿಸಿದ ನಟಿಯರು ಹಾಗೂ ಇತರೆ ಸೆಲೆಬ್ರಿಟಿ ಮಹಿಳೆಯರಿಗೆ ಭಾರಿ ದುಬಾರಿ ಸೀರೆಯ ಜೊತೆಗೆ ಚಿನ್ನದ ಆಭರಣವನ್ನು ಸಹ ನೀಡಲಾಗಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ