ಪ್ರಾಥಮಿಕ ಆರೋಪ ಪಟ್ಟಿ ಹಾಕಲು ಪೊಲೀಸರ ನಿರ್ಧಾರ; ದರ್ಶನ್ಗೆ ಸಂಕಷ್ಟ?
ಹೈದರಬಾದ್‌ಗೆ ಕಳುಹಿಸಿರುವ ವಿಡಿಯೋಗಳ ದಾಖಲೆಗಳು ಬರಬೇಕಾಗಿದೆ. ಸಿಸಿಟಿವಿ, ಮೊಬೈಲ್ ರೀಟ್ರಿವ್ ರಿಪೋರ್ಟ್ ಪೊಲೀಸರ ಕೈಗೆ ಸಿಗಬೇಕಿದೆ. ಹೀಗಾಗಿ ಈಗ ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗುತ್ತಿದೆ. ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಗೆ ನಿರ್ಧಾರ ಮಾಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ನಡೆದು ಎರಡು ತಿಂಗಳು ಕಳೆಯುತ್ತಾ ಬಂದಿದೆ. ಈ ಕೇಸ್ನಲ್ಲಿ ದರ್ಶನ್ ಹಾಗೂ ಅವರ ಸಹಚರರು ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್ ಅವರು ಎ2 ಆರೋಪಿ ಆದರೆ, ಪವಿತ್ರಾ ಗೌಡ ಎ1 ಆರೋಪಿ ಆಗಿದ್ದಾರೆ. ಸದ್ಯ ಕೊಲೆ ಕೇಸ್ನಲ್ಲಿ ದರ್ಶನ್ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಸದ್ಯ ಸಾಕ್ಷಿಗಳನ್ನು ಕಲೆ ಹಾಕುತ್ತಿರುವ ಪೊಲೀಸರು ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ನಿರ್ಧಾರ ಮಾಡಿದ್ದಾರೆ. ಚಾರ್ಜ್್ಶೀಟ್ ಯಾವ ರೀತಿಯ ಅಂಶಗಳನ್ನು ಉಲ್ಲೇಖ ಮಾಡಲಾಗುತ್ತದೆ ಎಂಬುದು ಪ್ರಮುಖವಾಗಲಿದೆ.
ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಗೆ ನಿರ್ಧಾರ ಮಾಡಿದ್ದಾರೆ ಪೊಲೀಸರು. ಇದು ಪ್ರಾಥಮಿಕ ಆರೋಪಪಟ್ಟಿ ಆಗಿರಲಿದೆ. ಹೈದರಬಾದ್‌ಗೆ ಕಳುಹಿಸಿರುವ ವಿಡಿಯೋಗಳ ದಾಖಲೆಗಳು ಬರಬೇಕಾಗಿದೆ. ಸಿಸಿಟಿವಿ, ಮೊಬೈಲ್ ರೀಟ್ರಿವ್ ರಿಪೋರ್ಟ್ ಪೊಲೀಸರ ಕೈಗೆ ಸಿಗಬೇಕಿದೆ. ಇವೆಲ್ಲ ಬಂದ ಮೇಲೆ ಹೆಚ್ಚುವರಿ ರಿಪೋರ್ಟ್ ಸಲ್ಲಿಕೆಗೆ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.
ಪ್ರಾಥಮಿಕ ಚಾರ್ಜ್ಶೀಟ್ನಲ್ಲಿ ಏನೆಲ್ಲ ಇರುತ್ತೆ?
ರೇಣುಕಾ ಸ್ವಾಮಿ ಮರಣೋತ್ತ ಪರೀಕ್ಷೆಯ ವರದಿ, 164 ಹೇಳಿಕೆಗಳು, 180ಕ್ಕೂ ಹೆಚ್ಚು ಸಾಕ್ಷಿಗಳು ಈ ವರದಿಯಲ್ಲಿ ಇರಲಿವೆ. ಇವೆಲ್ಲಾವನ್ನು ಪ್ರಾಥಮಿಕ ಚಾರ್ಜ್ಶೀಟ್ನಲ್ಲಿ ಪೊಲೀಸರು ಸಲ್ಲಿಕೆ ಮಾಡಲಿದ್ದಾರೆ. ದರ್ಶನ್ ಅವರು ಈ ಕೃತ್ಯದಲ್ಲಿ ಭಾಗಿ ಆಗಿದ್ದಾರೋ ಅಥವಾ ಇಲ್ಲವೋ ಎಂಬುದು ಕೂಡ ಇದರಲ್ಲಿ ಉಲ್ಲೇಖ ಆಗಲಿದೆ. ಇದರ ಮೇಲೆ ದರ್ಶನ್ ಭವಿಷ್ಯ ನಿರ್ಧಾರ ಆಗಲಿದೆ.
ಇದನ್ನೂ ಓದಿ: ‘ಮತ್ತೆ ಗುರುವಾರ ಬರ್ತೀನಿ’; ದರ್ಶನ್ ಭೇಟಿd ಬಗ್ಗೆ ಸಾಧು ಕೋಕಿಲ ಮಾತು
ಜಾಮೀನು ಅರ್ಜಿ
ದರ್ಶನ್ ಅವರು ಈವರೆಗೆ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿಲ್ಲ. ಒಂದೊಮ್ಮೆ ಚಾರ್ಜ್‌ಶೀಟ್ ಸಲ್ಲಿಕೆ ಆದರೆ, ಆ ಬಳಿಕ ಅವರು ಜಾಮೀನಿಗೆ ದರ್ಶನ್ ಅರ್ಜಿ ಹಾಕಲಿದ್ದಾರೆ. ಸದ್ಯ ಅವರು ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ. ಆಗಸ್ಟ್ 2ರವರೆಗೆ ನ್ಯಾಯಾಂಗ ಬಂಧನ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



