‘ಹ್ಯಾಪಿ ಆಗಿದೆ..’ ಎಂದು ಕನ್ನಡ ಹಾಡಿಗೆ ತಲೆದೂಗಿದ ಕೊವಿಡ್​ ಸೋಂಕಿತರು; ಕಡುಕಷ್ಟದಲ್ಲೂ ಆಲ್​ ಓಕೆ

ಕಷ್ಟದ ಸಮಯದಲ್ಲಿ ಬೇಸರ ಮಾಡಿಕೊಂಡರೆ ಅದರಿಂದ ಏನೂ ಉಪಯೋಗ ಇಲ್ಲ. ಎಲ್ಲರಿಗೂ ಒಳ್ಳೆಯ ಕಾಲ ಬಂದೇಬರುತ್ತದೆ ಎನ್ನುವ ಸಂದೇಶವನ್ನು ಸಿಂಪಲ್​ ಸಾಹಿತ್ಯದ ಮೂಲಕ ‘ಹ್ಯಾಪಿ ಆಗಿದೆ..’ ಹಾಡು ವಿವರಿಸುತ್ತದೆ.

‘ಹ್ಯಾಪಿ ಆಗಿದೆ..’ ಎಂದು ಕನ್ನಡ ಹಾಡಿಗೆ ತಲೆದೂಗಿದ ಕೊವಿಡ್​ ಸೋಂಕಿತರು; ಕಡುಕಷ್ಟದಲ್ಲೂ ಆಲ್​ ಓಕೆ
ಗಾಯಕ ಆಲ್​ ಓಕೆ - ಹ್ಯಾಪಿ ಆಗಿದೆ ಹಾಡಿಗೆ ತಲೆದೂಗಿದ ಕೊವಿಡ್​ ಸೋಂಕಿತರು

Updated on: May 24, 2021 | 11:25 AM

ಕೊರೊನಾ ವೈರಸ್​ ಎರಡನೇ ಅಲೆಯ ಅಬ್ಬರಕ್ಕೆ ದೇಶದ ಜನರು ತತ್ತರಿಸಿದ್ದಾರೆ. ಸೂಕ್ತ ವೈದ್ಯಕೀಯ ಸೌಲಭ್ಯಗಳು ಸರಿಯಾದ ಸಮಯಕ್ಕೆ ಸಿಗದ ಕಾರಣ ಅನೇಕರು ಅಸುನೀಗಿದ್ದಾರೆ. ಹಾಗಾಗಿ ಕೊರೊನಾ ಪಾಸಿಟಿವ್​ ಎಂಬ ಪದವೇ ಜನರಲ್ಲಿ ಭಯ ಹುಟ್ಟಿಸುತ್ತಿದೆ. ಒಮ್ಮೆ ಕೊವಿಡ್​ ಸೋಂಕು ತಗುಲಿದರೆ ಆ ವ್ಯಕ್ತಿಯ ಧೈರ್ಯ ಕುಸಿಯುವಂತಹ ವಾತಾವರಣ ನಿರ್ಮಾಣ ಆಗಿದೆ. ಇಂಥ ಸಂದರ್ಭದಲ್ಲಿ ಸೋಂಕಿತರ ಮನೋಬಲ ಹೆಚ್ಚಿಸುವ ಕೆಲಸ ಆಗಬೇಕಿರುವುದು ಅಗತ್ಯ. ಅದಕ್ಕಾಗಿ ಕೆಲವು ವೈದ್ಯಕೀಯ ಸಿಬ್ಬಂದಿ ಹಾಡುಗಳ ಮೊರೆಹೋಗುತ್ತಿದ್ದಾರೆ. ಇತ್ತೀಚೆಗೆ ಕನ್ನಡದ ಜನಪ್ರಿಯ ‘ಹ್ಯಾಪಿ ಆಗಿದೆ..’ ಹಾಡಿನ ಮೂಲಕ ಸೋಂಕಿತರ ಮೊಗದಲ್ಲಿ ಉತ್ಸಾಹ ಮೂಡಿಸುವ ಪ್ರಯತ್ನ ಮಾಡಲಾಗಿದೆ.

ಕನ್ನಡದ ಖ್ಯಾತ ಗಾಯಕ, ಸಂಗೀತ ಸಂಯೋಜಕ ಆಲ್​ ಓಕೆ (ಅಲೋಕ್​ ಬಾಬು) ಅವರ ‘ಹ್ಯಾಪಿ ಆಗಿದೆ..’ ಹಾಡನ್ನು ಪ್ಲೇ ಮಾಡುವ ಮೂಲಕ ಕೆಲವು ಆಸ್ಪತ್ರೆಯಲ್ಲಿ ಕೊವಿಡ್​ ಸೋಂಕಿತರನ್ನು ರಂಜಿಸುವ ಪ್ರಯತ್ನ ಮಾಡಲಾಗಿದೆ. ಈ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅಂದಹಾಗೆ, ಈ ಹಾಡಿನ ಸಾಹಿತ್ಯವು ಎಂಥವರಿಗಾದರೂ ಹೊಸ ಚೈತನ್ಯ ಮೂಡಿಸುವಂತಿದೆ. ಜೀವನದಲ್ಲಿ ನಾವು ಯಾವುದೇ ಕಷ್ಟದ ಸಂದರ್ಭದಲ್ಲಿ ಇದ್ದರೂ ಕೂಡ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಸುಮ್ಮನೇ ಬೇಸರ ಮಾಡಿಕೊಂಡರೆ ಅದರಿಂದ ಏನೂ ಉಪಯೋಗ ಇಲ್ಲ. ಎಲ್ಲರಿಗೂ ಒಳ್ಳೆಯ ಕಾಲ ಬಂದೇಬರುತ್ತದೆ ಎನ್ನುವ ಸಂದೇಶವನ್ನು ಸಿಂಪಲ್​ ಸಾಹಿತ್ಯದ ಮೂಲಕ ‘ಹ್ಯಾಪಿ ಆಗಿದೆ..’ ಹಾಡು ವಿವರಿಸುತ್ತದೆ. ತಮ್ಮ ಹಾಡಿನ ಮೂಲಕ ಕೊವಿಡ್ ರೋಗಿಗಳ ಮನದಲ್ಲಿ ಚೈತನ್ಯ ಮೂಡುವಂತಾಗಿರುವುದಕ್ಕೆ ಅಲೋಕ್​ ಸಂತಸ ವ್ಯಕ್ತಪಡಿಸಿದ್ದಾರೆ.

‘ನನಗೆ ಹಾಡಿನ ವೀವ್ಸ್​ ಮತ್ತು ಲೈಕ್ಸ್​ ಸಂಖ್ಯೆ ಮುಖ್ಯವಾಗುವುದಿಲ್ಲ. ಜನರನ್ನು ಕೆಟ್ಟ ಘಟನೆಯಿಂದ ಹೊರಬರುವಂತೆ ಮಾಡಿ, ಅವರೊಳಗೆ ಪಾಸಿಟಿವಿಟಿ ತುಂಬುವಲ್ಲಿ ನನ್ನ ಹಾಡು ಯಶಸ್ವಿಯಾದರೆ ಅದರಿಂದ ನನಗೆ ಇನ್ನಷ್ಟು ಸ್ಫೂರ್ತಿ ಸಿಗುತ್ತದೆ. ಇದರಿಂದ ತೃಪ್ತಿ, ಖುಷಿ ಸಿಗುತ್ತದೆ. ಇದೇ ನನ್ನ ಪ್ರಶಸ್ತಿ. ವೈದ್ಯರು, ಕೊರೊನಾ ವಾರಿಯರ್​ಗಳು ಹಾಗೂ ಫ್ರಂಟ್​ಲೈನ್​ನಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೆ ಹ್ಯಾಟ್ಸಾಫ್​. ಈ ವಿಡಿಯೋ ನೋಡಿ ನಾನು ಭಾವುಕನಾದೆ’ ಎಂದು ಅಲೋಕ್​ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

YouTube video player

(ಯೂಟ್ಯೂಬ್​ನಲ್ಲಿ ಹ್ಯಾಪಿ ಆಗಿದೆ ಸಾಂಗ್​ )

ಇದನ್ನೂ ಓದಿ:

ಪಬ್​ಗಳಲ್ಲಿ ಕನ್ನಡ ಹಾಡು ಹಾಕಿ ಅಂದಿದ್ದಕ್ಕೆ ಸಪೋರ್ಟ್​ ಮಾಡಿದ್ದು ಎಷ್ಟು ಸಾವಿರ ಜನ? ಪಕ್ಕಾ ಲೆಕ್ಕ ಇಲ್ಲಿದೆ!

ಮೊನ್ನೆಯಷ್ಟೇ ಹಾಡಿಗೆ ತಲೆದೂಗಿದ ಯುವತಿ ಇಂದಿಲ್ಲ; ಪುಟ್ಟ ಕಂದನ ಕೂಗು, ಸಾವಿರಾರು ಜನರ ಪ್ರಾರ್ಥನೆಗೆ ದೇವರು ಸಹ ಕಿವಿಗೊಡಲಿಲ್ಲ

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us