ಅಂಬರೀಶ್ ಜನ್ಮದಿನ; ಕಂಠೀರವ ಸ್ಟುಡಿಯೋದಲ್ಲಿ ‘ರೆಬೆಲ್ ಸ್ಟಾರ್’ ಸಮಾಧಿಗೆ ಸುಮಲತಾ, ಅಭಿಷೇಕ್ ಪೂಜೆ
Happy Birthday Ambareesh: ಕೊರೊನಾ ವೈರಸ್ ಹಾವಳಿ ಕಾರಣದಿಂದ ಅಂಬರೀಷ್ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಲು ಸಾಧ್ಯವಾಗುತ್ತಿಲ್ಲ. ಸುಮಲತಾ ಅಂಬರೀಷ್ ಹಾಗೂ ಅಭಿಷೇಕ್ ಅವರು ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
‘ರೆಬೆಲ್ ಸ್ಟಾರ್’ ಅಂಬರೀಷ್ ಅವರು ನಮ್ಮೊಂದಿಗೆ ಇದ್ದಿದ್ದರೆ ಇಂದು (ಮೇ 29) 69ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಅವರ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ದೇಶಾದ್ಯಂತ ಕೊರೊನಾ ವೈರಸ್ ಎರಡನೇ ಅಲೆ ಜೋರಾಗಿರುವ ಕಾರಣ ಎಲ್ಲೆಡೆ ಲಾಕ್ಡೌನ್ ಜಾರಿಯಲ್ಲಿದೆ. ಹಾಗಾಗಿ ಅಂಬರೀಷ್ ಜನ್ಮದಿನವನ್ನು ಸಾರ್ವಜನಿಕವಾಗಿ ಸಂಭ್ರಮಿಸಲು ಸಾಧ್ಯವಾಗುತ್ತಿಲ್ಲ. ಸೋಶಿಯಲ್ ಮೀಡಿಯಾ ಮೂಲಕವೇ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಸುಮಲತಾ ಅಂಬರೀಷ್ ಹಾಗೂ ಅಭಿಷೇಕ್ ಅವರು ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಂಬರೀಷ್ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಹುಟ್ಟುಹಬ್ಬದ ಪ್ರಯುಕ್ತ ಅಂಬಿ ಸಮಾಧಿಗೆ ವಿಶೇಷವಾಗಿ ಪುಷ್ಪಾಲಂಕಾರ ಮಾಡಲಾಗಿತ್ತು. ಹಿರಿಯ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕೂಡ ಜೊತೆಗಿದ್ದರು. ಇಂದು ಅಂಬಿ ಬರ್ತ್ಡೇ ಪ್ರಯುಕ್ತ ಸುಮಲತಾ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಇದನ್ನೂ ಓದಿ:
ಅಂಬರೀಷ್ 69ನೇ ಜನ್ಮದಿನ; ರೆಬೆಲ್ ಸ್ಟಾರ್ ನೆನಪು ಹಂಚಿಕೊಂಡು ದರ್ಶನ್-ಸುದೀಪ್ ವಿಶ್ ಮಾಡಿದ್ದು ಹೇಗೆ?
ಅಂಬರೀಷ್ ಜನ್ಮದಿನದಂದು ಯಾವುದೇ ಸಂಭ್ರಮಾಚರಣೆ ಬೇಡ; ಅಭಿಮಾನಿಗಳಿಗೆ ಸುಮಲತಾ ಮನವಿ