ಕರ್ನಾಟಕದ ಮನೆ ಮತಾಗಿರುವ ಕಿರುತೆರೆ ರೂಪಕಿ ಅನುಶ್ರೀ ಕೊರೊನಾ ನಂತರದ ಜೀವನಕ್ಕಾಗಿ ಭರವಸೆಯೇ ಬೆಳಕು ಎಂಬ ಸಂದೇಶ ವಿಟ್ಟುಕೊಂಡು “ಜೀವನ ಬದಲಾಗಿದೆ -A Song Of Hope” ರಿಲೀಸ್ ಮಾಡಿದ್ದಾರೆ.
ಕೊರೊನಾ ಕಾಲದ ಒಂದೊಂದು ನಿದರ್ಶನಕ್ಕೂ ಅನುಶ್ರೀ ವ್ಯಕ್ತಪಡಿಸಿರುವ ಭಾವನೆಗಳು ನಿಜಕ್ಕೂ ಮನೋಜ್ಞವಾಗಿವೆ. ಕೊರೊನಾದಿಂದಾಗಿ ಟಿವಿ ಶೋಗಳು ಇಲ್ಲದೆ ಅನುಶ್ರೀಯನ್ನು ಮಿಸ್ ಮಾಡಿಕೊಂಡಿದ್ದೇವೆ ಅನ್ನುವ ಅಭಿಮಾನಿಗಳಿಗೆ ಅನುಶ್ರೀ ಇಲ್ಲಿ ನಿರಾಸೆ ಪಡಿಸಿಲ್ಲ.
ಕೊರೊನ ಬಂದಾಗಿಂದ ಎಲ್ಲೆಡೆ ಕಷ್ಟ ಹೆಚ್ಚಾಗಿದೆ, ದುಡ್ಡು ಬೆಲೆ ಕಳೆದುಕೊಂಡಿದೆ, ಕೆಲಸ ಇಲ್ಲದಂತ್ ಆಗಿದೆ, ಒಟ್ಟಾರೆ ಜನ ಜೀವನ ನೋಡುವ ದೃಷ್ಟಿಕೋನವೇ ಬದಲಾಗಿದೆ ಎಂದು ಹೇಳುವ ಮುಖಾಂತರ ಈ ಹೆಮ್ಮಾರಿಯ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಪ್ರೀತಿಯ ಕೃತಜ್ಞತೆ ನೀಡಿದ್ದಾರೆ ನಿಮ್ಮೆಲ್ಲರ ಅಚ್ಚುಮೆಚ್ಚಿನ ಅನು.
Published On - 12:46 pm, Fri, 29 May 20