ಬೆಂಗಳೂರು: ಚಿನಕುರಳಿ ಮಾತಿನ ಹುಡುಗಿಯೆಂದೇ ಖ್ಯಾತಿ ಪಡೆದಿರುವ ಌಂಕರ್ ಅನುಶ್ರೀ ಕುರಿತು ಸ್ಫೋಟಕ ಸುದ್ದಿಯೊಂದು ಬೆಳಕಿಗೆ ಬಂದಿದೆ.
CCB ಅಧಿಕಾರಿಗಳಿಂದ ನೋಟಿಸ್ ಹೋದ ದಿನವೇ ಌಂಕರ್ ಅನುಶ್ರೀ ಘಟಾನುಘಟಿ ರಾಜಕಾರಣಿಗಳಿಗೆ ಕಾಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಂದ ಹಾಗೆ, ಅತಿರಥ ಮಹಾರಥ ನಾಯಕರಿಗೆ ಌಂಕರ್ ಅನುಶ್ರೀ ಕಾಲ್ ಮಾಡಿದ್ದೇಕೆ..? ನಾಯಕರ ಜೊತೆಗೆ ಅನುಶ್ರೀ ಮಾತನಾಡಿದ್ದು ಏನು..? ಅಂತೀರಾ. ಅದರ ಡಿಟೇಲ್ಸ್ ಟಿವಿ 9ಗೆ ಲಭ್ಯವಾಗಿದೆ.
ಭಾಗ್ಯಗಳ ಸರಣಿಯನ್ನೇ ಕೊಟ್ಟ ನಾಯಕನ ಮಗನಿಗೆ ಅನುಶ್ರೀ ಕಾಲ್!
ಌಂಕರ್ ಅನುಶ್ರೀ ತನಿಖೆಯ ಹಲವಾರು ಸ್ಫೋಟಕ ಮಾಹಿತಿ ಟಿವಿ 9ಗೆ ಲಭ್ಯವಾಗಿದೆ. ಸಿಸಿಬಿ ಪೊಲೀಸರು ನೋಟಿಸ್ ನೀಡಿದ ತಕ್ಷಣವೇ ಅನುಶ್ರೀ ತಮ್ಮ ಮೊಬೈಲ್ನಿಂದ ಹಲವು ಪ್ರಭಾವಿಗಳಿಗೆ ಕರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಌಂಕರ್ನ ವಿಚಾರಣೆ ವೇಳೆ ಆಕೆಯ ಹಲವು ಮೊಬೈಲ್ ಸಿಮ್ಗಳನ್ನ ವಶಪಡಿಸಿಕೊಂಡಿದ್ದ ಸಿಸಿಬಿ ಅಧಿಕಾರಿಗಳು ಅದರ ಪರಿಶೀಲನೆ ನಡೆಸಿದ ವೇಳೆ ಈ ಮಾಹಿತಿ ಬೆಳಕಿಗೆ ಬಂದಿದೆ. ಅನುಶ್ರೀ ತನಗೆ ನೋಟಿಸ್ ಬಂದ ದಿನ ಮತ್ತು ಮಾರನೇ ದಿನ ಮೂವರು ಪ್ರಭಾವಿಗಳಿಗೆ ಕರೆ ಮಾಡಿರುವ ವಿಷಯ ಪರಿಶೀಲನೆ ವೇಳೆ ತಿಳಿದುಬಂದಿದೆ.
ನನ್ನನ್ನು ಅಪರಾಧಿಯಾಗಿ ಬಿಂಬಿಸಿದ್ದು ತುಂಬಾ ನೋವು ತಂದಿದೆ –ಅನುಶ್ರೀ ಕಣ್ಣೀರು
ಆ ಮೂವರು ಅತಿರಥ ಮಹಾರಥ ನಾಯಕರಿಗೆ ಕರೆ ಮಾಡಿರುವ ಌಂಕರ್ ಅನುಶ್ರೀ ಬಹಳಷ್ಟು ಕಾಲ ಮಾತುಕತೆ ನಡೆಸಿದ್ದಾರಂತೆ. ಅಂದ ಹಾಗೆ, ಆ ಮೂವರು ಅಂತಿಂಥ ಪ್ರಭಾವಿಗಳಲ್ಲ. ಅವರ ಮೊಬೈಲ್ ನಂಬರ್ ನೋಡಿ ಖುದ್ದು ಸಿಸಿಬಿ ಪೊಲೀಸರಿಗೆ ಶಾಕ್ ಆಗಿದೆ.
ರಾಜ್ಯದ ಮಾಜಿ ಮುಖ್ಯಮಂತ್ರಿಗೆ ಮೊದಲ ನೇರ ಕರೆ!
ಅನುಗೆ ‘ಬಂಡೆ’ಯಂಥಾ ಭದ್ರತೆ..!
ಇನ್ನು, ಪ್ರಭಾವಿ ನಂ. 2 ಮಾಜಿ ಸಿಎಂ ಒಬ್ಬರ ಪುತ್ರ. ಇವರಿಗೂ ಅನುಶ್ರೀ ಕರೆಮಾಡಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ಅನುಶ್ರೀ ಕರೆಮಾಡಿರುವ ಮೂರನೇ ಪ್ರಭಾವಿ ಕರಾವಳಿ ಮೂಲದ ರಾಜ್ಯ ನಾಯಕರು ಎಂದು ಹೇಳಲಾಗಿದೆ. ಇದೆಲ್ಲಾ ಮಾಹಿತಿ ವಿಚಾರಣೆ ವೇಳೆ ನಿರೂಪಕಿಯ ಹಲವು ಸಿಮ್ಗಳನ್ನು ವಶಪಡಿಸಿಕೊಂಡಿದ್ದ ಸಿಸಿಬಿ ಅಧಿಕಾರಿಗಳಿಗೆ ಪರಿಶೀಲನೆ ವೇಳೆ ತಿಳಿದು ಬಂದಿದೆ.
Published On - 3:31 pm, Fri, 2 October 20