ಮೈಸೂರು: ಇಂದು ರೆಬಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬ. ಅವರ ಅಭಿಮಾನಿಗಳು ಅಂಬರೀಶ್ ಹುಟ್ಟುಹಬ್ಬಕ್ಕೆ ಒಂದೊಂದು ರೀತಿ ವಿಶ್ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಆದ್ರೆ ಮೈಸೂರಿನ ಅಂಬರೀಶ್ ಅಭಿಮಾನಿ ಕಲಾವಿದನೊಬ್ಬ ಸಿನಿಮಾ ರೀಲ್ನಲ್ಲಿ ಅಂಬರೀಶ್ ಚಿತ್ರ ಬಿಡಿಸಿ ಹುಟ್ಟು ಹಬ್ಬದ ಶುಭ ಕೋರಿದ್ದಾನೆ.
ಮೈಸೂರಿನ ವಿಷ್ಯೂವಲ್ ಆರ್ಟಿಸ್ಟ್ ಕಲಾವಿದ ಯೋಗನಂದ್ ಕೈಚಳಕದಲ್ಲಿ ಅಂಬರೀಶ್ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಈ ಚಿತ್ರ ಮೂಡಿ ಬರಲು ಕಲಾವಿದ ಎರಡು ದಿನಗಳ ಸಮಯ ತೆಗೆದುಕೊಂಡಿದ್ದು ಸದ್ಯ ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಗಮ್ ಮತ್ತು ರೀಲ್ ಹೊರತುಪಡಿಸಿ ಇನ್ಯಾವುದೇ ವಸ್ತುಗಳನ್ನು ಕಲಾವಿದ ಬಳಸಿಲ್ಲ. ಅಂಬರೀಶ್ ಅಗಲಿ ವರ್ಷ ಕಳೆದರೂ ಈ ರೀತಿಯ ಚಿತ್ರಗಳ ಮೂಲಕ ಜೀವಂತವಾಗಿಸುತ್ತಿದ್ದಾರೆ.
Published On - 1:36 pm, Fri, 29 May 20