AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಲೋಕಸುಂದರಿಯ Balanced Love Life ಅಚ್ಚರಿ ದೃಶ್ಯಾವಳಿಗಳು!

ಮಹಾಮಾರಿ ಕೊರೊನಾ ವೈರಸ್ ಅದ್ಯಾವ ಘಳಿಗೆಯಲ್ಲಿ ಕಾಲಿಡ್ತೋ, ಅಂದಿನಿಂದ ಎಲ್ಲರ ಜೀವನ ಉಲ್ಪಾಪಲ್ಟಾ ಆಗೋಗಿದೆ. ಬಿಂದಾಸ್ ಜೀವನ ನಡೆಸುತ್ತಿದ್ದವರಂತೂ ಎಲ್ಲೂ ಹೋಗದೆ ಮನೆಯಲ್ಲೇ ಲಾಕ್​ ಆಗಿದ್ದಾರೆ. ಶಾಪಿಂಗ್, ಸಿನಿಮಾ, ಜಿಮ್ ಯಾವುದೂ ಇಲ್ಲದೆ ಮನೆಯಲ್ಲೇ ಕುಟುಂಬಸ್ಥರ ಜೊತೆ ಸಮಯ ದೂಡುವಂತಾಗಿದೆ. ಬ್ಯಾಲೆನ್ಸ್ಡ್ ಲವ್ ಲೈಫ್​ನ ಅಚ್ಚರಿ ದೃಶ್ಯಾವಳಿಗಳು! ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್​ ಸಹ ಲಾಕ್​ಡೌನ್ ಸಂದರ್ಭದಲ್ಲಿ ತನ್ನ ಮನೆಯಲ್ಲೇ ವರ್ಕೌಟ್​ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿಯೇ, ಸುಶ್ಮಿತಾ ಸೇನ್ ತನ್ನ ಸಂಗಾತಿ ಜೊತೆ ರೊಮ್ಯಾಂಟಿಕ್  ಆಗಿ ವರ್ಕೌಟ್ […]

ಮಾಜಿ ಲೋಕಸುಂದರಿಯ Balanced Love Life ಅಚ್ಚರಿ ದೃಶ್ಯಾವಳಿಗಳು!
ಸಾಧು ಶ್ರೀನಾಥ್​
|

Updated on:May 30, 2020 | 12:39 PM

Share

ಮಹಾಮಾರಿ ಕೊರೊನಾ ವೈರಸ್ ಅದ್ಯಾವ ಘಳಿಗೆಯಲ್ಲಿ ಕಾಲಿಡ್ತೋ, ಅಂದಿನಿಂದ ಎಲ್ಲರ ಜೀವನ ಉಲ್ಪಾಪಲ್ಟಾ ಆಗೋಗಿದೆ. ಬಿಂದಾಸ್ ಜೀವನ ನಡೆಸುತ್ತಿದ್ದವರಂತೂ ಎಲ್ಲೂ ಹೋಗದೆ ಮನೆಯಲ್ಲೇ ಲಾಕ್​ ಆಗಿದ್ದಾರೆ. ಶಾಪಿಂಗ್, ಸಿನಿಮಾ, ಜಿಮ್ ಯಾವುದೂ ಇಲ್ಲದೆ ಮನೆಯಲ್ಲೇ ಕುಟುಂಬಸ್ಥರ ಜೊತೆ ಸಮಯ ದೂಡುವಂತಾಗಿದೆ.

ಬ್ಯಾಲೆನ್ಸ್ಡ್ ಲವ್ ಲೈಫ್​ನ ಅಚ್ಚರಿ ದೃಶ್ಯಾವಳಿಗಳು! ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್​ ಸಹ ಲಾಕ್​ಡೌನ್ ಸಂದರ್ಭದಲ್ಲಿ ತನ್ನ ಮನೆಯಲ್ಲೇ ವರ್ಕೌಟ್​ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿಯೇ, ಸುಶ್ಮಿತಾ ಸೇನ್ ತನ್ನ ಸಂಗಾತಿ ಜೊತೆ ರೊಮ್ಯಾಂಟಿಕ್  ಆಗಿ ವರ್ಕೌಟ್ ಮಾಡುತ್ತಿರುವ ಹಾಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ರೋಹ್ಮನ್ ಶಾಲ್ ನಾನು ನಿನ್ನನ್ನು ಪ್ರೀತಿಸುತ್ತೇನೆ. ಸ್ಥಿರವಾದ ಸಂಬಂಧಕ್ಕೆ ಸಮತೋಲಿತ, ಸದೃಢ, ಹೊಂದಿಕೊಳ್ಳುವಂತ ಮನಸ್ಸು, ಆಳವಾದ ನಂಬಿಕೆ ಬೇಕು. ಅದಕ್ಕೆ ಇದು ಸಾಂಕೇತವಾಗಿದೆ ಎಂದೂ ತಮ್ಮ ಸಂಬಂಧದ ಬಗ್ಗೆ ಷರಾ ಬರೆದುಕೊಂಡಿದ್ದಾರೆ.

https://www.instagram.com/p/CAsayOpBps5/?utm_source=ig_web_copy_link

29 ವರ್ಷದ ರೋಹ್ಮನ್ ಶಾಲ್ ಎಂಬ ಮಾಡೆಲ್ ಜೊತೆ ಸುಶ್ಮಿತಾ ಸೇನ್ ಜೀವನ ಸಾಗಿಸುತ್ತಿದ್ದಾರೆ. ಇಬ್ಬರೂ ಎರಡು ವರ್ಷಗಳಿಂದ ಡೇಟಿಂಗ್​ನಲ್ಲಿದ್ದಾರೆ. ರೋಹ್ಮನ್ ಸಹ ಸುಶ್ಮಿತಾ ಮತ್ತು ಆಕೆಯ ಮಕ್ಕಳಾದ ರೇನಿ, ಆಲಿಸಾ ಜೊತೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದಾರೆ. ಸುಶ್ಮಿತಾ ಮದುವೆಯಾಗದಿದ್ದರೂ ತಾಯಿಯಾಗಬೇಕೆಂಬ ಬಯಕೆಯಿಂದ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ.

ರೋಹ್ಮನ್  ಜೊತೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಈಗಾಗಲೇ ಹೇಳಿಕೊಂಡಿದ್ದಾರೆ. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಆತನ ಜೊತೆ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋಗಳು, ಹಾಟ್ ಹಾಟ್ ಚಿತ್ರಗಳನ್ನು ಆಗಾಗ ಶೇರ್ ಮಾಡಿಕೊಂಡಿದ್ದಾರೆ.

https://www.instagram.com/tv/B_ShrtmFB8u/?utm_source=ig_web_copy_link

Published On - 11:42 am, Sat, 30 May 20