ಸ್ಪಂದನಾ ಅಂತಿಮ ದರ್ಶನ ಪಡೆದ ಅಶ್ವಿನಿ; ವಿಧಿಯ ಶಪಿಸಿ ಗಳಗಳನೆ ಅತ್ತ ಪುನೀತ್ ಪತ್ನಿ

|

Updated on: Aug 09, 2023 | 10:35 AM

ಸ್ಪಂದನಾ ಕೂಡ ರಾಜ್​ ಫ್ಯಾಮಿಲಿ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಆದರೆ, ಅವರು ಏಕಾಏಕಿ ಮೃತಪಟ್ಟಿದ್ದು ಅನೇಕರಿಗೆ ಶಾಕ್​ ತಂದಿದೆ. ಅಶ್ವಿನಿ ಅವರಿಗೂ ಈ ನೋವು ಸಾಕಷ್ಟು ಕಾಡಿದೆ.

ಡಾ. ರಾಜ್​ಕುಮಾರ್ ಕುಟುಂಬಕ್ಕೆ ಒಂದಾದಮೇಲೆ ಒಂದರಂತೆ ದುಃಖ ಎದುರಾಗುತ್ತಲೇ ಇದೆ. 2021ರ ಅಕ್ಟೋಬರ್ ತಿಂಗಳಲ್ಲಿ ಪುನೀತ್ ರಾಜ್​ಕುಮಾರ್ (Puneeth Rajkumar) ಮೃತಪಟ್ಟರು. ಇದಾದ ಕೆಲವೇ ತಿಂಗಳಲ್ಲಿ ಅಶ್ವಿನಿ ಅವರ ತಂದೆ ರೇವನಾಥ್ ನಿಧನ ಹೊಂದಿದರು. ರಾಜ್ ಕುಟುಂಬದ ಕುಡಿ ಸೂರಜ್ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಈಗ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ ಹೊಂದಿದ್ದಾರೆ. ಈ ನೋವನ್ನು ಅರಗಿಸಿಕೊಳ್ಳೋಕೆ ರಾಜ್ ಫ್ಯಾಮಿಲಿಗೆ ಸಾಧ್ಯವಾಗುತ್ತಿಲ್ಲ. ಸ್ಪಂದನಾ (Spandana) ಅಂತಿಮ ದರ್ಶನ ಪಡೆದ ಅಶ್ವಿನಿ ಪುನೀತ್​ ರಾಜ್​ಕುಮಾರ್ ಕಣ್ಣೀರು ಹಾಕಿದರು.

ಪಾರ್ವತಮ್ಮ ರಾಜ್​ಕುಮಾರ್​ ಅವರ ಸಹೋದರ ಚಿನ್ನೇ ಗೌಡ ಅವರ ಮಕ್ಕಳು ವಿಜಯ್​ ರಾಘವೇಂದ್ರ ಮತ್ತು ಶ್ರೀಮುರಳಿ. ಹೀಗಾಗಿ ರಾಜ್​ ಕುಟುಂಬದ ಜೊತೆಗೆ ಇವರಿಗೆ ನಂಟಿದೆ. ಸ್ಪಂದನಾ ಕೂಡ ರಾಜ್​ ಫ್ಯಾಮಿಲಿ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಆದರೆ, ಅವರು ಏಕಾಏಕಿ ಮೃತಪಟ್ಟಿದ್ದು ಅನೇಕರಿಗೆ ಶಾಕ್​ ತಂದಿದೆ. ಅಶ್ವಿನಿ ಅವರಿಗೂ ಈ ನೋವು ಸಾಕಷ್ಟು ಕಾಡಿದೆ.

ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ಸ್ಪಂದನಾ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಪುನೀತ್ ರಾಜ್​ಕುಮಾರ್ ಕೂಡ ಹೃದಯಾಘಾತದಿಂದ ಮೃತಪಟ್ಟರು. ಕಣ್ಣೆದುರೇ ಅವರನ್ನು ಅಶ್ವಿನಿ ಕಳೆದುಕೊಂಡರು. ಅಶ್ವಿನಿ ಅವರಿಗೆ ಆ ನೋವು ಇನ್ನೂ ಕಡಿಮೆ ಆಗಿಲ್ಲ. ಸ್ಪಂದನಾ ಸಾವು ಮತ್ತಷ್ಟು ನೋವು ಕೊಟ್ಟಿದೆ. ಈ ಕಾರಣಕ್ಕೆ ಅಶ್ವಿನಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ‘ಆಚಾರ್​ ಆ್ಯಂಡ್​ ಕೋ’ ಗೆದ್ದ ಬಳಿಕ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮುಂದೆ ಇದೆ ದೊಡ್ಡ ಸವಾಲು

ಅಶ್ವಿನಿ ಪುನೀತ್ ರಾಜ್​ಕುಮಾರ್ ಮಗಳು ಕೂಡ ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಬಂದಿದ್ದರು. ಅವರು ಕೂಡ ಕಣ್ಣೀರು ಹಾಕಿದ್ದಾರೆ. ಅಂತಿಮ ದರ್ಶನಕ್ಕೆ ಬಂದ ಅನೇಕರು ವಿಜಯ್ ರಾಘವೇಂದ್ರ ಅವರನ್ನು ಸಮಧಾನ ಮಾಡಿದ್ದಾರೆ. ಸದ್ಯ ಈ ವಿಡಿಯೋಗಳು ವೈರಲ್ ಆಗುತ್ತಿವೆ. ವಿಜಯ್ ರಾಘವೇಂದ್ರ ಅವರಿಗೆ ಕುಟುಂಬದವರನ್ನು ಸಂತೈಸುವುದೋ ಅಥವಾ ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳುವುದೋ ಎಂಬುದು ತಿಳಿಯುತ್ತಿಲ್ಲ.

ಇದನ್ನೂ ಓದಿ: ಕಣ್ಣೀರಲ್ಲೇ ಶಾಸ್ತ್ರ ಮಾಡಿದ ವಿಜಯ್ ರಾಘವೇಂದ್ರ; ರಾಘಣ್ಣನ ಸಮಾಧಾನ

ಮಧ್ಯಾಹ್ನ 4 ಗಂಟೆ ವೇಳೆಗೆ ಸ್ಪಂದನಾ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ. ಈಡಿಗರ ಸಂಪ್ರದಾಯದ ಪ್ರಕಾರ ಈ ಅಂತ್ಯ ಸಂಸ್ಕಾರ ನೆರವೇರಲಿದೆ. ಸ್ಯಾಂಡಲ್​​ವುಡ್​ನ ಅನೇಕ ಸೆಲೆಬ್ರಿಟಿಗಳು ಇದಕ್ಕೆ ಸಾಕ್ಷಿ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ