‘ಆಚಾರ್ ಆ್ಯಂಡ್ ಕೋ’ ಗೆದ್ದ ಬಳಿಕ ಅಶ್ವಿನಿ ಪುನೀತ್ ರಾಜ್ಕುಮಾರ್ ಮುಂದೆ ಇದೆ ದೊಡ್ಡ ಸವಾಲು
Ashwini Puneeth Rajkumar: ‘ಪಿಆರ್ಕೆ ಪ್ರೊಡಕ್ಷನ್ಸ್’ ಮೂಲಕ ಮುಂಬರುವ ಸಿನಿಮಾಗಳ ಬಗ್ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೇ ತಮ್ಮ ಎದುರು ಇರುವ ಸವಾಲಿನ ಬಗ್ಗೆಯೂ ಮಾತನಾಡಿದ್ದಾರೆ.
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅವರು ‘ಪಿಆರ್ಕೆ ಪ್ರೊಡಕ್ಷನ್ಸ್’ (PRK Productions) ಆರಂಭಿಸಿದ್ದರು. ಅದರ ಜವಾಬ್ದಾರಿಯನ್ನು ಈಗ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಹೊತ್ತುಕೊಂಡಿದ್ದಾರೆ. ಈ ಬ್ಯಾನರ್ ಮೂಲಕ ನಿರ್ಮಾಣವಾದ ‘ಆಚಾರ್ ಆ್ಯಂಡ್ ಕೋ’ (Achar & Co) ಸಿನಿಮಾ ಗೆದ್ದಿದೆ. ಈಗ ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ಅವರ ಮುಂದೆ ನಿಜವಾದ ಸವಾಲು ಇದೆ. ಏನದು? ಒಳ್ಳೆಯ ಕಥೆ ಮತ್ತು ನಿರ್ದೇಶಕರನ್ನು ಸೆಲೆಕ್ಟ್ ಮಾಡುವುದು. ಅದೇ ದೊಡ್ಡ ಸವಾಲು. ಈ ಬಗ್ಗೆ ‘ಆಚಾರ್ ಆ್ಯಂಡ್ ಕೋ’ ಚಿತ್ರದ ಸಕ್ಸಸ್ ಮೀಟ್ನಲ್ಲಿ ಅವರು ಮಾತನಾಡಿದ್ದಾರೆ. ಸದ್ಯ ‘ಪಿಆರ್ಕೆ ಪ್ರೊಡಕ್ಷನ್ಸ್’ ಮೂಲಕ ಮುಂಬರುವ ಸಿನಿಮಾಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos