Achar And Co Review: ಮೆಟ್ರೋ ಕಾಲಕ್ಕೂ ಅನ್ವಯ ಆಗುವ ರೆಟ್ರೋ ಕಥೆಯ ಸಿನಿಮಾ ‘ಆಚಾರ್​ ಆ್ಯಂಡ್​ ಕೋ’

Achar & Co Review: ‘ಆಚಾರ್​ ಆ್ಯಂಡ್​ ಕೋ’ ಸಿನಿಮಾದಲ್ಲಿ ಅತಿ ಹೆಚ್ಚು ಕಾಡುವುದು ಕಥೆಯಲ್ಲಿನ ಸೂಕ್ಷ್ಮ ವಿಚಾರಗಳು. ಸಿಂಧೂ ಶ್ರೀನಿವಾಸಮೂರ್ತಿ ಅವರು 1960ರ ಕಥೆ ಹೇಳಿದರೂ ಕೂಡ ಈ ಸಿನಿಮಾ 2023ಕ್ಕೂ ಅನ್ವಯ ಆಗುವಂತಿದೆ.

Achar And Co Review: ಮೆಟ್ರೋ ಕಾಲಕ್ಕೂ ಅನ್ವಯ ಆಗುವ ರೆಟ್ರೋ ಕಥೆಯ ಸಿನಿಮಾ ‘ಆಚಾರ್​ ಆ್ಯಂಡ್​ ಕೋ’
‘ಆಚಾರ್​ & ಕೋ’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Jul 26, 2023 | 4:14 PM

ಚಿತ್ರ: ಆಚಾರ್​ ಆ್ಯಂಡ್​ ಕೋ

ನಿರ್ಮಾಣ: ಅಶ್ವಿನಿ ಪುನೀತ್​ ರಾಜ್​ಕುಮಾರ್​

ನಿರ್ದೇಶನ: ಸಿಂಧೂ ಶ್ರೀನಿವಾಸಮೂರ್ತಿ

ಪಾತ್ರವರ್ಗ: ಸಿಂಧೂ ಶ್ರೀನಿವಾಸಮೂರ್ತಿ, ಅಶೋಕ್​, ಸುಧಾ ಬೆಳವಾಡಿ, ಅನಿರುದ್ಧ್​ ಆಚಾರ್ಯ ಮುಂತಾದವರು.

ಸ್ಟಾರ್​: 3/5

ಹೊಸ ಪ್ರತಿಭೆಗಳಿಗೆ ವೇದಿಕೆ ನೀಡಬೇಕು ಎಂಬ ಉದ್ದೇಶದಿಂದ ಆರಂಭ ಆಗಿದ್ದೇ ‘ಪಿಆರ್​ಕೆ ಪ್ರೊಡಕ್ಷನ್ಸ್​’ (PRK Productions) ಸಂಸ್ಥೆ. ಇದು ಪುನೀತ್​ ರಾಜ್​ಕುಮಾರ್​ ಅವರ ಕನಸಿನ ಕೂಸು. ಇದನ್ನು ಈಗ ಅಶ್ವಿನಿ ಪುನೀತ್ ರಾಜ್​ಕುಮಾರ್​ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಸಂಸ್ಥೆಯ ಆಶಯದಂತೆಯೇ ಅನೇಕ ಹೊಸಬರಿಗೆ ಇದರಿಂದ ಅವಕಾಶ ಸಿಗುತ್ತಿದೆ. ‘ಪಿಆರ್​ಕೆ ಪ್ರೊಡಕ್ಷನ್ಸ್​’ ಮೂಲಕ ನಿರ್ಮಾಣ ಆಗಿರುವ ‘ಆಚಾರ್​ ಆ್ಯಂಡ್​ ಕೋ’ (Achar & Co) ಸಿನಿಮಾ ಜುಲೈ 28ರಂದು ತೆರೆಕಾಣುತ್ತಿದೆ. ಈ ಸಿನಿಮಾದಲ್ಲಿ ರೆಟ್ರೋ ಕಾಲದ ಕಥೆ ಇದೆ. ಹಲವು ಹಿರಿಯ-ಕಿರಿಯ ಕಲಾವಿದರ ಸಂಗಮ ಈ ಸಿನಿಮಾದಲ್ಲಿ ಆಗಿದೆ. ಹೊಸ ನಿರ್ದೇಶಕಿ ಸಿಂಧೂ ಶ್ರೀನಿವಾಸಮೂರ್ತಿ (Sindhu Sreenivas Murthy) ಅವರು ಭಿನ್ನ ಅನುಭವ ನೀಡುವಂತಹ ಕಥೆಯನ್ನು ಈ ಚಿತ್ರದಲ್ಲಿ ಹೇಳಿದ್ದಾರೆ. ಒಟ್ಟಾರೆಯಾಗಿ ‘ಆಚಾರ್​ ಆ್ಯಂಡ್​ ಕೋ’ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

ಮೊದಲೇ ಹೇಳಿದಂತೆ ಇದು ರೆಟ್ರೋ ಕಾಲದ ಕಥೆ ಹೊಂದಿರುವ ಸಿನಿಮಾ. 1960ರ ಕಾಲಘಟ್ಟದಲ್ಲಿ ಕಥೆ ಸಾಗುತ್ತದೆ. ಒಂದು ಅವಿಭಕ್ತ ಕುಟುಂಬ. ಮನೆ ತುಂಬ ಮಕ್ಕಳು. ಎಲ್ಲ ಮಕ್ಕಳ ಶಿಕ್ಷಣ, ಉದ್ಯೋಗ, ಮದುವೆಯ ಜವಾಬ್ದಾರಿ ವಹಿಸಿಕೊಂಡ ತಂದೆ ಏಕಾಏಕಿ ನಿಧನರಾದಾಗ ಮನೆಯ ಪರಿಸ್ಥಿತಿ ಬದಲಾಗುತ್ತದೆ. ಮಕ್ಕಳ ಹೆಗಲಿಗೆ ಜವಾಬ್ದಾರಿ ವರ್ಗಾವಣೆ ಆಗುತ್ತದೆ. ಆಗ ಕುಟುಂಬದಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ ಎಂಬುದನ್ನು ಹಾಸ್ಯದ ದಾಟಿಯಲ್ಲಿ ಪ್ರೇಕ್ಷಕರ ಎದುರು ತೆರೆದಿಟ್ಟಿದ್ದಾರೆ ನಿರ್ದೇಶಕಿ ಸಿಂಧೂ ಶ್ರೀನಿವಾಸಮೂರ್ತಿ.

ಮೊದಲ ಪ್ರಯತ್ನದಲ್ಲೇ ಸಿಂಧೂ ಶ್ರೀನಿವಾಸಮೂರ್ತಿ ಅವರು ಗಮನ ಸೆಳೆಯುವಂತಹ ಸಿನಿಮಾ ನೀಡಿದ್ದಾರೆ. ಈ ತಲೆಮಾರಿನ ಯುವ ನಿರ್ದೇಶಕಿಯೊಬ್ಬರು 1960 ಕಾಲಘಟ್ಟದ ಕಥೆಯನ್ನು ಸಂವೇದನಾಶೀಲವಾಗಿ ತೆರೆಗೆ ತಂದಿರುವುದು ಶ್ಲಾಘನೀಯ. ಹಾಸ್ಯವೇ ಈ ಸಿನಿಮಾದ ಜೀವಾಳ. ಅದರ ಜೊತೆಗೆ ಅನೇಕ ಭಾವಗಳು ತುಂಬಿಕೊಂಡಿವೆ. ‘ಆಚಾರ್​ ಆ್ಯಂಡ್​ ಕೋ’ ಕಥೆಯಲ್ಲಿ ಲವ್​ ಸ್ಟೋರಿ ಇದೆ. ಎಮೋಷನಲ್​ ದೃಶ್ಯಗಳೂ ಇವೆ. ಆದರೂ ಅವುಗಳ ನಡುವೆ ಹಾಸ್ಯಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಇದರಿಂದ ಪೂರ್ತಿ ಸಿನಿಮಾದಲ್ಲಿ ಲವಲವಿಕೆ ತುಂಬಿದೆ.

ಇದನ್ನೂ ಓದಿ: Ashwini Puneeth Rajkumar: ಸಿನಿಮಾ ಮಾಡಲು ಕಾದಂಬರಿ ಓದುತ್ತಿರುವ ಅಶ್ವಿನಿ; ಪಾರ್ವತಮ್ಮ ಸಾಗಿದ ಹಾದಿಯಲ್ಲಿ ದೊಡ್ಮನೆ ಸೊಸೆಯ ಸಿನಿಪಯಣ

‘ಆಚಾರ್​ ಆ್ಯಂಡ್​ ಕೋ’ ಸಿನಿಮಾದಲ್ಲಿ ಅನೇಕ ಪಾತ್ರಗಳಿವೆ. ಎಲ್ಲ ಪಾತ್ರಗಳಿಗೂ ಸರಿಯಾದ ಮಹತ್ವ ಸಿಕ್ಕಿದೆ. ಆದರೂ ಅಶೋಕ್​, ಸಿಂಧೂ ಶ್ರೀನಿವಾಸಮೂರ್ತಿ, ಅನಿರುದ್ಧ್​ ಆಚಾರ್ಯ ನಿಭಾಯಿಸಿರುವ ಪಾತ್ರಗಳು ಆಪ್ತ ಎನಿಸುತ್ತವೆ. ತಾಂತ್ರಿಕವಾಗಿ ಸಿನಿಮಾದ ಗುಣಮಟ್ಟ ಮೆಚ್ಚುವಂತಿದೆ. 1960ರಿಂದ 1970ರ ತನಕ ಸಾಗುವ ಕಥೆಯನ್ನು ತೋರಿಸಲು ಕಲಾ ನಿರ್ದೇಶಕ ವಿಶ್ವಾಸ್​ ಕಶ್ಯಪ್​ ಅವರ ಶ್ರಮ ಪ್ರತಿ ಫ್ರೇಮ್​ನಲ್ಲೂ ಕಾಣುತ್ತದೆ. ಆ ಕಾಲದ ಬೆಂಗಳೂರಿಗೆ ಪ್ರೇಕ್ಷಕರನ್ನು ಕರೆದುಕೊಂಡು ಹೋಗುತ್ತೆ ‘ಆಚಾರ್​ ಆ್ಯಂಡ್​ ಕೋ’ ಸಿನಿಮಾ. ಭಿನ್ನವಾದಂತಹ ಹಾಡುಗಳ ಮೂಲಕ ಸಂಗೀತ ನಿರ್ದೇಶಕಿ ಬಿಂಧೂ ಮಾಲಿನಿ ಅವರು ಗಮನ ಸೆಳೆಯುತ್ತಾರೆ. ಅಭಿಮನ್ಯು ಸದಾನಂದನ್​ ಅವರ ಛಾಯಾಗ್ರಹಣಕ್ಕೆ ಚಪ್ಪಾಳೆ ಸಲ್ಲಲೇಬೇಕು.

ಇದನ್ನೂ ಓದಿ: ಅಪ್ಪು, ಅಡುಗೆ ಮತ್ತು ‘ಆಚಾರ್ ಆಂಡ್ ಕೋ’ ಅಶ್ವಿನಿ ಪುನೀತ್ ರಾಜ್​ಕುಮಾರ್ ಮಾತು

ಕಲಾವಿದರ ನಟನೆ ಬಳಿಕ ‘ಆಚಾರ್​ ಆ್ಯಂಡ್​ ಕೋ’ ಸಿನಿಮಾದಲ್ಲಿ ಅತಿ ಹೆಚ್ಚು ಕಾಡುವುದು ಕಥೆಯಲ್ಲಿನ ಸೂಕ್ಷ್ಮ ವಿಚಾರಗಳು. ಸಿಂಧೂ ಶ್ರೀನಿವಾಸಮೂರ್ತಿ ಅವರು 1960ರ ಕಥೆ ಹೇಳಿದರೂ ಕೂಡ ಈ ಸಿನಿಮಾ 2023ಕ್ಕೂ ಅನ್ವಯ ಆಗುವಂತಿದೆ. ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಮುಂತಾದ ವಿಚಾರಗಳ ಬಗ್ಗೆ ಈ ಸಿನಿಮಾ ಮಾತನಾಡುತ್ತದೆ. ಅಂಥ ಪಿಡುಗುಗಳನ್ನು ದಿಟ್ಟವಾಗಿ ಎದುರಿಸುವ ಹೆಣ್ಣು ಮಗಳೊಬ್ಬಳ ಕಥೆ ಈ ಸಿನಿಮಾದಲ್ಲಿದೆ. ಮದುವೆ, ಉದ್ಯೋಗದ ಆಯ್ಕೆ ಮುಂತಾದ ವಿಚಾರಗಳಲ್ಲಿ ಮಧ್ಯಮವರ್ಗದ ಹೆಣ್ಣು ಮಕ್ಕಳು 1960ರಲ್ಲಿ ಎದುರಿಸಿದ ಸವಾಲುಗಳನ್ನು ಈ ಸಿನಿಮಾ ತೋರಿಸುತ್ತದೆ. ಆ ಪರಿಸ್ಥಿತಿ ಇಂದಿಗೂ ಬದಲಾಗಿಲ್ಲವಲ್ಲ ಎಂಬ ಆಲೋಚನೆಯನ್ನು ಪ್ರೇಕ್ಷಕರ ಮನದಲ್ಲಿ ಮೂಡಿಸುವಲ್ಲಿ ‘ಆಚಾರ್​ ಆ್ಯಂಡ್​ ಕೋ’ ಯಶಸ್ವಿ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು