ಅಪ್ಪು, ಅಡುಗೆ ಮತ್ತು ‘ಆಚಾರ್ ಆಂಡ್ ಕೋ’ ಅಶ್ವಿನಿ ಪುನೀತ್ ರಾಜ್​ಕುಮಾರ್ ಮಾತು

Ashwini Puneeth Rajkumar: ಜನಪ್ರಿಯ ಫೂಡ್ ವ್ಲಾಗರ್ ಕೃಪಾಲ್ ಅವರೊಟ್ಟಿಗೆ ಊಟ ಸವಿದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್, ಅಪ್ಪು, ಅಡುಗೆ ಹಾಗೂ ತಮ್ಮ ಸಿನಿಮಾ ಆಚಾರ್ ಆಂಡ್ ಕೋ ಬಗ್ಗೆ ಮಾತನಾಡಿದ್ದಾರೆ.

ಅಪ್ಪು, ಅಡುಗೆ ಮತ್ತು 'ಆಚಾರ್ ಆಂಡ್ ಕೋ' ಅಶ್ವಿನಿ ಪುನೀತ್ ರಾಜ್​ಕುಮಾರ್ ಮಾತು
ಅಶ್ವಿನಿ ಪುನೀತ್ ರಾಜ್​ಕುಮಾರ್
Follow us
ಮಂಜುನಾಥ ಸಿ.
|

Updated on: Jul 25, 2023 | 8:36 PM

ಪಿಆರ್​ಕೆ ಪ್ರೊಡಕ್ಷನ್ಸ್​ನ (PRK Production) ಹೊಸ ಸಿನಿಮಾ ‘ಆಚಾರ್ ಆಂಡ್ ಕೋ’ ಸಿನಿಮಾ ಜುಲೈ 28ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ (Puneeth Rajkumar) ನಿರ್ಮಾಣ ಮಾಡಿದ್ದು, ಸಿಂಧು ನಿರ್ದೇಶನ ಮಾಡಿ ನಟಿಸಿದ್ದಾರೆ ಸಹ. ಹಲವು ಮಹಿಳೆಯರು ಈ ಸಿನಿಮಾದ ಪ್ರಮುಖ ವಿಭಾಗಗಳಲ್ಲಿ ಕೆಲಸ ಮಾಡಿದ್ದು, ಸಿನಿಮಾದ ಪ್ರಚಾರವನ್ನು ತಮ್ಮದೇ ವಿಧಾನದಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಮತ್ತು ಪಿಆರ್​ಕೆ ಪ್ರೊಡಕ್ಷನ್ಸ್ ನಡೆಸುತ್ತಿದೆ.

ಈ ಹಿಂದೆ ಪುನೀತ್ ರಾಜ್​ಕುಮಾರ್ ತಮ್ಮ ‘ಯುವರತ್ನ’ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಕನ್ನಡದ ಜನಪ್ರಿಯ ಫೂಡ್ ವ್ಲಾಗರ್ ಕೃಪಾಲ್ ಅವರೊಟ್ಟಿಗೆ ರೊಟ್ಟಿ ಊಟ ಸವಿಯುತ್ತಾ ಸಂದರ್ಶನವೊಂದನ್ನು ನೀಡಿದ್ದರು. ಆಪ್ತವಾಗಿದ್ದ ಆ ಸಂದರ್ಶನದಲ್ಲಿ ಪುನೀತ್ ತಮ್ಮ ಆಹಾರ ಪ್ರೀತಿಯ ಬಗ್ಗೆ ಮಾತನಾಡಿದ್ದರು. ಈಗ ಅಶ್ವಿನಿ ಪುನೀತ್ ರಾಜ್​ಕುಮಾರ್ ಸಹ ಪುನೀತ್ ಅವರಂತೆಯೇ ಅವರ ನೆಚ್ಚಿನ ಫೂಡ್ ವ್ಲಾಗರ್ ಕೃಪಾಲ್ ಅವರೊಟ್ಟಿಗೆ ನ್ಯೂ ಮಾಡರ್ನ್ ಹೋಟೆಲ್​ನಲ್ಲಿ ಊಟ ಸವಿಯುತ್ತಾ ಸಿನಿಮಾದ ಬಗ್ಗೆ ಆಹಾರದ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಅಪ್ಪು ಅವರ ಅಡುಗೆ ಪ್ರಯೋಗಗಳ ಬಗ್ಗೆ, ತಮ್ಮ ಅಡುಗೆ ಕಲೆಯ ಬಗ್ಗೆ ಆಹಾರ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.

ಅಪ್ಪು ಅವರನ್ನು ಮದುವೆಯಾಗಿ ಬಂದಾಗ ದೊಡ್ಮನೆಯಲ್ಲಿ ಆಹಾರ ವಿಷಯದಲ್ಲಿ ಕಂಡ ಭಿನ್ನತೆ ಬಗ್ಗೆ ಮಾತನಾಡಿದ ಅಶ್ವಿನಿ, ”ನಾವು ಮಾಡುತ್ತಿದ್ದ ಅಡುಗೆ ಬೇರೆ ರೀತಿಯದ್ದು, ಆದರೆ ಮದುವೆ ಆಗಿ ಬಂದಾಗ ಅಪ್ಪು ಮನೆಯಲ್ಲಿ ಬೇರೆಯದ್ದೇ ರೀತಿ ಅಡುಗೆಗಳು ತಯಾರಾಗುತ್ತಿದ್ದವು. ಮುದ್ದೆ, ಸಾಂಬಾರ್ ಕರ್ನಾಟಕ ಹಾಗೂ ತಮಿಳುನಾಡು ಶೈಲಿಯ ಆಹಾರಗಳನ್ನು ಅವರು ಸೇವಿಸುತ್ತಿದ್ದರು. ಮದುವೆ ಆದ ಮೇಲೆಯೇ ನಾನು ಮಂಗಳೂರು ಶೈಲಿಯ ಅಡುಗೆಗಳನ್ನು ಮಾಡುವುದು ಕಲಿತೆ” ಎಂದು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ:ಅಪರೂಪಕ್ಕೆ ಮೈಕ್ ಹಿಡಿದು ಮಾತನಾಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್ ಏನಂದರು?

ಕೋವಿಡ್ ಸಮಯದಲ್ಲಿ ಅಪ್ಪು ಮಾಡುತ್ತಿದ್ದ ಅಡುಗೆ ಪ್ರಯೋಗಗಳನ್ನು ಅಶ್ವಿನಿ ಹಾಗೂ ಕೃಪಾಲ್ ನೆನಪು ಮಾಡಿಕೊಂಡರು. ಅಪ್ಪುಗೆ ಮಸಾಲೆ ಚಿತ್ರನ್ನ ಬಹು ಪ್ರಿಯವಾಗಿತ್ತು ಎಂದರು ಅಶ್ವಿನಿ. ಅಕ್ಕಿ ರೊಟ್ಟಿ, ಕಡುಬು, ಬೇಳೆ ಸಾರು, ಇಡ್ಲಿ-ವಡೆಗಳನ್ನು ಅಶ್ವಿನಿಯವರು ಅಪ್ಪು ಅವರಿಗಾಗಿ ಮಾಡುತ್ತಿದ್ದರಂತೆ. ಇದೆಲ್ಲದರ ಜೊತೆಗೆ ಮಸಾಲೆ ಚಿತ್ರಾನ್ನ ಅಪ್ಪುಗೆ ಬಹಳ ಇಷ್ಟವಂತೆ. ಅಲ್ಲದೆ, ಪ್ರತಿ ಭಾನುವಾರ ಅಶ್ವಿನಿ, ಮನೆಯಲ್ಲಿ ಕಡುಬು, ಚಿಕನ್ ಕರ್ರಿ ಮಾಡುತ್ತಿದ್ದರಂತೆ. ಮಕ್ಕಳಂತೂ ಏನಿದು ಪ್ರತಿದಿನ ಕಡುಬು ಎಂದು ಬೇಸರಪಟ್ಟುಕೊಳ್ಳುತ್ತಿದ್ದರಂತೆ. ಆದರೆ ಅಶ್ವಿನಿ, ಇಲ್ಲ ಇದನ್ನೇ ತಿನ್ನಬೇಕು ಎಂದು ಒತ್ತಾಯಿಸಿ ತಿನ್ನಿಸುತ್ತಿದ್ದರಂತೆ. ಆದರೆ ಪುನೀತ್ ಅವರಿಗೆ ಕಡುಬು, ಶಾವಿಗೆಯನ್ನು ಇಷ್ಟಪಟ್ಟು ತಿನ್ನುತ್ತಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ ಅಶ್ವಿನಿ.

ತಮ್ಮ ಇಷ್ಟದ ಊಟದ ಬಗ್ಗೆ ಮಾತನಾಡುತ್ತಾ, ನನಗೆ ಸ್ನ್ಯಾಕ್ಸ್ ಅಥವಾ ಕುರುಕುಲು ತಿಂಡಿಗಳೆಂದರೆ ಬಹಳ ಇಷ್ಟ. ಎಲ್ಲ ರೀತಿಯ ಆಹಾರಗಳನ್ನು ಸೇವಿಸುತ್ತೇನೆ ಆದರೆ ಮೊಸರನ್ನ ನನ್ನ ಅಚ್ಚುಮೆಚ್ಚು. ಮೊಸರನ್ನ ನನ್ನ ಕಂಫರ್ಟ್​ ಫೂಡ್ ಎಂದು ಬಣ್ಣಿಸಿದ ಅಶ್ವಿನಿ, ಮೊಸರನ್ನದ ಜೊತೆಗೆ ಚಿಪ್ಸ್ ತಿನ್ನುವುದು ಅವರಿಗೆ ಬಹಳ ಇಷ್ಟವಂತೆ. ಅದರ ಜೊತೆಗೆ ಮಿಡಿಗಾಯಿ ಉಪ್ಪಿನಕಾಯಿ ಇದ್ದುಬಿಟ್ಟರೆ ಅಶ್ವಿನಿಯವರಿಗೆ ಅದೇ ಸಾಕು. ತಮ್ಮ ನೆಚ್ಚಿನ ತರಕಾರಿಯ ಬಗ್ಗೆಯೂ ಮಾತನಾಡಿದ ಅಶ್ವಿನಿ, ಬೆಂಡೆಕಾಯಿ ನನಗೆ ಇಷ್ಟ. ಹಾಗಲಕಾಯಿ ಹಾಗೂ ಸೋರೆಕಾಯಿ ನನಗೆ ಇಷ್ಟವಾಗುವುದಿಲ್ಲ ಎಂದರು.

ಒಟ್ಟಾರೆಯಾಗಿ ಊಟವನ್ನು ಸವಿಯುತ್ತಾ, ಅಡುಗೆ ಬಗ್ಗೆ, ಅಪ್ಪು ಬಗ್ಗೆ ಸಿನಿಮಾ ಬಗ್ಗೆ, ಸಿನಿಮಾಗಳಲ್ಲಿ ಮಹಿಳೆಯರ ಪಾತ್ರ, ಪ್ರಾಧಾನ್ಯತೆ ಬಗ್ಗೆ ಮಾತನಾಡಿದರು ಅಶ್ವಿನಿ. ಸಹಜವಾಗಿ ಕ್ಯಾಮೆರಾ ಮುಂದೆ ಕಡಿಮೆ ಮಾತನಾಡುವ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರನ್ನು ಮಾತನಾಡುವಂತೆ ಮಾಡಿದ್ದಾರೆ ಕೃಪಾಲ್. ಅಂದಹಾಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ನಿರ್ಮಿಸಿರುವ ‘ಆಚಾರ್ ಆಂಡ್ ಕೋ’ ಸಿನಿಮಾ ಜುಲೈ 28ಕ್ಕೆ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ