Taj Mahal Movie: ಆರ್. ಚಂದ್ರು ಕಟ್ಟಿದ ಕರುನಾಡಿನ ‘ತಾಜ್ ಮಹಲ್’ಗೆ ಈಗ 15 ವರ್ಷ; ನೆನಪಿದೆಯಾ ಆ ದಿನ?
Krishna Ajay Rao: ಹಲವು ಥಿಯೇಟರ್ಗಳಲ್ಲಿ 200ಕ್ಕೂ ಹೆಚ್ಚು ದಿನ ಪ್ರದರ್ಶನ ಕಂಡಿದ್ದು ‘ತಾಜ್ ಮಹಲ್’ ಸಿನಿಮಾದ ಹೆಚ್ಚುಗಾರಿಕೆ. ಮೊದಲ ನಿರ್ದೇಶನದಲ್ಲೇ ಡಬಲ್ ಸೆಂಚುರಿ ಬಾರಿಸಿದ ಖ್ಯಾತಿ ಆರ್. ಚಂದ್ರು ಅವರಿಗೆ ಸಲ್ಲುತ್ತದೆ.
ನಿರ್ದೇಶಕ ಆರ್. ಚಂದ್ರು (R. Chandru) ಅವರು ಇಂದು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಆದರೆ 15 ವರ್ಷಗಳಿಗೂ ಹಿಂದೆ ಅವರ ಪರಿಚಯ ಎಲ್ಲರಿಗೂ ಇರಲಿಲ್ಲ. ಅವರನ್ನು ಫೇಮಸ್ ಮಾಡಿದ್ದೇ ‘ತಾಜ್ ಮಹಲ್’ (Taj Mahal Movie) ಸಿನಿಮಾ. ಇದು ಚಂದ್ರು ನಿರ್ದೇಶಿಸಿದ್ದ ಮೊದಲ ಸಿನಿಮಾ ಎಂಬುದು ವಿಶೇಷ. ಚೊಚ್ಚಲ ಚಿತ್ರದಲ್ಲೇ ಅವರಿಗೆ ಭರ್ಜರಿ ಗೆಲುವು ಸಿಕ್ಕಿತು. ಈಗ ಆ ಸಿನಿಮಾವನ್ನು ನೆನಪಿಸಿಕೊಳ್ಳಲು ಕಾರಣ ಇದೆ. ಕೃಷ್ಣ ಅಜಯ್ ರಾವ್ (Krishna Ajay Rao), ಪೂಜಾ ಗಾಂಧಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ‘ತಾಜ್ ಮಹಲ್’ ಸಿನಿಮಾ ತೆರೆಕಂಡು ಇಂದಿಗೆ (ಜುಲೈ 25) ಬರೋಬ್ಬರಿ 15 ವರ್ಷ ಕಳೆದಿದೆ. ಇಂದಿಗೂ ಕೂಡ ಕನ್ನಡ ಸಿನಿಪ್ರಿಯರ ಫೇವರಿಟ್ ಲಿಸ್ಟ್ನಲ್ಲಿ ಈ ಚಿತ್ರಕ್ಕೆ ಜಾಗವಿದೆ.
ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಕನಸುಗಳನ್ನು ಕಟ್ಟಿಕೊಂಡು ಒಂದು ಪುಟ್ಟ ಹಳ್ಳಿಯಿಂದ ಬಂದವರು ಆರ್. ಚಂದ್ರು. ಇಂದು ಅವರು ‘ಕಬ್ಜ’ ರೀತಿಯ ಬೃಹತ್ ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಅವರು ಕನ್ನಡ ಚಿತ್ರಕ್ಕೆ ಕಾಲಿಟ್ಟು 16 ವರ್ಷಗಳು ಕಳೆದಿವೆ. ಬೇರೆ ಬೇರೆ ರೀತಿಯ ಸಿನಿಮಾಗಳನ್ನು ಮಾಡಿ ಅವರು ಗಮನ ಸೆಳೆದಿದ್ದಾರೆ. ಮೊದಲ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಚಂದ್ರು ಅವರು ಕನ್ನಡದ ಸಿನಿಪ್ರಿಯರ ಪಾಲಿಗೆ ಭರವಸೆಯ ನಿರ್ದೇಶಕನಾದರು.
ಇದನ್ನೂ ಓದಿ: ಪವನ್ ಕಲ್ಯಾಣ್ ಚಿತ್ರಕ್ಕೆ ಆರ್. ಚಂದ್ರು ನಿರ್ದೇಶನ? ‘ಕಬ್ಜ’ ನೋಡಿ ಮೆಚ್ಚಿಕೊಂಡ ಪವರ್ಸ್ಟಾರ್
ಅದು 2008ರ ಜುಲೈ 25. ಶಿವಶಂಕರ್ ರೆಡ್ಡಿ ನಿರ್ಮಾಣ ಮಾಡಿದ್ದ ‘ತಾಜ್ ಮಹಲ್’ ಸಿನಿಮಾ ತೆರೆಕಂಡಿತ್ತು. ಅದರಲ್ಲಿ ಮುಖ್ಯ ಭೂಮಿಕೆ ಮಾಡಿದ್ದ ಅಜಯ್ ರಾವ್ ಮತ್ತು ಪೂಜಾ ಗಾಂಧಿ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ರಾಜ್ಯಾದ್ಯಂತ ಭರ್ಜರಿಯಾಗಿ ಪ್ರದರ್ಶನ ಕಂಡ ಈ ಸಿನಿಮಾಗೆ ಒಳ್ಳೆಯ ಕಲೆಕ್ಷನ್ ಆಯಿತು. ಹಲವು ಥಿಯೇಟರ್ಗಳಲ್ಲಿ 200ಕ್ಕೂ ಹೆಚ್ಚು ದಿನ ಪ್ರದರ್ಶನ ಕಂಡಿದ್ದು ಈ ಸಿನಿಮಾದ ಹೆಚ್ಚುಗಾರಿಕೆ. ಮೊದಲ ನಿರ್ದೇಶನದ ಸಿನಿಮಾದಲ್ಲೇ ಡಬಲ್ ಸೆಂಚುರಿ ಬಾರಿಸಿದ ಖ್ಯಾತಿ ಆರ್. ಚಂದ್ರು ಅವರಿಗೆ ಸಲ್ಲುತ್ತದೆ.
ಇದನ್ನೂ ಓದಿ: ‘ನನಗೆ ಸಂಭಾವನೆ ಕೊಡುವಾಗ ಅವರು ಅತ್ತರು’; ವೇದಿಕೆ ಮೇಲೆ ಆರ್. ಚಂದ್ರು ಕಾಲೆಳೆದ ಸುದೀಪ್
‘ತಾಜ್ ಮಹಲ್’ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆದವು. ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಅವರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿತು. ಇದೇ ಸಿನಿಮಾ 2010ರಲ್ಲಿ ‘ತಾಜ್ ಮಹಲ್’ ಹೆಸರಿನಲ್ಲೇ ತೆಲುಗಿನಲ್ಲೂ ಬಿಡುಗಡೆ ಆಯಿತು. ಆರ್. ಚಂದ್ರು ಅವರಿಗೆ ಹೊಸ ಹೊಸ ಅವಕಾಶಗಳು ಸಿಕ್ಕವು. ಕನ್ನಡದ ಸ್ಟಾರ್ ನಟರಿಗೆ ಆ್ಯಕ್ಷನ್-ಕಟ್ ಹೇಳುವ ಚಾನ್ಸ್ ಅವರಿಗೆ ಸಿಕ್ಕಿತು. ಈಗ ಅವರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುವಲ್ಲಿ ಬ್ಯುಸಿ ಆಗಿದ್ದಾರೆ. ನಿರ್ಮಾಪಕನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.