Kabzaa Collection: 100 ಕೋಟಿ ರೂಪಾಯಿ ಬಾಚಿದ ‘ಕಬ್ಜ’; 2ನೇ ದಿನಕ್ಕೆ ಕಮಾಲ್ ಮಾಡಿದ ಉಪ್ಪಿ-ಆರ್. ಚಂದ್ರು ಸಿನಿಮಾ
Kabzaa Box Office Collection: ಗಲ್ಲಾಪೆಟ್ಟಿಗೆಯಲ್ಲಿ ‘ಕಬ್ಜ’ ಸಿನಿಮಾ ಧೂಳೆಬ್ಬಿಸುತ್ತಿದೆ. 2ನೇ ದಿನಕ್ಕೆ ಈ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಆ ಮೂಲಕ ದೊಡ್ಡ ಯಶಸ್ಸು ಕಂಡಿದೆ.
ನಿರ್ದೇಶಕ ಆರ್. ಚಂದ್ರು (R. Chandru) ಅವರ 4 ವರ್ಷದ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಬಾಕ್ಸ್ ಆಫೀಸ್ನಲ್ಲಿ ‘ಕಬ್ಜ’ ಸಿನಿಮಾ (Kabzaa Movie) ಧೂಳೆಬ್ಬಿಸುತ್ತಿದೆ. ಮೊದಲ ದಿನ (ಮಾರ್ಚ್ 17) ಭರ್ಜರಿ ಓಪನಿಂಗ್ ಪಡೆದುಕೊಂಡ ಈ ಸಿನಿಮಾ 2ನೇ ದಿನವೂ ಅಬ್ಬರಿಸಿದೆ. ಆ ಮೂಲಕ ನಿರ್ಮಾಪಕರಿಗೆ ಭಾರಿ ಲಾಭ ಮಾಡಿಕೊಟ್ಟಿದೆ. ‘ಕಬ್ಜ’ ಸಿನಿಮಾದ 2ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ರಿಪೋರ್ಟ್ ಲಭ್ಯವಾಗಿದೆ. ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್ (Kabzaa Box Office Collection) ಮಾಡುವ ಮೂಲಕ ಈ ಸಿನಿಮಾ ಜಯಭೇರಿ ಬಾರಿಸಿದೆ. ಉಪೇಂದ್ರ ಅವರ ವೃತ್ತಿಜೀವನದ ಬಹುದೊಡ್ಡ ಸಿನಿಮಾವಾಗಿ ಈ ಚಿತ್ರ ಹೊರಹೊಮ್ಮಿದೆ. ಕಿಚ್ಚ ಸುದೀಪ್, ಶಿವರಾಜ್ಕುಮಾರ್ ಅಭಿಮಾನಿಗಳು ಕೂಡ ಈ ಸಿನಿಮಾ ನೋಡಿ ಫಿದಾ ಆಗಿದ್ದಾರೆ.
ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ‘ಕಬ್ಜ’ ಸಿನಿಮಾ ಮೂಡಿಬಂದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆದ ಈ ಚಿತ್ರ 4 ಸಾವಿರ ಪರದೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ ಬರೋಬ್ಬರಿ 54 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ಈ ಸಿನಿಮಾದ ಹೆಚ್ಚುಗಾರಿಕೆ. ಎರಡೇ ದಿನದ ಕಲೆಕ್ಷನ್ ಸೇರಿ ಒಟ್ಟು 100 ಕೋಟಿ ರೂಪಾಯಿ ಆಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಇದನ್ನೂ ಓದಿ: Kabzaa Movie Review: 1970ರ ಕಾಲಕ್ಕೆ ಕರೆದೊಯ್ಯುವ ‘ಕಬ್ಜ’; ತೆರೆ ಹಿಂದಿನ ಹೀರೋಗಳ ಅದ್ದೂರಿ ಸಿನಿಮಾ
‘ಕಬ್ಜ’ ಚಿತ್ರ ಸೂಪರ್ ಹಿಟ್ ಆಗಲು ಹಲವು ಕಾರಣಗಳಿವೆ. ಆರ್. ಚಂದ್ರು ಅವರ ಶ್ರಮ, ಸ್ಟಾರ್ ಹೀರೋಗಳ ಸಿನಿಮಾ ಎಂಬ ಕ್ರೇಜ್, ತೆರೆ ಹಿಂದಿನ ತಂತ್ರಜ್ಞರ ಕೈಚಳಕ.. ಸೇರಿದಂತೆ ಹಲವು ಅಂಶಗಳಿಂದಾಗಿ ಈ ಸಿನಿಮಾ ವಿಶೇಷ ಎನಿಸಿಕೊಂಡಿದೆ. ಉಪೇಂದ್ರ, ಶಿವರಾಜ್ಕುಮಾರ್, ಕಿಚ್ಚ ಸುದೀಪ್ ಅವರನ್ನು ಒಟ್ಟಿಗೆ ನೋಡಿ ಅಭಿಮಾನಿಗಳಿಗೆ ಥ್ರಿಲ್ ಆಗಿದೆ. ಪರಭಾಷೆಯ ಸೆಲೆಬ್ರಿಟಿಗಳು ಕೂಡ ಈ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.
ಇದನ್ನೂ ಓದಿ: Kabzaa Twitter Review: ‘ಕಬ್ಜ’ ನೋಡಿ ಏನು ಹೇಳ್ತಿದ್ದಾರೆ ಫಸ್ಟ್ ಡೇ ಪ್ರೇಕ್ಷಕರು? ಇಲ್ಲಿದೆ ಟ್ವಿಟರ್ ವಿಮರ್ಶೆ
ಶುಕ್ರವಾರ ಮತ್ತು ಶನಿವಾರ ಮಾತ್ರವಲ್ಲದೇ ಭಾನುವಾರ (ಮಾ.19) ಕೂಡ ‘ಕಬ್ಜ’ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಹೀಗೆಯೇ ಮುಂದುವರಿದರೆ ಈ ಚಿತ್ರ ಹೊಸ ಹೊಸ ದಾಖಲೆಗಳನ್ನು ಬರೆಯಲಿದೆ. ಸಿನಿಮಾದ ಯಶಸ್ಸಿನ ಖುಷಿಯನ್ನು ಹಂಚಿಕೊಳ್ಳಲು ಇಂದು (ಮಾ.19) ಸಂಜೆ 4.30ಕ್ಕೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಕ್ಸಸ್ ಮೀಟ್ ಮಾಡಲಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:06 am, Sun, 19 March 23