Achar & Co: ಪುನೀತ್ ಕನಸಿನ ಕೂಸು ‘ಪಿಆರ್​ಕೆ’ ಬ್ಯಾನರ್​ನಲ್ಲಿ ಹೊಸ ಚಿತ್ರ ಅನೌನ್ಸ್; ‘ಆಚಾರ್ & ಕೋ.’ ವಿಶೇಷತೆಗಳೇನು?

PRK Productions | Ashwini Puneeth Rajkumar: ಹೊಸಬರ ಪ್ರಯತ್ನಗಳಿಗೆ ಬೆನ್ನೆಲುಬಾಗಿ ನಿಲ್ಲುವ ‘ಪಿಆರ್​ಕೆ ಪ್ರೊಡಕ್ಷನ್ಸ್’ ಇದೀಗ ಹೊಸ ಚಿತ್ರವನ್ನು ಅನೌನ್ಸ್ ಮಾಡಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಆಚಾರ್ & ಕೋ.’ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Achar & Co: ಪುನೀತ್ ಕನಸಿನ ಕೂಸು ‘ಪಿಆರ್​ಕೆ’ ಬ್ಯಾನರ್​ನಲ್ಲಿ ಹೊಸ ಚಿತ್ರ ಅನೌನ್ಸ್; ‘ಆಚಾರ್ & ಕೋ.’ ವಿಶೇಷತೆಗಳೇನು?
Follow us
TV9 Web
| Updated By: shivaprasad.hs

Updated on:Apr 06, 2022 | 2:00 PM

ಪುನೀತ್ ರಾಜ್​ಕುಮಾರ್ ಕನಸಿನ ಕೂಸು ಪಿಆರ್​ಕೆ ಪ್ರೊಡಕ್ಷನ್ಸ್ (PRK Productions). ಈ ಬ್ಯಾನರ್​ನಲ್ಲಿ ಈಗಾಗಲೇ ಹಲವು ಚಿತ್ರಗಳು ತೆರೆಕಂಡಿದ್ದು ಸೂಪರ್ ಹಿಟ್ ಆಗಿವೆ. ಹೊಸಬರ ಪ್ರಯತ್ನಗಳಿಗೆ ಬೆನ್ನೆಲುಬಾಗಿ ನಿಲ್ಲುವ ‘ಪಿಆರ್​ಕೆ ಪ್ರೊಡಕ್ಷನ್ಸ್’ ಇದೀಗ ಹೊಸ ಚಿತ್ರವನ್ನು ಅನೌನ್ಸ್ ಮಾಡಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಹೊಸ ಚಿತ್ರದ ಮೂಲಕ ಹಲವು ಹೊಸ ಪ್ರಯತ್ನಕ್ಕೆ ನಿರ್ಮಾಣ ಸಂಸ್ಥೆ ಮುಂದಾಗಿದೆ. ಚಿತ್ರಕ್ಕೆ ‘ಆಚಾರ್ & ಕೋ.’ (Achar & Co.) ಎಂದು ಶೀರ್ಷಿಕೆ ಇಡಲಾಗಿದ್ದು, ಇದು ಯಾವುದರ ಕತೆಯನ್ನು ಒಳಗೊಂಡಿದೆ ಎನ್ನುವುದನ್ನು ಚಿತ್ರತಂಡ ಬಹಿರಂಗಪಡಿಸಿದೆ. 60ರ ದಶಕದ ಬೆಂಗಳೂರಿನಲ್ಲಿ ನಡೆಯುವ ಕತೆ ಇದಾಗಿರಲಿದೆ. ಇದು ಪಿಆರ್​ಕೆ ಪ್ರೊಡಕ್ಷನ್ಸ್​ನಲ್ಲಿ ತಯಾರಾಗುತ್ತಿರುವ ಮೊದಲ ಮಹಿಳಾ ನಿರ್ದೇಶನದ ಚಿತ್ರವಾಗಿದೆ.

ನಿರ್ದೇಶಕಿ ಯಾರು? ಚಿತ್ರತಂಡದಲ್ಲಿ ಯಾರೆಲ್ಲಾ?

ಪಿ.ಆರ್.ಕೆ. ಪ್ರೊಡಕ್ಷನ್ಸ್​ನ 10 ನೇ ಚಿತ್ರವಾಗಿರುವ ‘ಆಚಾರ್ & ಕೋ.’, 60ನೇ ದಶಕದ ಬೆಂಗಳೂರನ್ನು ಪ್ರೇಕ್ಷಕರ ಮುಂದೆ ಕಟ್ಟಿಕೊಡಲಿದೆ. ಪಿಆರ್​ಕೆ ನಿರ್ಮಾಣ ಸಂಸ್ಥೆಯಲ್ಲಿ ಮಹಿಳಾ ನಿರ್ದೇಶಕಿಯೋರ್ವರು ಆಕ್ಷನ್ ಕಟ್ ಹೇಳುತ್ತಿರುವ ಮೊದಲ ಚಿತ್ರ ಇದಾಗಿದೆ. ತಾಂತ್ರಿಕ ವರ್ಗದಲ್ಲೂ ಹಲವು ಮಹಿಳೆಯರಿರುವುದು ವಿಶೇಷ.

‘ಆಚಾರ್ & ಕೋ.’ ಚಿತ್ರಕ್ಕೆ ಸಿಂಧು ಶ್ರೀನಿವಾಸ ಮೂರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಚಿತ್ರ. ಈಗಾಗಲೇ ತಮ್ಮ ಸಂಗೀತ ನಿರ್ದೇಶನದ ಮೂಲಕ ಎಲ್ಲೆಡೆ ಗುರುತಿಸಿಕೊಂಡಿರುವ, ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿರುವ ಬಿಂದುಮಾಲಿನಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಡಾನ್ನಿಲಾ ಕೊರ್ರೆಯಾ ಕಾರ್ಯನಿರ್ವಹಿಸಲಿದ್ದು, ಸ್ಟೈಲಿಸ್ಟ್ ಆಗಿ ಇಂಚರ ಸುರೇಶ್ ಚಿತ್ರತಂಡದಲ್ಲಿದ್ದಾರೆ.

ಪಿಆರ್​ಕೆ ಪ್ರೊಡಕ್ಷನ್ಸ್​ ಟ್ವೀಟ್ ಮೂಲಕ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಮಾಡಿದೆ. ಶೀರ್ಷಿಕೆಯಲ್ಲಿ ‘ಆಚಾರ್ & ಕೋ.’ ಎಂದು ಬರೆಯಲಾಗಿದ್ದು, ಅದಕ್ಕೆ ‘Since 1971’ ಎಂಬ ಟ್ಯಾಗ್​ಲೈನ್ ಇದೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಜತೆಗೆ ಗುರುದತ್ ಎ ತಲ್ವಾರ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಚಿತ್ರದ ಬಗ್ಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಟ್ವೀಟ್:

ಗಮನ ಸೆಳೆಯುವ ಚಿತ್ರಗಳನ್ನು ನೀಡಿರುವ ‘ಪಿಆರ್​ಕೆ ಪ್ರೊಡಕ್ಷನ್ಸ್’:

2017ರಲ್ಲಿ ಸ್ಥಾಪನೆಯಾದ ‘ಪಿಆರ್​ಕೆ ಪ್ರೊಡಕ್ಷನ್ಸ್’ ಬ್ಯಾನರ್​ನಲ್ಲಿ ತಯಾರಾದ ಮೊದಲ ಚಿತ್ರ ‘ಕವಲುದಾರಿ’. 2019ರಲ್ಲಿ ತೆರೆಕಂಡ ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. 2020ರಲ್ಲಿ ಮೂರು ಚಿತ್ರಗಳು ಪಿಆರ್​ಕೆ ವತಿಯಿಂದ ನಿರ್ಮಾಣವಾಗಿ ರಿಲೀಸ್ ಆಗಿದ್ದವು. ‘ಮಾಯಾಬಜಾರ್ 2016’, ‘ಲಾ’ ಹಾಗೂ ‘ಫ್ರೆಂಚ್ ಬಿರಿಯಾನಿ’ ಚಿತ್ರಗಳು ಜನರ ಗಮನಸೆಳೆದಿದ್ದವು.

2022ರಲ್ಲಿ ಈ ನಿರ್ಮಾಣ ಸಂಸ್ಥೆಯ ಎರಡು ಚಿತ್ರಗಳು ನೇರವಾಗಿ ಅಮೆಜಾನ್ ಪ್ರೈಮ್​ನಲ್ಲಿ ರಿಲೀಸ್ ಆಗಿವೆ. ಸತ್ಯ ಪ್ರಕಾಶ್ ನಿರ್ದೇಶನದ ‘ಮ್ಯಾನ್ ಆಫ್ ದಿ ಮ್ಯಾಚ್’ ಇನ್ನಷ್ಟೇ ರಿಲೀಸ್ ಆಗಬೇಕಿದೆ. ಇದಲ್ಲದೆ ‘ಒ2’ ಹಾಗೂ ಪುನೀತ್ ಕಾಣಿಸಿಕೊಂಡಿರುವ ‘ಗಂಧದಗುಡಿ’ಯ ಕೆಲಸಗಳು ಕೂಡ ಭರದಿಂದ ಸಾಗುತ್ತಿವೆ.

ಇದನ್ನೂ ಓದಿ: Gagana Nee: ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಹೊಸ ಹಾಡು ‘ಗಗನ ನೀ..’ ರಿಲೀಸ್​

ಪುನೀತ್​ ಮಾಡಬೇಕಿದ್ದ ಚಿತ್ರದಲ್ಲಿ ಯುವ ರಾಜ್​ಕುಮಾರ್​? ‘ಹೊಂಬಾಳೆ ಫಿಲ್ಮ್ಸ್​’ ಬಗ್ಗೆ ಹಬ್ಬಿದೆ ಗುಸುಗುಸು

Published On - 1:34 pm, Wed, 6 April 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ