‘ಲಿಂಕ್ ಬಂದ ತಕ್ಷಣ ಓಪನ್ ಮಾಡಿ ಅದನ್ನು ನೋಡಬೇಡಿ’: ಪ್ರೇಕ್ಷಕರಲ್ಲಿ ಮನವಿ ಮಾಡಿದ ಆಲ್ ಓಕೆ
Baang Movie Trailer: ‘ಬ್ಯಾಂಗ್’ ಸಿನಿಮಾದ ಒಂದು ಹಾಡಿಗೆ ರ‍್ಯಾಪರ್ ಆಲ್ ಓಕೆ (ಅಲೋಕ್) ಧ್ವನಿ ನೀಡಿದ್ದಾರೆ. ರಿತ್ವಿಕ್ ಮುರಳೀಧರ್ ಅವರು ಸಂಗೀತ ನೀಡಿದ್ದಾರೆ. ಆಗಸ್ಟ್ 18ರಂದು ಈ ಸಿನಿಮಾ ತೆರೆಕಾಣಲಿದೆ.
ರಘು ದೀಕ್ಷಿತ್, ಶಾನ್ವಿ ಶ್ರೀವಾಸ್ತವ (Shanvi Srivastava), ರಿತ್ವಿಕ್ ಮುರಳೀಧರ್, ನಾಟ್ಯರಂಗ, ಸುನೀಲ್ ಗುಜ್ಜಾರ್, ಸಾತ್ವಿಕಾ ಮುಂತಾದವರು ನಟಿಸಿದ ‘ಬ್ಯಾಂಗ್’ (Baang Movie) ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಆಗಸ್ಟ್ 18ರಂದು ಈ ಸಿನಿಮಾ ತೆರೆಕಾಣಲಿದೆ. ಈ ಚಿತ್ರದ ಒಂದು ಹಾಡಿಗೆ ಆಲ್ ಓಕೆ ಅವರು ಧ್ವನಿ ನೀಡಿದ್ದಾರೆ. ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಬಂದಿದ್ದ ಅವರು ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದರು. ‘ಕನ್ನಡ ಸಿನಿಮಾಗಳು ಚೆನ್ನಾಗಿ ಬರುತ್ತಿವೆ. ಆದರೆ ಜನರಿಗೆ ರೀಚ್ ಆಗುತ್ತಿಲ್ಲ ಎಂಬ ದೂರು ಇದೆ. ಸಮಸ್ಯೆ ನಮ್ಮಲೇ ಇದೆ. ಕನ್ನಡ ಸಿನಿಮಾ ಬಂದಾಗ ಕನ್ನಡಿಗರಾದ ನಾವು ಚಿತ್ರಮಂದಿರಲ್ಲೇ ನೋಡಬೇಕು. ಪೈರಸಿ ಲಿಂಕ್ ಬಂದ ತಕ್ಷಣ ನೋಡಬೇಡಿ. ಇಷ್ಟು ಜನರು ಕನಸು ಕಟ್ಟಿಕೊಂಡು ಒಂದು ಸಿನಿಮಾಗೆ ಕೆಲಸ ಮಾಡಿರುತ್ತಾರೆ. ಇನ್ಮುಂದೆ ಕನ್ನಡದಲ್ಲಿ ಇನ್ನೂ ಒಳ್ಳೆಯ ಸಿನಿಮಾಗಳು ಬರುತ್ತವೆ’ ಎಂದು ಆಲ್ ಓಕೆ (All Ok) ಹೇಳಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.