Kannada Rappers: ಕನ್ನಡ ರ್‍ಯಾಪ್ ಲೋಕದಲ್ಲಿ ರ್‍ಯಾಪ್ ವಾರ್, ಆಲ್ ಓಕೆ ವಿರುದ್ಧ ರಾಹುಲ್ ಡಿಟೊ ಪದ ಯುದ್ಧ
ಸಿಡಿ, ಡಿವಿಡಿ ಕಾಲದಲ್ಲಿಯೇ ಪ್ರಾರಂಭವಾದ ಕನ್ನಡ ರ್‍ಯಾಪ್ (Kannada Rap) ಈಗ ಯೂಟ್ಯೂಬ್ ಕಾಲದಲ್ಲಿ ಬೆಳೆದು ನಿಂತಿದೆ. ಚಂದನ್ ಶೆಟ್ಟಿ ಸೇರಿದಂತೆ ಹಲವು ರ್ಯಾಪರ್ಗಳು ಇಂದು ದೊಡ್ಡ ಸೆಲೆಬ್ರಿಟಿಗಳಾಗಿದ್ದಾರೆ. ರಾಕೇಶ್ ಅಡಿಗ (Rakesh Adiga), ಆಲ್ ಓಕೆ (All Ok), ರಾಹುಲ್ ಡಿಟೊ, ಎಂಸಿ ಬಿಜ್ಜು ಇನ್ನೂ ಕೆಲವರು ಜನಪ್ರಿಯ ರ್ಯಾಪರ್ಗಳಾಗಿ ಗುರುತಿಸಿಕೊಂಡಿದ್ದಾರೆ. ಈ ರ್ಯಾಪರ್ಗಳ ಮಧ್ಯೆ ವೈಮನಸ್ಯವೂ ಸಾಕಷ್ಟಿದ್ದು ಅದು ಆಗಾಗ್ಗೆ ಬಹಿರಂಗವಾಗುತ್ತಲೇ ಇರುತ್ತದೆ. ಈ ಬಾರಿ ಆಲ್ ಓಕೆ ವಿರುದ್ಧ ರಾಹುಲ್ ಡಿ ಟೊ […]
ಸಿಡಿ, ಡಿವಿಡಿ ಕಾಲದಲ್ಲಿಯೇ ಪ್ರಾರಂಭವಾದ ಕನ್ನಡ ರ್‍ಯಾಪ್ (Kannada Rap) ಈಗ ಯೂಟ್ಯೂಬ್ ಕಾಲದಲ್ಲಿ ಬೆಳೆದು ನಿಂತಿದೆ. ಚಂದನ್ ಶೆಟ್ಟಿ ಸೇರಿದಂತೆ ಹಲವು ರ್ಯಾಪರ್ಗಳು ಇಂದು ದೊಡ್ಡ ಸೆಲೆಬ್ರಿಟಿಗಳಾಗಿದ್ದಾರೆ. ರಾಕೇಶ್ ಅಡಿಗ (Rakesh Adiga), ಆಲ್ ಓಕೆ (All Ok), ರಾಹುಲ್ ಡಿಟೊ, ಎಂಸಿ ಬಿಜ್ಜು ಇನ್ನೂ ಕೆಲವರು ಜನಪ್ರಿಯ ರ್ಯಾಪರ್ಗಳಾಗಿ ಗುರುತಿಸಿಕೊಂಡಿದ್ದಾರೆ. ಈ ರ್ಯಾಪರ್ಗಳ ಮಧ್ಯೆ ವೈಮನಸ್ಯವೂ ಸಾಕಷ್ಟಿದ್ದು ಅದು ಆಗಾಗ್ಗೆ ಬಹಿರಂಗವಾಗುತ್ತಲೇ ಇರುತ್ತದೆ. ಈ ಬಾರಿ ಆಲ್ ಓಕೆ ವಿರುದ್ಧ ರಾಹುಲ್ ಡಿ ಟೊ ಹಾಡಿನ ಮೂಲಕವೇ ಸರಣಿ ಆರೋಪಗಳನ್ನು ಮಾಡಿದ್ದಾರೆ.
ಈ ಮೊದಲು ಚಂದನ್ ಶೆಟ್ಟಿ ಹಾಗೂ ಆಲ್ ಓಕೆ ನಡುವೆ ವೈಮನಸ್ಯವಿತ್ತು. ಆದರೆ ಕಾಲ ಸರಿದಂತೆ ಇಬ್ಬರು ಹಳೆ ವೈಮನಸ್ಯ ಮರೆತಿದ್ದರು. ಆದರೆ ಈಗ ಆಲ್ ಓಕೆ ಟೀಂನಲ್ಲಿಯೇ ಇದ್ದ ರಾಹುಲ್ ಡಿಟೊ, ಆಲ್ ಓಕೆ ವಿರುದ್ಧ ಸಿಡಿದೆದ್ದಿದ್ದಾರೆ. ನಂಗನ್ಸಿದ್ದು ಪಾರ್ಟ್ 2 ರ್‍ಯಾಪ್ ಆಲ್ಬಂ ಬಿಡುಗಡೆ ಮಾಡಿದ್ದು, ಆಲ್ ನಾಟ್ ಓಕೆ ಹೆಸರಿನ ಹಾಡಿನಲ್ಲಿ ಆಲ್ ಓಕೆ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ.
ನಿನ್ನೆಯಷ್ಟೆ ರಾಹುಲ್ರ ಹಾಡು ಬಿಡುಗಡೆ ಆಗಿದ್ದು, ಕೋರ್ಟ್ ರೂಂನಲ್ಲಿ ಸೆಟ್ಅಪ್ನಲ್ಲಿ ಕಟಕಟೆಯಲ್ಲಿ ನಿಂತ ರಾಹುಲ್, ಎದುರು ಆಲ್ ಓಕೆಯನ್ನು ಹೋಲುವ ವ್ಯಕ್ತಿಯನ್ನು ನಿಲ್ಲಿಸಿ ಆತನ ಮೇಲೆ ಆರೋಪ ಮಾಡುವಂತೆ ಹಾಡು ಕಟ್ಟಿದ್ದಾರೆ.
ಚಂದನ್ ಶೆಟ್ಟಿಯನ್ನು ತುಳಿಯಬೇಕಿತ್ತು, ಅದಕ್ಕೆ ನಿನಗೆ ನಾನು ಬೇಕಿತ್ತು. ಹಲವರನ್ನು ಬಳಸಿಕೊಂಡು ಬಿಸಾಡಿದ್ದೀಯ. ಶೋಗಳಲ್ಲಿ ಬಂದ ಹಣ 50-50 ಎಂದು ಹೇಳುತ್ತಿದ್ದೆ. ಹಣ ಎಲ್ಲಿ ಎಂದು ಕೇಳಿದಾಗ ಮ್ಯಾನೇಜ್ಮೆಂಟ್ ಅವರು ತಗೊಂಡರು ಎಂದು ಸುಳ್ಳು ಹೇಳುತ್ತಿದ್ದೆ. ನನಗೆ ಬರುವ ಸಾಕಷ್ಟು ಹಣವನ್ನು ನೀನು ಕೊಟ್ಟಿಲ್ಲ. ಅದು ನಿನಗೇ ನಾನು ಕೊಡುತ್ತಿರುವ ಭಿಕ್ಷೆ ನೀನೆ ಇಟ್ಟುಕೊ ಎಂದೆಲ್ಲ ಹಾಡಿನ ಸಾಲುಗಳನ್ನು ರಾಹುಲ್ ಡಿಟೊ ಬರೆದು ಹಾಡಿದ್ದಾರೆ.
ರಾಹುಲ್ ಡಿಟೋ ಹೊಸ ರ್‍ಯಾಪ್, ರ್ಯಾಪರ್ಗಳ ಲೋಕದಲ್ಲಿ ಹಲ್-ಚಲ್ ಎಬ್ಬಿಸಿದ್ದು, ಹಲವರು ಈ ಕುರಿತು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸ್ವತಃ ಆಲ್ ಓಕೆ ಸಹ ರಾಹುಲ್ ಡಿಟೋನ ರ್ಯಾಪ್ಗೆ ಪ್ರತಿಕ್ರಿಯಿಸಲು ನಿರ್ಧರಿಸಿದ್ದು ನಾಳೆ (ಮಾರ್ಚ್ 3) ಬೆಳಿಗ್ಗೆ 10 ಗಂಟೆ ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ರಾಹುಲ್ ಡಿಟೋ ರ್‍ಯಾಪ್ ಮೂಲಕ ಮಾಡಿರುವ ಆರೋಪ, ನಿಂದನೆಗೆ ರ್‍ಯಾಪ್ ಮೂಲಕವೇ ಉತ್ತರ ನೀಡುತ್ತಾರಾ ಆಲ್ ಓಕೆ ಕಾದು ನೋಡಬೇಕಿದೆ.
ಕನ್ನಡದಲ್ಲಿ ರ್‍ಯಾಪ್ ಗೆ ದಶಕಕ್ಕೂ ಮಿಗಲಾದ ಇತಿಹಾಸವಿದೆ. ನಟ, ಕಳೆದ ಬಾರಿಯ ಬಿಗ್ಬಾಸ್ ರನ್ನರ್ ಅಪ್ ರಾಕೇಶ್ ಅಡಿಗ ಹಾಗೂ ತಂಡ ಮೊದಲಿಗೆ ಕನ್ನಡದಲ್ಲಿ ರ್‍ಯಾಪ್ ಮಾಡಿತ್ತು. ಅರ್ಬನ್ ಲ್ಯಾಡ್ಸ್ ಹೆಸರಿನ ಈ ರ್‍ಯಾಪ್ ಆಲ್ಬಂ ದೊಡ್ಡ ಹಿಟ್ ಆಗಿತ್ತು. ಆ ಬಳಿಕ ಚಂದನ್ ಶೆಟ್ಟಿ, ಆಲ್ ಓಕೆ, ಎಂಸಿ ಬಿಚ್ಚು, ರಾಹುಲ್ ಇನ್ನೂ ಹಲವರು ರ್ಯಾಪರ್ಗಳಾಗಿ ಜನಪ್ರಿಯತೆಗಳಿಸಿದರು. ಈಗ ಕನ್ನಡದಲ್ಲಿ ಹಲವು ಮಂದಿ ರ್ಯಾಪರ್ಗಳಿದ್ದಾರೆ.