AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tejasswi Prakash: ‘ಕಾಂತಾರ’ ಚಿತ್ರದ ಹಾಡನ್ನು ಕನ್ನಡದಲ್ಲೇ ಹಾಡಿದ ಹಿಂದಿ ನಟಿ; ತೇಜಸ್ವಿ ಪ್ರಕಾಶ್ ವಿಡಿಯೋ ವೈರಲ್

ತೇಜಸ್ವಿ ಪ್ರಕಾಶ್ ಅವರಿಗೆ ಕಿರುತೆರೆ ಲೋಕದಲ್ಲಿ ಅಪಾರ ಅನುಭವ ಇದೆ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 11 ವರ್ಷ ಕಳೆದಿದೆ. ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 67 ಲಕ್ಷ ಮಂದಿ ಹಿಂಬಾಲಿಸುತ್ತಿದ್ದಾರೆ.

Tejasswi Prakash: ‘ಕಾಂತಾರ’ ಚಿತ್ರದ ಹಾಡನ್ನು ಕನ್ನಡದಲ್ಲೇ ಹಾಡಿದ ಹಿಂದಿ ನಟಿ; ತೇಜಸ್ವಿ ಪ್ರಕಾಶ್ ವಿಡಿಯೋ ವೈರಲ್
ತೇಜಸ್ವಿ ಪ್ರಕಾಶ್
Follow us
ರಾಜೇಶ್ ದುಗ್ಗುಮನೆ
|

Updated on:Mar 02, 2023 | 7:57 AM

ನಟಿ ತೇಜಸ್ವಿ ಪ್ರಕಾಶ್ (Tejasswi Prakash) ಅವರು  ‘ಹಿಂದಿ ಬಿಗ್ ಬಾಸ್ ಸೀಸನ್ 15’ರ ವಿನ್ನರ್ ಆದರು. ಅಚ್ಚರಿ ಎಂದರೆ ಮನೆ ಒಳಗೆ ಇದ್ದಾಗಲೇ ಅವರಿಗೆ ‘ನಾಗಿನ್​ 6’ ಧಾರಾವಾಹಿಯ ಆಫರ್ ಸಿಕ್ಕಿತು. ಸದ್ಯ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್ ಒಳ್ಳೆಯ ಟಿಆರ್​ಪಿ ಪಡೆದುಕೊಳ್ಳುತ್ತಿದೆ. ಇದಲ್ಲದೆ, ಮರಾಠಿ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಇವೆಲ್ಲದರ ಜೊತೆ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರೋಕೆ ಹೆಚ್ಚೆಚ್ಚು ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಾರೆ. ಈಗ ಅವರು ಕನ್ನಡಿಗರ ಮನ ಗೆದ್ದಿದ್ದಾರೆ. ‘ಕಾಂತಾರ’ ಚಿತ್ರದ (Kantara Movie) ‘ಕರ್ಮದ ಕಲ್ಲನು..’ ಹಾಡನ್ನು ಕನ್ನಡದಲ್ಲೇ ಹಾಡುವ ಮೂಲಕ ಮೆಚ್ಚುಗೆ ಪಡೆದಿದ್ದಾರೆ.

ತೇಜಸ್ವಿ ಪ್ರಕಾಶ್ ಅವರಿಗೆ ಕಿರುತೆರೆ ಲೋಕದಲ್ಲಿ ಅಪಾರ ಅನುಭವ ಇದೆ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 11 ವರ್ಷ ಕಳೆದಿದೆ. ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 67 ಲಕ್ಷ ಮಂದಿ ಹಿಂಬಾಲಿಸುತ್ತಿದ್ದಾರೆ. ಇದು ಅವರ ಜನಪ್ರಿಯತೆಗೆ ಹಿಡಿದ ಕನ್ನಡಿ. ಈಗ ಅವರು ಹಂಚಿಕೊಂಡಿರುವ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
ಟಿಆರ್​ಪಿ ರೇಸ್​ನಲ್ಲಿ ಅಚ್ಚರಿ ಮೂಡಿಸಿದ ಹೊಸ ಧಾರಾವಾಹಿ; ನಾಲ್ಕೇ ಎಪಿಸೋಡ್​ನಲ್ಲಿ ಆಯ್ತು ಮೋಡಿ
Image
‘ಆಂಟಿ’ ಎಂಬುದನ್ನು ಬೈಗುಳವಾಗಿ ಉಪಯೋಗಿಸಿದೆ; ಬಿಗ್​ ಬಾಸ್​ನಿಂದ ಹೊರಬಂದು ಸತ್ಯ ಬಾಯ್ಬಿಟ್ಟ ನಟಿ
Image
Tejasswi Prakash: ಬಿಗ್​ ಬಾಸ್​ ಫಿನಾಲೆಗೂ ಮುನ್ನವೇ ಸ್ಪರ್ಧಿ ಜೊತೆ ನಡೆದಿತ್ತು ದೊಡ್ಡ ಡೀಲ್​; ಈಗ ಸತ್ಯ ಬಹಿರಂಗ

‘ಕರ್ಮದ ಕಲ್ಲನು ಎಡವಿದ ಮನುಜನ

ಬೆರಳಿನ ಗಾಯವು ಮಾಯದು

ಹಗೆಯಲಿ ಕೋವಿಗೆ ತಲೆ ಕೊಡೊ ಮರುಳರ

ಗುಡಿಯಲಿ ದೈವವು ಕಾಯದು

ಕತ್ತಲನು ಮಣಿಸೋಕೆ ಹಚ್ಚಿ ಇಟ್ಟ ದೀಪ

ಊರನ್ನೇ ಸುಡುವಂತ ಜ್ವಾಲೆ ಆಯಿತೇನೋ..’ ಎಂಬ ಸಾಲುಗಳನ್ನು ಅವರು ಕನ್ನಡದಲ್ಲೇ ಹಾಡಿದ್ದಾರೆ. ಈ ಹಾಡಿನ ಅರ್ಥವನ್ನು ಇಂಗ್ಲಿಷ್​ನಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋ 20 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಇದನ್ನೂ ಓದಿ: Tejasswi Prakash: ಬಿಗ್​ ಬಾಸ್ ವಿಜೇತೆ ತೇಜಸ್ವಿ ಪ್ರಕಾಶ್ ಹೊಸ ಫೋಟೋಶೂಟ್; ನಟಿಯ ಸಿಂಪಲ್​ ಲುಕ್​ಗೆ ಫ್ಯಾನ್ಸ್ ಫಿದಾ

‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಬಾಲಿವುಡ್​ನಲ್ಲೂ ಒಳ್ಳೆಯ ಬಿಸ್ನೆಸ್ ಮಾಡಿದೆ. ಈ ಚಿತ್ರವನ್ನು ನಿರ್ದೇಶನ ಮಾಡಿ, ನಟಿಸಿದ ರಿಷಬ್ ಶೆಟ್ಟಿ ಅವರು ಚಿತ್ರದಿಂದ ಸಖತ್ ಜನಪ್ರಿಯತೆ ಪಡೆದರು. ಈ ಚಿತ್ರದ ಹಾಡುಗಳು ಕೂಡ ಸಾಕಷ್ಟು ಸದ್ದು ಮಾಡಿವೆ. ಹಿಂದಿ ಕಿರುತೆರೆ ನಟಿಯರು ಕೂಡ ಈ ಹಾಡನ್ನು ಗುನುಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ಚಿತ್ರದ ಹಾಡುಗಳು ಸೌಂಡ್ ಮಾಡುತ್ತಿವೆ. ಅಂದಹಾಗೆ, ‘ವರಾಹ ರೂಪಂ..’  ಹಾಡು ವಿವಾದದ ಮೂಲಕ ಸುದ್ದಿ ಆಗಿದೆ. ಈ ಹಾಡಿನ ವಿರುದ್ಧ ಕ್ರತಿಚೌರ್ಯದ ಆರೋಪ ಇದ್ದು, ಪ್ರಕರಣ ಕೋರ್ಟ್​ನಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:10 am, Thu, 2 March 23