ಎಸ್ ಸಿ ಪಿ ಟಿ ಎಸ್ ಪಿಗೆ ಬಿಡುಗಡೆ ಮಾಡಿದ ಅನುದಾನವನ್ನು ಗೃಹ ಲಕ್ಷ್ಮೀ ಯೋಜನೆಗೆ ಬಳಸಿಲ್ಲ: ಹೆಚ್ ಸಿ ಮಹದೇವಪ್ಪ, ಸಮಾಜಕಲ್ಯಾಣ ಸಚಿವ

ಎಸ್ ಸಿ ಪಿ ಟಿ ಎಸ್ ಪಿಗೆ ಬಿಡುಗಡೆ ಮಾಡಿದ ಅನುದಾನವನ್ನು ಗೃಹ ಲಕ್ಷ್ಮೀ ಯೋಜನೆಗೆ ಬಳಸಿಲ್ಲ: ಹೆಚ್ ಸಿ ಮಹದೇವಪ್ಪ, ಸಮಾಜಕಲ್ಯಾಣ ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 31, 2023 | 5:22 PM

ಎಸ್ ಸಿ ಪಿ ಟಿ ಎಸ್ ಪಿ ಗೆ ಶೇಕಡ 24.10 ರಷ್ಟು ಅನುದಾನ ನೀಡಲಾಗಿದೆ, ಅದಕ್ಕಿಂತ ಹೆಚ್ಚು ಹಣ ಬಿಡುಗಡೆಯಾಗಿದ್ದರೆ, ಅದನ್ನು ವಾಪಸ್ಸು ಪಡೆಯಲಾಗುವುದು ಎಂದು ಸಚಿವರು ಹೇಳಿದರು.

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿ ಸ್ಕೀಮ್ ಗಳಿಗೆ ಬೇರೆ ಯೋಜನೆ ಅಥವಾ ಇಲಾಖೆಗಳಿಗೆ ಮೀಸಲಾಗಿರಿಸಿರುವ ಹಣ ಬಳಸಲಾಗಿತ್ತಿದೆಯೇ? ವಿರೋಧ ಪಕ್ಷಗಳ ನಾಯಕರು ಅಂಥದೊಂದು ಅರೋಪವನ್ನು ಕೆಲದಿನಗಳಿಂದ ಮಾಡುತ್ತಿದ್ದಾರೆ. ಇಂದು ವಿಧಾನಸೌಧಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಎಸ್ ಸಿ ಪಿ ಟಿ ಎಸ್ ಪಿ (ಸ್ಪೆಷಲ್ ಕಂಪೋನೆಂಟ್ ಪ್ಲ್ಯಾನ್- ಟ್ರೈಬಲ್ ಸಬ್ ಪ್ಲ್ಯಾನ್) (SCP-TSP) ಸಭೆಯ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹಾದೇವಪ್ಪ (HC Mahadevappa) ಅವರಿಗೆ ಪತ್ರಕರ್ತರು ಎಸ್ ಸಿ ಪಿ ಟಿ ಎಸ್ ಪಿ ಗೆ ಮೀಸಲಿಟ್ಟ ಹಣವನ್ನು ಗೃಹಲಕ್ಷ್ಮೀ ಬಳಸಲಾಗುತ್ತಿದೆಯೇ ಅಂತ ಪ್ರಶ್ನೆ ಕೇಳಿದರು. ಅವರು ಉತ್ತರ ನೀಡುತ್ತಿದ್ದಾಗ, ಸರ್ ನೀವು ಸುಳ್ಳು ಹೇಳುತ್ತಿದ್ದೀರಿ ಅಂತ ನೇರವಾಗಿ ಹೇಳಿದರು. ಪತ್ರಕರ್ತರ ದಾಳಿಯಿಂದ ವಿಚಲಿತರಾಗದ ಮಹದೇವಪ್ಪ, ಇಲ್ಲ, ಹಾಗೇನೂ ಇಲ್ಲ, ಒಂದು ಇಲಾಖೆಗೆ ಬಿಡುಗಡೆ ಮಾಡಿದ ಅನುದಾನ ಬೇರೆ ಯೋಜನೆಗೆ ಬಳಸಲು ಬರೋದಿಲ್ಲ, ಹಾಗಾಗೋದಿಕ್ಕೆ ಸಾಧ್ಯವೇ ಇಲ್ಲ, ನೀವು ಮಾಡುತ್ತಿರುವ ಆರೋಪ ಆಧಾರರಹಿತವಾದದ್ದು. ಎಸ್ ಸಿ ಪಿ ಟಿ ಎಸ್ ಪಿ ಗೆ ಶೇಕಡ 24.10 ರಷ್ಟು ಅನುದಾನ ನೀಡಲಾಗಿದೆ, ಅದಕ್ಕಿಂತ ಹೆಚ್ಚು ಹಣ ಬಿಡುಗಡೆಯಾಗಿದ್ದರೆ, ಅದನ್ನು ವಾಪಸ್ಸು ಪಡೆಯಲಾಗುವುದು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ