ಐದು ದಶಕಗಳಿಂದ ರಾಜಕಾರಣದಲ್ಲಿರುವ ಸಿದ್ದರಾಮಯ್ಯ ಮೈಸೂರಲ್ಲಿ ಈಗ ಸ್ವಂತ ಮನೆ ಕಟ್ಟಿಸುತ್ತಿದ್ದಾರೆ!

ಐದು ದಶಕಗಳಿಂದ ರಾಜಕಾರಣದಲ್ಲಿರುವ ಸಿದ್ದರಾಮಯ್ಯ ಮೈಸೂರಲ್ಲಿ ಈಗ ಸ್ವಂತ ಮನೆ ಕಟ್ಟಿಸುತ್ತಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 31, 2023 | 4:34 PM

ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ ಬಳಿಕ ಸಿದ್ದರಾಮಯ್ಯ ತಮ್ಮ ವಿಶ್ರಾಂತಿ ಜೀವನವನ್ನು ಮೈಸೂರಲ್ಲಿ ಕಟ್ಟಿಸುತ್ತಿರುವ ಮನೆಯಲ್ಲಿ ಕಳೆಯಲಿದ್ದಾರೆ.

ಮೈಸೂರು: ಮೈಸೂರು ಜಿಲ್ಲೆಯವರೇ ಅಗಿದ್ದು, ಎರಡನೇ ಬಾರಿ ಮುಖ್ಯಮಂತ್ರಿ ಮತ್ತು ಹಲವು ಬಾರಿ ಶಾಸಕ-ಸಚಿವರಾಗಿದ್ದ ಸಿದ್ದರಾಮಯ್ಯನವರಿಗೆ (Siddaramaiah) ಇದುವರೆಗೆ ನಗರದಲ್ಲಿ ಒಂದು ಸ್ವಂತ ಮನೆಯಿರಲಿಲ್ಲವೆಂದರೆ (own house) ನಂಬ್ತೀರಾ? ಹೌದು, ಮಾರಾಯ್ರೇ ಅವರು ಮೈಸೂರಲ್ಲಿ ತಮ್ಮ ಸ್ನೇಹಿತನಿಗೆ ಸೇರಿದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಆದರೆ ಈಗ ನಗರದ ಕುವೆಂಪು ನಗರ ಬಡಾವಣೆಯ (Kuvempunagar Layout) ವಿಶ್ವಮಾನವ ಜೋಡಿರಸ್ತೆಯಲ್ಲಿ ಅವರೊಂದು ಒಂದು ದೊಡ್ಡ ಬಂಗ್ಲೆ ಕಟ್ಟಿಸುತ್ತಿದ್ದಾರೆ. ಟಿವಿ9 ಕನ್ನಡ ವಾಹಿನಿ ಮೈಸೂರು ವರದಿಗಾರ ಹೇಳುವ ಪ್ರಕಾರ ಕಳೆದ 3 ವರ್ಷಗಳಿಂದ ಕಟ್ಟಡ ನಿರ್ಮಾಣಕಾರ್ಯ ಜಾರಿಯಲ್ಲಿದೆ. ಸೆಲ್ಲರ್ ಜೊತೆ ಎರಡು ಅಂತಸ್ತಿನ ಮನೆಯನ್ನು ಸಿದ್ದರಾಮಯ್ಯ ಕಟ್ಟಿಸುತ್ತಿದ್ದಾರೆ. ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ ಅಂತ ಹೇಳಲಾಗುತ್ತಿದೆಯಾದರೂ ಯಾವಾಗ ಪೂರ್ಣಗೊಳ್ಳುತ್ತದೆ ಅನ್ನೋದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ ಬಳಿಕ ಸಿದ್ದರಾಮಯ್ಯ ತಮ್ಮ ವಿಶ್ರಾಂತಿ ಜೀವನವನ್ನು ಈ ಮನೆಯಲ್ಲಿ ಕಳೆಯಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ