‘ವಿಪಕ್ಷ ನಾಯಕ ಯಾರು ಅಂತಾ ಕರ್ನಾಟಕದ ಜನತೆ ಕೇಳ್ತಾ ಇದಾರೆ’
Opposition Leader: ವಿರೋಧ ಪಕ್ಷದ ನಾಯಕ ಯಾರು ಅಂತಾ ಜನ ಕೆಳೋದಕ್ಕೆ ಮುಂದಾಗಿದ್ದಾರೆ. ಬಜೆಟ್ ಪಾಸ್ ಆದ್ರು ಕೂಡ ವಿರೋಧ ಪಕ್ಷದ ನಾಯಕ ಆಯ್ಕೆ ಮಾಡಿಲ್ಲ. ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಮತ್ತು ಅವಮಾನ -ಕೃಷ್ಣ ಬೈರೇಗೌಡ
ಕಲಬುರಗಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು (Revenue Minister Krishna Byre Gowda) ಕಲಬುರಗಿ (Kalaburagi) ನಗರದಲ್ಲಿ ಇಂದು (ಜುಲೈ 31) ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಮಳೆ ಹಾನಿ, ಬೆಳೆ ಹಾನಿ, ಕಟ್ಟಡ ಹಾನಿಗಳ ಬಗ್ಗೆ ಕೂಡ ಸರ್ವೆ ಮಾಡಲು ಇಂದು ದಿನಾಂಕ ನಿಗದಿ ಮಾಡುತ್ತೇವೆ. ರಾಜ್ಯದಲ್ಲಿ ಕೆಲವಡೇ ಇನ್ನೂ ಮಳೆಯಾಗುತ್ತಿದೆ. ಹೀಗಾಗಿ ಬೆಳೆ ಹಾನಿ ಸರ್ವೇ ಮಾಡೋದು ಕಷ್ಟಸಾಧ್ಯವಾಗಿದೆ. ಆದರೂ ಒಂದು ವಾರದ ಒಳಗೆ ಬೇಳೆ ಹಾನಿ ಸಮೀಕ್ಷೆ ಪೂರ್ಣ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ರಾಜ್ಯ ಸರ್ಕಾರ ನೆರೆ ನಿರ್ವಹಣೆ ವಿಚಾರದಲ್ಲಿ ವಿಫಲವಾಗಿದೆ ಅನ್ನೋ ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರವನ್ನು ಪ್ರಸ್ತಾಪಿಸಿ ಬಿಜೆಪಿಯವರು ಹತಾಶರಾಗಿದ್ದಾರೆ. ನಮ್ಮ ಸರ್ಕಾರ ಜನರ ನಾಡಿಮಿಡಿತ ಅರಿತು ಕೆಲಸ ಮಾಡುತ್ತಿದೆ. ಬಿಜೆಪಿಯವರ (BJP) ತಮ್ಮ ಮನೆಯ ಹುಳುಕನ್ನ ಮುಚ್ಚಿಕೊಳ್ಳಲು ರಾಜಕೀಯ ಬೇರೆಸ್ತಿದ್ದಾರೆ. ಎರಡೂವರೆ ತಿಂಗಳಾದ್ರು ವಿಧಾನಸಭೆ, ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷ ನಾಯಕನ ಆಯ್ಕೆ ಮಾಡಿಕೊಳ್ಳೊದಕ್ಕೆ ಆಗಿಲ್ಲ. ಅವರ ಮನೆಯ ಹುಳುಕನ್ನ ಮುಚ್ಚಿಕೊಳ್ಳಲು ಪ್ರಚಾರಕ್ಕೆ ಮುಂದಾಗಿದ್ದಾರೆ. ವಿರೋಧ ಪಕ್ಷದ ನಾಯಕ ಯಾರು (Opposition Leader) ಅಂತಾ ಜನ ಕೆಳೋದಕ್ಕೆ ಮುಂದಾಗಿದ್ದಾರೆ. ಬಜೆಟ್ ಪಾಸ್ ಆದ್ರು ಕೂಡ ವಿರೋಧ ಪಕ್ಷದ ನಾಯಕ ಆಯ್ಕೆ ಮಾಡಿಲ್ಲ. ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಮತ್ತು ಅವಮಾನ. ಬಿಜೆಪಿಯವರು ತಮ್ಮ ಮನೆಯನ್ನು ಸರಿ ಮಾಡಿಕೊಳ್ಳಲಿ ಎಂದು ಕೃಷ್ಣ ಬೈರೇಗೌಡ ಕರ್ನಾಟಕ ಬಿಜೆಪಿ ಬಗ್ಗೆ ವ್ಯಂಗ್ಯವಾಡಿದರು.