ಕೊರೊನಾ ಭೀತಿ: 1ತಿಂಗಳು ಮೈಸೂರಿನಲ್ಲೇ ಲಾಕ್ ಡೌನ್ ಆಗಿದ್ದ ಭಾರತಿ ವಿಷ್ಣುವರ್ಧನ್

|

Updated on: Apr 16, 2020 | 4:46 PM

ಬೆಂಗಳೂರು: ಕೊರೊನಾ ಭೀತಿಯಲ್ಲಿ ಲಾಕ್‌ಡೌನ್ ಚಾಲ್ತಿಯಲ್ಲಿರುವ ಹಿನ್ನೆಲೆ ನಟಿ ಭಾರತಿ ವಿಷ್ಣುವರ್ಧನ್ ಮೈಸೂರಿನಲ್ಲೇ ಒಂದು ತಿಂಗಳು ಲಾಕ್ ಡೌನ್ ಆಗಿದ್ದ ಪ್ರಸಂಗ ನಡೆದಿದೆ. ಕೆಲಸದ ನಿಮ್ಮಿತ್ತ ಮೈಸೂರು ತೆರಳಿದ್ದ ಭಾರತಿ ವಿಷ್ಣುವರ್ಧನ್, ಲಾಕ್ ಡೌನ್ ಮುಂದುವರೆದ ಹಿನ್ನೆಲೆ ಮೈಸೂರಿನ ಮನೆಯಲ್ಲೇ ಲಾಕ್ ಆಗಿದ್ದರು. ಅನಾರೋಗ್ಯದ ಕಾರಣ ಬೆಂಗಳೂರಿಗೆ ಹೋಗಲಾಗದ ಪರಿಸ್ಥಿತಿ ಅವರನ್ನು ತೀವ್ರವಾಗಿ ಬಾಧಿಸಿತ್ತು. ಕೊನೆಗೆ ಭಾರತಿ‌ ವಿಷ್ಣುವರ್ಧನ್ ಇದನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್‌ ಅವರಿಗೆ ತಿಳಿಸಿದಾಗ ವಿಷಯ ಇತ್ಯರ್ಥವಾಗಿದೆ. ಸಚಿವ ಸೋಮಶೇಖರ್, […]

ಕೊರೊನಾ ಭೀತಿ: 1ತಿಂಗಳು ಮೈಸೂರಿನಲ್ಲೇ ಲಾಕ್ ಡೌನ್ ಆಗಿದ್ದ ಭಾರತಿ ವಿಷ್ಣುವರ್ಧನ್
Follow us on


ಬೆಂಗಳೂರು:
ಕೊರೊನಾ ಭೀತಿಯಲ್ಲಿ ಲಾಕ್‌ಡೌನ್ ಚಾಲ್ತಿಯಲ್ಲಿರುವ ಹಿನ್ನೆಲೆ ನಟಿ ಭಾರತಿ ವಿಷ್ಣುವರ್ಧನ್ ಮೈಸೂರಿನಲ್ಲೇ ಒಂದು ತಿಂಗಳು ಲಾಕ್ ಡೌನ್ ಆಗಿದ್ದ ಪ್ರಸಂಗ ನಡೆದಿದೆ.
ಕೆಲಸದ ನಿಮ್ಮಿತ್ತ ಮೈಸೂರು ತೆರಳಿದ್ದ ಭಾರತಿ ವಿಷ್ಣುವರ್ಧನ್, ಲಾಕ್ ಡೌನ್ ಮುಂದುವರೆದ ಹಿನ್ನೆಲೆ ಮೈಸೂರಿನ ಮನೆಯಲ್ಲೇ ಲಾಕ್ ಆಗಿದ್ದರು. ಅನಾರೋಗ್ಯದ ಕಾರಣ ಬೆಂಗಳೂರಿಗೆ ಹೋಗಲಾಗದ ಪರಿಸ್ಥಿತಿ ಅವರನ್ನು ತೀವ್ರವಾಗಿ ಬಾಧಿಸಿತ್ತು.
ಕೊನೆಗೆ ಭಾರತಿ‌ ವಿಷ್ಣುವರ್ಧನ್ ಇದನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್‌ ಅವರಿಗೆ ತಿಳಿಸಿದಾಗ ವಿಷಯ ಇತ್ಯರ್ಥವಾಗಿದೆ. ಸಚಿವ ಸೋಮಶೇಖರ್, ಹಿರಿಯ ನಟಿ ಭಾರತಿಗೆ ಪಾಸ್ ಹಾಗೂ ಕಾರಿನ ವ್ಯವಸ್ಥೆ ಮಾಡಿಸಿದ್ದಾರೆ.
ಜಿಲ್ಲಾಡಳಿತದಿಂದ ಪಾಸ್ ಪಡೆದು ಬೆಂಗಳೂರು ತಲುಪಿದ ಭಾರತಿ ಯಾರಿಗೂ ತೊಂದರೆ ಕೊಡಬಾರದು ಅನ್ನೋ ಉದ್ದೇಶದಿಂದ ಮೈಸೂರಿನಲ್ಲೇ ಉಳಿದುಕೊಂಡಿದ್ದೆ. ಆದ್ರೆ ಔಷಧಿಗಳು ಖಾಲಿ ಆಗಿದ್ರಿಂದ ಬೆಂಗಳೂರಿಗೆ ಬರಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದು ಹೇಳಿದ್ದಾರೆ.