ಮುಂಬೈ: ಬಾಲಿವುಡ್ ಬಗ್ಗೆ ಬೇಜವಾಬ್ದಾರಿ, ನಿಂದನಾತ್ಮಕ ಹಾಗೂ ಮಾನಹಾನಿಕರ ಸುದ್ದಿಗಳನ್ನು ಸತತವಾಗಿ ಪ್ರಸಾರ ಮಾಡಿದ್ದ ಎರಡು ರಾಷ್ಟ್ರೀಯ ಸುದ್ದಿವಾಹಿನಿಗಳ ವಿರುದ್ಧ ಚಿತ್ರರಂಗದ ದಿಗ್ಗಜರು ಇದೀಗ ತೊಡೆ ತಟ್ಟಿ ನಿಂತಿದ್ದಾರೆ. ರಿಪಬ್ಲಿಕ್ ಟಿವಿ ಹಾಗೂ ಟೈಮ್ಸ್ ನೌ ರಾಷ್ಟ್ರೀಯ ಸುದ್ದಿವಾಹಿನಿಗಳ ವಿರುದ್ಧ ದೆಹಲಿ ಹೈಕೋರ್ಟ್ನಲ್ಲಿ ಚಿತ್ರರಂಗದ ಹಲವು ನಿರ್ಮಾಣ ಸಂಸ್ಥೆಗಳು ಮತ್ತು ಒಕ್ಕೂಟಗಳು ಕೇಸ್ ದಾಖಲಿಸಿವೆ.
ಬಾಲಿವುಡ್ ದಿಗ್ಗಜರಾದ ಶಾರೂಖ್ ಖಾನ್, ಆಮಿರ್ ಖಾನ್, ಸಲ್ಮಾನ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಸೇರಿದಂತೆ 34 ಪ್ರಮುಖ ನಟರು ಹಾಗೂ ಇತರರಿಗೆ ಸೇರಿರುವ ನಿರ್ಮಾಣ ಸಂಸ್ಥೆಗಳು ಮತ್ತು ಒಕ್ಕೂಟಗಳು ಹೈಕೋರ್ಟ್ ಕದ ತಟ್ಟಿವೆ.
ಬಾಲಿವುಡ್ ಬಗ್ಗೆ ಬೇಜವಾಬ್ದಾರಿ, ನಿಂದನಾತ್ಮಕ ಮತ್ತು ಮಾನಹಾನಿಕರ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಲು ಮನವಿ ಮಾಡಲಾಗಿದೆ. ಬಾಲಿವುಡ್ ವ್ಯಕ್ತಿಗಳ ಬಗ್ಗೆ ಮಾಧ್ಯಮಗಳು ವಿಚಾರಣೆ ನಡೆಸದಂತೆ ನಿರ್ಬಂಧ ಹೇರುವಂತೆ ಸಹ ಮನವಿ ಮಾಡಲಾಗಿದೆ. ಜೊತೆಗೆ, ಬಾಲಿವುಡ್ ವಿರುದ್ಧ ಪ್ರಸಾರ ಮಾಡಿರುವ ಮಾನಹಾನಿಕರ ಕಂಟೆಂಟ್ ವಾಪಸ್ ಪಡೆಯಲು ಸಹ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ರಿಪಬ್ಲಿಕ್ ಸುದ್ದಿವಾಹಿನಿಯ ಜನಪ್ರಿಯ ನಿರೂಪಕ ಆರ್ನಬ್ ಗೋಸ್ವಾಮಿ, ಪ್ರದೀಪ್ ಭಂಡಾರಿ ಹಾಗೂ ಟೈಮ್ಸ್ ನೌ ಸುದ್ದಿವಾಹಿನಿಯ ನಿರೂಪಕರಾದ ನಾವಿಕಾ ಕುಮಾರ್ ಮತ್ತು ರಾಹುಲ್ ಶಿವಶಂಕರ್ ವಿರುದ್ಧ ಕೇಸ್ ದಾಖಲಾಗಿದೆ.
Suit before Delhi HC has the production companies of top Bollywood Khans@iamsrk @aamir_khan @BeingSalmanKhan #BollywoodStrikesBack #DelhiHC https://t.co/jND1qCEYL7
— Bar & Bench (@barandbench) October 12, 2020
Published On - 6:58 pm, Mon, 12 October 20