ಜೈಲು ಹಕ್ಕಿಯಾಗಿರೋ ಸಂಜನಾ ವಿವಾಹಿತೆಯಾ.. ಅವಿವಾಹಿತೆಯಾ..?
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿಯ ಮದುವೆ ಫೋಟೋ ಬಹಿರಂಗಗೊಂಡಿತ್ತು. ನನಗೆ ವಿವಾಹವಾಗಿಲ್ಲ ಎಂದು ಹೇಳುತ್ತಿದ್ದ ನಟಿಯ ಮದುವೆ ಫೋಟೋ ನೋಡಿ ಜನ ಶಾಕ್ ಆಗಿದ್ರು. ಈ ಬಗ್ಗೆ ಸಂಜನಾ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಆದ್ರೆ ಈಗ ಜೈಲು ಹಕ್ಕಿಯಾಗಿರೋ ನಟಿ ಸಂಜನಾ ಗಲ್ರಾನಿ ವಿವಾಹಿತೆಯಾ.. ಅವಿವಾಹಿತೆಯಾ ಎಂಬ ಗೊಂದಲ ಉಂಟಾಗಿದೆ. ಯಾಕಂದ್ರೆ ಈಗಲೂ ತಾನು ಅವಿವಾಹಿತೆ ಎಂದೇ ಸಂಜನಾ ಹೇಳಿಕೊಳ್ಳುತ್ತಿದ್ದಾಳೆ. ಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ […]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿಯ ಮದುವೆ ಫೋಟೋ ಬಹಿರಂಗಗೊಂಡಿತ್ತು. ನನಗೆ ವಿವಾಹವಾಗಿಲ್ಲ ಎಂದು ಹೇಳುತ್ತಿದ್ದ ನಟಿಯ ಮದುವೆ ಫೋಟೋ ನೋಡಿ ಜನ ಶಾಕ್ ಆಗಿದ್ರು. ಈ ಬಗ್ಗೆ ಸಂಜನಾ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ.
ಆದ್ರೆ ಈಗ ಜೈಲು ಹಕ್ಕಿಯಾಗಿರೋ ನಟಿ ಸಂಜನಾ ಗಲ್ರಾನಿ ವಿವಾಹಿತೆಯಾ.. ಅವಿವಾಹಿತೆಯಾ ಎಂಬ ಗೊಂದಲ ಉಂಟಾಗಿದೆ. ಯಾಕಂದ್ರೆ ಈಗಲೂ ತಾನು ಅವಿವಾಹಿತೆ ಎಂದೇ ಸಂಜನಾ ಹೇಳಿಕೊಳ್ಳುತ್ತಿದ್ದಾಳೆ. ಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಕುಮಾರಿ ಸಂಜನಾ ಎಂದು ಉಲ್ಲೇಖಿಸಿದ್ದಾಳೆ. ಹೀಗಾಗಿ ಅರ್ಚನಾ ಅಲಿಯಾಸ್ ಸಂಜನಾ ಗಲ್ರಾನಿ ಈ ನಡೆ ಅಚ್ಚರಿ ಹುಟ್ಟಿಸಿದೆ. ಇನ್ನೂ 4 ದಿನ ಗಲ್ರಾನಿಗೆ ಹೈಕೋರ್ಟ್ನಿಂದ ರಿಲೀಫ್ ಸಿಗಲ್ಲ. ಹೈಕೋರ್ಟ್ ಸಿಸಿಬಿಗೆ ನೋಟಿಸ್ ನೀಡಿ ವಿಚಾರಣೆ ಮುಂದೂಡಿದೆ. ಹಾಗೂ ಅಕ್ಟೋಬರ್ 16ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ.
ಇದನ್ನೂ ಓದಿ: ಸಂಜನಾ ಸೀಕ್ರೆಟ್ ಮದುವೆ ಬಟಾಬಯಲು..! ಯಾರ ಜೊತೆ ಗೊತ್ತಾ? Photo ಇದೆ