ಸಹೋದರರ ದಿನ 2023: ಸ್ಯಾಂಡಲ್​​ವುಡ್​ನ ಸೆಲೆಬ್ರಿಟಿ ಬ್ರದರ್ಸ್ ಬಗ್ಗೆ ನಿಮಗೆಷ್ಟು ಗೊತ್ತು?

Brother‘s Day: ಸ್ಯಾಂಡಲ್​​ವುಡ್​ನಲ್ಲಿ ಸೆಲೆಬ್ರಿಟಿ ಬ್ರದರ್ಸ್​​ ಇದ್ದಾರೆ. ಒಂದೇ ಕುಟುಂಬದ ಅನೇಕರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಸಹೋದರರ ದಿನ 2023: ಸ್ಯಾಂಡಲ್​​ವುಡ್​ನ ಸೆಲೆಬ್ರಿಟಿ ಬ್ರದರ್ಸ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಯಾಂಡಲ್​​ವುಡ್​ ಬ್ರದರ್ಸ್​

Updated on: May 24, 2023 | 12:34 PM

ಇಂದು (ಮೇ 24) ಸಹೋದರರ ದಿನ. ವಿಶ್ವಾದ್ಯಂತ ಇದನ್ನು ಸೆಲೆಬ್ರೇಟ್ ಮಾಡಲಾಗುತ್ತಿದೆ. ಸಹೋದರರಿಗೆ ವಿಶ್ ಮಾಡಿ ಈ ದಿನವನ್ನು ಆಚರಿಸಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಶ್​​ಗಳು ಹರಿದು ಬಂದಿವೆ. ಸಹೋದರರ ದಿನದಂದು ಅನೇಕರು ಸ್ಯಾಂಡಲ್​​ವುಡ್​ನಲ್ಲಿರುವ (Sandalwood) ಸೆಲೆಬ್ರಿಟಿ ಬ್ರದರ್ಸ್​​ನ ನೆನಪು ಮಾಡಿಕೊಳ್ಳುತ್ತಿದ್ದಾರೆ. ಒಂದೇ ಕುಟುಂಬದ ಅನೇಕರು ಚಿತ್ರರಂಗದಲ್ಲಿ (Cinema Industry) ಆ್ಯಕ್ಟೀವ್ ಆಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

  1. ಶಿವರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಸಹೋದರರು. ಅವರ ಮಧ್ಯೆ ಇರುವ ಆಪ್ತತೆ ಕಡಿಮೆ ಆಗುವಂಥದ್ದಲ್ಲ. ಈ ದಿನದಂದು ಪುನೀತ್ ರಾಜ್​ಕುಮಾರ್ ನಮ್ಮ ಜೊತೆ ಇಲ್ಲ ಅನ್ನೋದು ಬೇಸರದ ವಿಚಾರ. ಈ ನೋವು ಎಂದಿಗೂ ಕಡಿಮೆ ಆಗುವುದಲ್ಲ.
  2. ಕೋಮಲ್ ಹಾಗೂ ಜಗ್ಗೇಶ್ ಇಬ್ಬರೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಜಗ್ಗೇಶ್ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು. ಆ ಬಳಿಕ ಕೋಮಲ್ ಎಂಟ್ರಿ ಆಯಿತು. ಕೋಮಲ್ ಚಿತ್ರರಂಗಕ್ಕೆ ಬರಬಾರದು ಎನ್ನುವ  ಉದ್ದೇಶ ಜಗ್ಗೇಶ್​ಗೆ ಇತ್ತು.
  3. ವಿಜಯ್ ರಾಘವೇಂದ್ರ-ಶ್ರೀಮುರಳಿ ಸ್ಯಾಂಡಲ್​ವುಡ್​ನಲ್ಲಿ ತೊಡಗಿಕೊಂಡಿದ್ದಾರೆ. ಶ್ರೀಮುರಳಿ ಮಾಸ್ ಸಿನಿಮಾ ಮೂಲಕ ಫೇಮಸ್ ಆದರೆ, ವಿಜಯ್ ರಾಘವೇಂದ್ರ ಪ್ರಯೋಗಾತ್ಮಕ ಸಿನಿಮಾ ಮಾಡುತ್ತಿದ್ದಾರೆ.
  4. ಸಾಯಿಕುಮಾರ್, ರವಿ ಶಂಕರ್ ಹಾಗೂ ಅಯ್ಯಪ್ಪ ಸಹೋದರರು. ಖಡಕ್ ವಿಲನ್ ಆಗಿ ಮೂವರೂ ಫೇಮಸ್ ಆಗಿದ್ದಾರೆ.
  5. ಅನಂತ್ ನಾಗ್​-ಶಂಕರ್​ ನಾಗ್ ಒಟ್ಟಾಗಿ ಅನೇಕ ಸಿನಿಮಾ ಮಾಡಿದ್ದರು. ಇವರು ಸಹೋದರರು. ಶಂಕರ್ ನಾಗ್ ಅವರು ಈಗ ನಮ್ಮೊಂದಿಗೆ ಇಲ್ಲ.
  6. ರಾಜ್​ಕುಮಾರ್-ವರದರಾಜ್ ಸಹೋದರರು. ವರದರಾಜ್ ಹೋಂ ಬ್ಯಾನರ್ ನೋಡಿಕೊಳ್ಳುತ್ತಿದ್ದರು. ವಜ್ರೇಶ್ವರಿ ಕಂಬೈನ್ಸ್ ಬೆಳೆಯಲು ಅವರ ಕೊಡಗೆ ದೊಡ್ಡದಿದೆ.
  7. ಚಿರಂಜೀವಿ ಸರ್ಜಾ-ಧ್ರುವ ಸರ್ಜಾ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಚಿರಂಜೀವಿ ಅವರು ಕೆಲ ವರ್ಷಗಳ ಹಿಂದೆ ಮೃಪಟ್ಟರು. ಆ ಬಳಿಕ ಧ್ರುವ ಸರ್ಜಾಗೆ ನೋವು ಕಾಡಿದೆ.
  8. ಸಾಧು ಕೋಕಿಲ ಹಾಗೂ ಲಯೇಂದ್ರ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಸಾಧು ಕೋಕಿಲ ಅವರಷ್ಟು ಲಯೇಂದ್ರ ಫೇಮಸ್ ಆಗಿಲ್ಲ.
  9. ರವಿಚಂದ್ರನ್-ಬಾಲಾಜಿ ಸಹೋದರರು. ನಟನಾಗಿ, ನಿರ್ಮಾಪಕನಾಗಿ ರವಿಚಂದ್ರನ್ ಫೇಮಸ್ ಆಗಿದ್ದಾರೆ. ಬಾಲಾಜಿ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:13 pm, Wed, 24 May 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us