ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಸ್ಯಾಂಡಲ್​​ವುಡ್​​​ ನಟ ನಟಿಯರು: ವರುಣಾದಲ್ಲಿ ಇಂದು ಕಲರ್ ಫುಲ್ ಕ್ಯಾಂಪೇನ್

ವರುಣಾ ಕ್ಷೇತ್ರ. ಸದ್ಯ ಹೈವೋಲ್ಟೇಜ್​​​ ಕ್ಷೇತ್ರ. ವರುಣ ಕ್ಷೇತ್ರವೂ ದಿನ ಒಂದಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಇವತ್ತು ಸಹ ವರುಣಾ ವಿಧಾನಸಭಾ ಕ್ಷೇತ್ರ ಸಾಕಷ್ಟು ಕಲರ್ ಫುಲ್ ಆಗಲಿದೆ. ಇದಕ್ಕೆ ಕಾರಣ ವರುಣಾ ಕ್ಷೇತ್ರದಲ್ಲಿ ಸ್ಯಾಂಡಲ್​​ವುಡ್​​​ ನಟ ನಟಿಯರು ಪ್ರಚಾರ ಮಾಡಲಿದ್ದಾರೆ.

ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಸ್ಯಾಂಡಲ್​​ವುಡ್​​​ ನಟ ನಟಿಯರು: ವರುಣಾದಲ್ಲಿ ಇಂದು ಕಲರ್ ಫುಲ್ ಕ್ಯಾಂಪೇನ್
Follow us
ರಮೇಶ್ ಬಿ. ಜವಳಗೇರಾ
|

Updated on:May 04, 2023 | 7:28 AM

ಮೈಸೂರು: ವರುಣಾ ವಿಧಾನಸಭೆ ಕ್ಷೇತ್ರ (Varuna Assembly Constituency) ದಿನೇ ದಿನೇ ರಂಗೇರುತ್ತಿದೆ.‌ ಘಟಾನುಘಟಿ ನಾಯಕರ ನಂತರ ಇದೀಗ ನಟ ನಟಿಯರು ಪ್ರವೇಶ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah )ಅವರು ಇಂದಿನಿಂದ ಎರಡು ದಿನ ವರುಣಾ ಕ್ಷೇತ್ರದಲ್ಲಿ ಪ್ರಚಾರದ ಅಖಾಡಕ್ಕೆ ಧುಮುಕ್ಕಿದ್ದಾರೆ. ಅಲ್ಲದೇ, ಸ್ಯಾಂಡಲ್​ವುಡ್​​ ಸ್ಟಾರ್​ಗಳನ್ನ (Sandalwood Stars) ಕರೆದು ತರುತ್ತಿದ್ದಾರೆ. ಸಿದ್ದರಾಮಯ್ಯ ಜೊತೆ ಎಂಟ್ರಿ ಕೊಡ್ತಿರೋ ಕಲಾವಿದರಿಂದ ವರುಣಾ ಮತ್ತಷ್ಟು ಕಲರ್‌ಪುಲ್ ಆಗಲಿದೆ. ಹೌದು, ವಿಪಕ್ಷ ನಾಯಕ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಲು ಇವತ್ತು ಸ್ಯಾಂಡಲ್‌ವುಡ್ ಚಕ್ರವರ್ತಿ ಡಾ.ಶಿವರಾಜಕುಮಾರ್, ಪತ್ನಿ ಗೀತಾ ಶಿವರಾಜಕುಮಾರ್, ಮೋಹಕತಾರೆ ರಮ್ಯಾ, ಮಾಜಿ ಶಾಸಕ ಮಧು ಬಂಗಾರಪ್ಪ, ಹಾಲಿ ಶಾಸಕರಾದ ಜಮೀರ್ ಅಹಮದ್ ಖಾನ್, ಯತೀಂದ್ರ ಸಿದ್ದರಾಮಯ್ಯ ಅಖಾಡಕ್ಕೆ ಧುಮುಕಲಿದ್ದಾರೆ. ಇವರೆಲ್ಲರೂ ಸಿದ್ದರಾಮಯ್ಯ ಜೊತೆ ಒಟ್ಟಿಗೆ ರೋಡ್ ಶೋ ಮಾಡಲಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಪರ ಮತಯಾಚನೆ ಮಾಡಲಿದ್ದಾರೆ. ಬೆಳಗ್ಗೆ 9 ಗಂಟೆಗೆ ತಾರಾ ಬಳಗದ ರೋಡ್ ಶೋ ಆರಂಭವಾಗಲಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ 12 ಗ್ರಾಮಗಳಲ್ಲಿ ಮತಶಿಕಾರಿ ನಡೆಸಲಿದ್ದಾರೆ.

ಇದನ್ನೂ ಓದಿ: Karnataka Election 2023 Live: ಚುನಾವಣೆಗೆ ಕೇವಲ 6 ದಿನ ಬಾಕಿ, ವರುಣನ ನಡುವೆಯೂ ಭರ್ಜರಿ ಪ್ರಚಾರ

ಈಗಾಗಲೇ ಸಿದ್ದರಾಮಯ್ಯ ವರುಣಾದಲ್ಲಿ ಒಂದು ಬಾರಿ ಬೆಳಗ್ಗೆಯಿಂದ ರಾತ್ರಿವರೆಗೂ ಭರ್ಜರಿ ಪ್ರಚಾರ ನಡೆಸಿದ್ದರು. ಆದ್ರೆ, ಈ ಬಾರಿ ಸಿದ್ದರಾಮಯ್ಯ ಸ್ಟಾರ್ ನಟ, ನಟಿಯರ ಜೊತೆ ಪ್ರಚಾರ ನಡೆಸುತ್ತಿರುವುದು ಪ್ರಚಾರಕ್ಕೆ ತಾರಾ ಮೆರುಗನ್ನ ತಂದುಕೊಡಲಿದೆ. ಹಾಗಾದ್ರೆ, ವರುಣಾದಲ್ಲಿ ಸಿದ್ದರಾಮಯ್ಯ ಜೊತೆ ಸ್ಟಾರ್ಸ್​​​​​​​​​ ಎಲ್ಲೆಲ್ಲಿ ಪ್ರಚಾರ ಮಾಡಲಿದ್ದಾರೆ ಎನ್ನುವುದನ್ನ ನೋಡುವುದಾದರೆ ವರುಣಾ ಕ್ಷೇತ್ರದಿಂದ ರೌಂಡ್ಸ್​​ ಹಾಕುವ ಸ್ಯಾಂಡಲ್​​​​ ವುಡ್​​ ಸ್ಟಾರ್ಸ್​​​​​ ಬೆಳಗ್ಗೆ 9 ಗಂಟೆಗೆ ರಾಂಪುರದಿಂದ ಸಿದ್ದರಾಮಯ್ಯ ಪರ ಮತಶಿಕಾರಿಗೆ ಚಾಲನೆ ನೀಡಲಿದ್ದಾರೆ. ಇದಾದ ಬಳಿಕ ಬೆಳಗ್ಗೆ 10ಕ್ಕೆ ಗೊದ್ದನಪುರ.. ಬೆಳಗ್ಗೆ 10.30ಕ್ಕೆ ಮರಳೂರು, ಬೆಳಗ್ಗೆ 11ಕ್ಕೆ ತಾಂಡವಪುರ ಗ್ರಾಮಗಳಲ್ಲಿ ಅಬ್ಬರಿಸಲಿದ್ದಾರೆ. ಬಳಿಕ ಮಧ್ಯಾಹ್ನ 12 ಕ್ಕೆ ಕೆಂಪಸಿದ್ದನಹುಂಡಿ, ಮಧ್ಯಾಹ್ನ 1ಕ್ಕೆ ಹುಳಿಮಾವು, ಮಧ್ಯಾಹ್ನ 2 ಗಂಟೆಗೆ ಹದಿನಾರು, ಮಧ್ಯಾಹ್ನ 3 ಗಂಟೆಗೆ ಹೊಸಕೋಟೆ ಗ್ರಾಮದಲ್ಲಿ ಮತಯಾಚನೆ ನಡೆಸಲಿದ್ದಾರೆ. ನಂತರ ಸಂಜೆ 4 ಗಂಟೆಗೆ ಸುತ್ತೂರು, ಸಂಜೆ 5 ಗಂಟೆಗೆ ಬಿಳಿಗೆರೆ, ಸಂಜೆ 6 ಗಂಟೆಗೆ ನಗರ್ಲೆ, ರಾತ್ರಿ 7 ಗಂಟೆಗೆ ಮಲ್ಲೂಪುರ ಗ್ರಾಮಗಳಲ್ಲಿ ರೌಂಡ್ಸ್​ ಹಾಕಲಿದ್ದಾರೆ.

21 ಗ್ರಾಮಗಳಲ್ಲಿ ಸೋಮಣ್ಣ ರೌಂಡ್ಸ್​​​​

ಇತ್ತ ಸಿದ್ದರಾಮಯ್ಯ ಖುದ್ದು ಅಖಾಡಕ್ಕೆ ಇಳಿಯದಲ್ಲದೇ, ನಟ-ನಟಿಯರನ್ನು ಸಹ ವರುಣಾಕ್ಕೆ ಕರೆ ತರುತ್ತಿದ್ದಾರೆ. ಅತ್ತ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕೂಡ ವರುಣ ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿ ಮತ ಬೇಟೆ ಮುಂದುವರಿಸಿದ್ದಾರೆ. ಸೋಮಣ್ಣ ಸಹ ಒಂದಲ್ಲ ಎರಡಲ್ಲ ಬರೋಬ್ಬರಿ 21 ಗ್ರಾಮಗಳಲ್ಲಿ ಇವತ್ತು ಮತಯಾಚನೆಗೆ ರೂಟ್​​​ ಸಿದ್ಧಪಡಿಸಿದ್ದಾರೆ.

ಚುನಾವಣೆ ದಿನ ಹತ್ತಿರವಾಗುತ್ತಿದ್ದಂತೆ ವರ್ಣ ವಿಧಾನಸಭಾ ಕ್ಷೇತ್ರ ಸಾಕಷ್ಟು ರಂಗು ಪಡೆದುಕೊಳ್ಳುತ್ತಿದೆ. ಚುನಾವಣೆಗೆ ಕೇವಲ ಆರು ದಿನ ಬಾಕಿ ಇದ್ದು ಮತ್ಯಾವ ಘಟಾನುಘಟಿಗಳು ವರುಣಾ ಕ್ಷೇತ್ರಕ್ಕೆ ಎಂಟ್ರಿ ಕೊಡ್ತಾರೋ ಎಂದು ಕಾದು ನೋಡಬೇಕಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:26 am, Thu, 4 May 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ