ಮಾಸ್ಟರ್ ಆನಂದ್​ಗೆ ವಂಚನೆ; ನಿವೇಶನ ಪಡೆಯಲು ಹೋಗಿ 18 ಲಕ್ಷ ರೂಪಾಯಿ ಕಳೆದುಕೊಂಡ ನಟ

ರಾಮಸಂದ್ರದಲ್ಲಿ 200 ಅಡಿ ವಿಸ್ತೀರ್ಣದ ನಿವೇಶನವನ್ನು ಮಲ್ಟಿ ಲೀಪ್ ವೆಂಚರ್ಸ್ ತೋರಿಸಿತ್ತು. 70 ಲಕ್ಷ ರೂಪಾಯಿಗೆ ಇದನ್ನು ಖರೀದಿಸಲು ಮಾಸ್ಟರ್ ಆನಂದ್ ಒಪ್ಪಿದ್ದರು.

ಮಾಸ್ಟರ್ ಆನಂದ್​ಗೆ ವಂಚನೆ; ನಿವೇಶನ ಪಡೆಯಲು ಹೋಗಿ 18 ಲಕ್ಷ ರೂಪಾಯಿ ಕಳೆದುಕೊಂಡ ನಟ
ಮಾಸ್ಟರ್ ಆನಂದ್

Updated on: Jun 26, 2023 | 10:31 AM

ನಟ ಮಾಸ್ಟರ್ ಆನಂದ್ (Master Anand) ಅವರು ಬಾಲ ಕಲಾವಿದನಾಗಿ ಫೇಮಸ್ ಆದವರು. ಈಗ ಹೀರೋ ಆಗಿ, ಆ್ಯಂಕರ್ ಆಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈಗ ಅವರಿಗೆ ಮಹಾ ಮೋಸ ಆಗಿದೆ. ನಿವೇಶನ ಕೊಡಿಸುವುದಾಗಿ ನಂಬಿಸಿ, 18.5 ಲಕ್ಷ ರೂಪಾಯಿ ವಂಚಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ಚಂದ್ರ ಲೇಔಟ್ ಠಾಣೆಯಲ್ಲಿ ಮಾಸ್ಟರ್ ಆನಂದ್ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಬಿಯುಡಿಎಸ್ ಕಾಯ್ದೆ 2019ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲು ಮಾಡಿಕೊಳ್ಳಲಾಗಿದೆ.

2020ರ ಸೆಪ್ಟೆಂಬರ್​​ನಿಂದ 2021ರ ಅಕ್ಟೋಬರ್ ಅವಧಿಯಲ್ಲಿ ಈ ವಂಚನೆ ನಡೆದಿದೆ. ಮಲ್ಟಿ ಲೀಪ್ ವೆಂಚರ್ಸ್ ಕಂಪೆನಿ ವಿರುದ್ಧ ಮಾಸ್ಟರ್ ಆನಂದ್ ದೂರು ಕೊಟ್ಟಿದ್ದಾರೆ. ಕೊಮ್ಮಘಟ್ಟದ ರಾಮಸಂದ್ರ ಗ್ರಾಮದದಲ್ಲಿ ಆನಂದ್ ನಿವೇಶನ ನೋಡಿದ್ದರು. ಶೂಟಿಂಗ್​ಗಾಗಿ ತೆರಳಿದ್ದ ವೇಳೆ ಇವುಗಳ ವೀಕ್ಷಣೆ ಮಾಡಿದ್ದರು. ನಿವೇಶನ ಖರೀದಿಸಲು ಸಾಲ ಸೌಲಭ್ಯ ಇರುವುದಾಗಿಯೂ ಕಂಪನಿಯವರು ಹೇಳಿದ್ದರು.

ಆ ಬಳಿಕ ರಾಮಸಂದ್ರದಲ್ಲಿ 200 ಅಡಿ ವಿಸ್ತೀರ್ಣದ ನಿವೇಶನವನ್ನು ಮಲ್ಟಿ ಲೀಪ್ ವೆಂಚರ್ಸ್ ತೋರಿಸಿತ್ತು. 70 ಲಕ್ಷ ರೂಪಾಯಿಗೆ ಇದನ್ನು ಖರೀದಿಸಲು ಮಾಸ್ಟರ್ ಆನಂದ್ ಒಪ್ಪಿದ್ದರು. ಮುಂಗಡ ಹಣದ ರೂಪದಲ್ಲಿ 18.5 ಲಕ್ಷ ರೂಪಾಯಿ ನೀಡಿದ್ದರು. ಕಂಪನಿಯವರು ಮಾಸ್ಟರ್ ಆನಂದ್ ಹಾಗು ಪತ್ನಿ ಯಶಸ್ವಿನಿ ಹೆಸರಲ್ಲಿ ಖರೀದಿ ಕರಾರು ಪತ್ರ ಮಾಡಿಕೊಟ್ಟಿದ್ದರು. ಆ ಬಳಿಕ ನಿವೇಶನವನ್ನು ಕಂಪನಿ ಬೇರೆಯವರಿಗೆ ಮಾರಾಟ ಮಾಡಿತ್ತು.

ಇದನ್ನೂ ಓದಿ: ಕಿರುತೆರೆಯಿಂದ ಹಿರಿತೆರೆಗೆ ಮಾಸ್ಟರ್ ಆನಂದ್ ಮಗಳು ವಂಶಿಕಾ; ಮಾತಿನ ಮಲ್ಲಿಗೆ ಸಿನಿಮಾ ಆಫರ್

ಈ ಬಗ್ಗೆ ಮಾಸ್ಟರ್ ಆನಂದ್ ವಿಚಾರಿಸಿದ್ದಾರೆ. ಆದರೆ ಆ ಬಳಿಕ ಯಾವುದೇ ಸ್ಪಂದನೆ ಸಹ ನೀಡದೆ ಮುಂಗಡ ಹಣ ಸಹ ವಾಪಸ್ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ಮಾಸ್ಟರ್ ಆನಂದ್ ಅವರು ದೂರು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us