AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರುತೆರೆಯಿಂದ ಹಿರಿತೆರೆಗೆ ಮಾಸ್ಟರ್ ಆನಂದ್ ಮಗಳು ವಂಶಿಕಾ; ಮಾತಿನ ಮಲ್ಲಿಗೆ ಸಿನಿಮಾ ಆಫರ್

ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ನನ್ನಮ್ಮ ಸೂಪರ್​ಸ್ಟಾರ್​’ ಕಾರ್ಯಕ್ರಮದಲ್ಲಿ ವಂಶಿಕಾ ಮಿಂಚಿದ್ದಳು. ಅವಳು ಮಾಡುವ ತಲೆಹರಟೆ ಕೆಲಸಗಳು, ಅವಳ ಚೂಟಿ ಮಾತುಗಳು ಪ್ರೇಕ್ಷಕರಿಗೆ ಸಖತ್​ ಇಷ್ಟ ಆಗಿತ್ತು.

ಕಿರುತೆರೆಯಿಂದ ಹಿರಿತೆರೆಗೆ ಮಾಸ್ಟರ್ ಆನಂದ್ ಮಗಳು ವಂಶಿಕಾ; ಮಾತಿನ ಮಲ್ಲಿಗೆ ಸಿನಿಮಾ ಆಫರ್
ವಂಶಿಕಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Sep 01, 2022 | 7:09 PM

Share

ಮಾಸ್ಟರ್ ಆನಂದ್ (Master Anand) ಅವರು ನಟನೆ ಹಾಗೂ ಕಿರುತೆರೆಯಲ್ಲಿ ನಿರೂಪಣೆ ಮಾಡುವ ಮೂಲಕ ಫೇಮಸ್ ಆಗಿದ್ದಾರೆ. ಅವರ ಮಗಳು ವಂಶಿಕಾ ಕೂಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾಳೆ. ಸಣ್ಣ ವಯಸ್ಸಿನಲ್ಲೇ ಸಾಕಷ್ಟು ಹೆಸರು ಮಾಡಿದ್ದಾಳೆ. ಅವಳನ್ನು ಕಂಡರೆ ಕಿರುತೆರೆ ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಅವಳ ಚೂಟಿ ಮಾತು ಕೇಳೋಕೆ ಪ್ರೇಕ್ಷಕರು ಇಷ್ಟಪಡುತ್ತಾರೆ. ಈಗ ಅವಳು ಹಿರಿತೆರೆಗೆ ಕಾಲಿಡೋಕೆ ರೆಡಿ ಆಗಿದ್ದಾಳೆ. ಈ ವಿಚಾರ ಕೇಳಿ ವಂಶಿಕಾ (Vanshika) ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಅವಳು ನಟಿಸುತ್ತಿರುವ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ.

ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ನನ್ನಮ್ಮ ಸೂಪರ್​ಸ್ಟಾರ್​’ ಕಾರ್ಯಕ್ರಮದಲ್ಲಿ ವಂಶಿಕಾ ಮಿಂಚಿದ್ದಳು. ಅವಳು ಮಾಡುವ ತಲೆಹರಟೆ ಕೆಲಸಗಳು, ಅವಳ ಚೂಟಿ ಮಾತುಗಳು ಪ್ರೇಕ್ಷಕರಿಗೆ ಸಖತ್​ ಇಷ್ಟ ಆಗಿತ್ತು. ವಂಶಿಕಾ ಮಾತಿಗೆ ಇಳಿದರೆ ಯಾರನ್ನು ಬೇಕಾದರೂ ಸೋಲಿಸುತ್ತಾಳೆ. ‘ನನ್ನಮ್ಮ ಸೂಪರ್​ ಸ್ಟಾರ್​’ ವೇದಿಕೆ ಮೇಲೆ ಅನೇಕರನ್ನು ವಂಶಿಕಾ ಮಾತಿನಲ್ಲೇ ಸೋಲಿಸಿದ್ದಾಳೆ. ಈ ರಿಯಾಲಿಟಿ ಶೋ ಅನ್ನು ಗೆದ್ದಿದ್ದಳು. ಈಗ ‘Love ಲಿ’ ಸಿನಿಮಾದಲ್ಲಿ ಅವಳು ನಟಿಸುತ್ತಿದ್ದಾಳೆ.

ವಸಿಷ್ಠ ಸಿಂಹ ಅವರು ‘love..ಲಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಮೂಲಕ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈಗ ಈ ಚಿತ್ರಕ್ಕೆ ವಂಶಿಕಾ ಕೂಡ ಸೇರ್ಪಡೆ ಆಗಿದ್ದಾಳೆ. ಸೆಪ್ಟೆಂಬರ್ 6ರಿಂದ ವಂಶಿಕಾ ಭಾಗದ ಶೂಟಿಂಗ್ ನಡೆಯಲಿದೆ. ಈ ಚಿತ್ರಕ್ಕೆ ಚೇತನ್ ಕೇಶವ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅವರು ವಂಶಿಕಾ ಪಾತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈಗಾಗಲೇ ಸಿನಿಮಾದ ಶೇ.50ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಸ್ಟೆಫಿ ಪಟೇಲ್ ಈ ಚಿತ್ರಕ್ಕೆ ನಾಯಕಿ.

ಇದನ್ನೂ ಓದಿ
Image
ರಶ್ಮಿಕಾ ರೀತಿಯಲ್ಲಿ ಸೂಪರ್ ಆಗಿ​ ಡಾನ್ಸ್ ಮಾಡಿದ ವಂಶಿಕಾ; ‘ಪುಷ್ಪ ಪಾರ್ಟ್​ 10’ನಲ್ಲಿ ನೀನೇ ಇರ್ತೀಯಾ ಎಂದ ಸೃಜನ್
Image
‘ಮಗಳು ವಂಶಿಕಾಳಿಂದ ಜನರು ನನ್ನನ್ನು ಮತ್ತೆ ಪ್ರೀತಿಸುತ್ತಿದ್ದಾರೆ’; ಮಾಸ್ಟರ್​ ಆನಂದ್ ಭಾವುಕ ನುಡಿ
Image
ಮಾಸ್ಟರ್​ ಆನಂದ್​ ಮಗಳು ವಂಶಿಕಾ ಭರ್ಜರಿ ಶಾಪಿಂಗ್​; ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕ ಸೃಜನ್​ ಲೋಕೇಶ್​
Image
ನಿವೇದಿತಾ ಗೌಡ ಅವರನ್ನೇ ಮಣಿಸಿದ ಮಾತಿನ ಮಲ್ಲಿ ವಂಶಿಕಾ; ಮಾಸ್ಟರ್​ ಆನಂದ್​ ಪುತ್ರಿಯ ಮಸ್ತ್​ ಮಾತುಕತೆ

ಇದನ್ನೂ ಓದಿ: ‘ನನ್ನಮ್ಮ ಸೂಪರ್​ ಸ್ಟಾರ್​’ ವಿನ್ನರ್​ ವಂಶಿಕಾ-ಯಶಸ್ವಿನಿ; ಟ್ರೋಫಿ ಜೊತೆ ಸಿಕ್ಕಿರುವ ಬಹುಮಾನದ ಹಣ ಎಷ್ಟು?

ಚೇತನ್​ ಕೇಶವ್​ಗೆ ಇದು ಚೊಚ್ಚಲ ನಿರ್ದೇಶನ. ‘ಮಫ್ತಿ’ ಸಿನಿಮಾದಲ್ಲಿ ನಿರ್ದೇಶಕ ನರ್ತನ್ ಜತೆ ಚೇತನ್ ಕೆಲಸ ಮಾಡಿದ್ದರು. ಈಗ ಅವರು ನೈಜ ಘಟನೆ ಇಟ್ಟುಕೊಂಡು ‘love..ಲಿ’ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರೌಡಿಸಂ, ಆ್ಯಕ್ಷನ್, ಪ್ರೇಮದ ವಿಚಾರಗಳು ಇರಲಿವೆ ಎಂಬುದು ನಿರ್ದೇಶಕರ ಮಾತು. ಈ ಚಿತ್ರವನ್ನು ರವೀಂದ್ರ ಕುಮಾರ್‌  ನಿರ್ಮಿಸುತ್ತಿದ್ದು, ಹರೀಶ್‌ ಕೊಮ್ಮೆ ಸಂಕಲನ, ಅಶ್ವಿನ್ ಕೆನಡಿ ಛಾಯಾಗ್ರಾಹಣ, ಅನೂಪ್‌ ಸಿಳೀನ್‌ ಸಂಗೀತ ನಿರ್ದೇಶನ ಚಿತ್ರಕ್ಕೆ ಇರಲಿದೆ.

Published On - 5:31 pm, Thu, 1 September 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!