Yash: ಅಯೋಧ್ಯೆ ರಾಮ ಮಂದಿರಕ್ಕೆ ಯಶ್ 50 ಕೋಟಿ ರೂ. ಕೊಟ್ರು ಅಂತ ಹಬ್ಬಿದೆ ಸುಳ್ಳು ಸುದ್ದಿ; ಫೋಟೋ ಹಿಂದಿನ ಸತ್ಯವೇನು?
Yash | Ayodhya Ram Mandir: ‘ರಾಮ ಮಂದಿರ ನಿರ್ಮಾಣಕ್ಕೆ ಯಶ್ 50 ಕೋಟಿ ರೂ. ದೇಣಿಗೆ ನೀಡಿದ್ದಾರೆ’ ಎಂದು ಕೆಲವರು ಸುದ್ದಿ ಹಬ್ಬಿಸಿದ್ದಾರೆ. ಅದರ ಜತೆಗೆ ಒಂದು ಫೋಟೋ ಹಂಚಿಕೊಳ್ಳಲಾಗಿದೆ.
ನಟ ಯಶ್ (Yash) ಅವರಿಗೆ ದೇಶಾದ್ಯಂತ ಜನಪ್ರಿಯತೆ ಇದೆ. ಅವರ ಬಗ್ಗೆ ಪ್ರತಿ ದಿನ ಒಂದಿಲ್ಲೊಂದು ಸುದ್ದಿ ಆಗುತ್ತಲೇ ಇರುತ್ತದೆ. ಆದರೆ ಕೆಲವರು ಸುಳ್ಳು ಸುದ್ದಿ ಹಬ್ಬಿಸಿ ಜನರ ದಾರಿ ತಪ್ಪಿಸುತ್ತಾರೆ. ಈಗ ಯಶ್ ಅವರ ಉದಾರತೆ ಕುರಿತು ಒಂದು ಫೇಕ್ ನ್ಯೂಸ್ ಹರಿದಾಡುತ್ತಿದೆ. ಅಯೋಧ್ಯೆಯಲ್ಲಿ (Ayodhya) ರಾಮ ಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗಿದೆ. ಅದಕ್ಕಾಗಿ ದೇಶದ ಕೋಟ್ಯಂತರ ಮಂದಿ ದೇಣಿಗೆ ನೀಡುತ್ತಿದ್ದಾರೆ. ರಾಮ ಮಂದಿರ (Ram Mandir) ನಿರ್ಮಾಣಕ್ಕೆ ‘ರಾಕಿಂಗ್ ಸ್ಟಾರ್’ ಯಶ್ ಅವರು ಬರೋಬ್ಬರಿ 50 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಕೆಲವರು ಫೋಟೋ ಸಮೇತ ಪೋಸ್ಟ್ ಮಾಡಿದ್ದಾರೆ. ಆದರೆ ಆ ಫೋಟೋದ ಅಸಲಿಯತ್ತು ಬೇರೆ ಇದೆ.
ಈಗಾಗಲೇ ಯಶ್ ಅವರು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಕರ್ನಾಟಕದ ಕೆರೆಗಳ ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಗಾಗಿ ಅವರು ಕೋಟ್ಯಂತರ ರೂಪಾಯಿ ಕರ್ಚು ಮಾಡಿದ್ದಾರೆ. ಯಶ್ ಅವರ ‘ಯಶೋಮಾರ್ಗ’ ಸಂಸ್ಥೆಯಿಂದ ಅನೇಕರಿಗೆ ಸಹಾಯ ಆಗಿದೆ. ಆದರೆ ಸದ್ಯಕ್ಕೆ ರಾಮ ಮಂದಿರದ ದೇಣಿಗೆ ಕುರಿತು ಹರಿದಾಡಿರುವುದು ಮಾತ್ರ ಶುದ್ಧ ಸುಳ್ಳು.
‘ದಕ್ಷಿಣದ ಸ್ಟಾರ್ ನಟ ಯಶ್ ಅವರು ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿದರು. ಈ ವೇಳೆ ರಾಮ ಮಂದಿರ ನಿರ್ಮಾಣಕ್ಕಾಗಿ 50 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ತಿಳಿಸಿದರು’ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಪೋಸ್ಟ್ ಮಾಡಿದ್ದಾರೆ. ಅದರ ಜೊತೆಗೆ ಒಂದು ಫೋಟೋ ಹಂಚಿಕೊಳ್ಳಲಾಗಿದೆ. ಅಂದಹಾಗೆ, ಆ ಫೋಟೋದ ಅಸಲಿಯತ್ತು ಬೇರೆ ಇದೆ. ಅದು ಅಯೋಧ್ಯಗೆ ಭೇಟಿ ನೀಡಿದ ಸಂದರ್ಭದ ಫೋಟೋ ಅಲ್ಲ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಬಿಡುಗಡೆಗೂ ಮುನ್ನ ಅವರು ತಿರುಪತಿಗೆ ಭೇಟಿ ನೀಡಿದ್ದರು. ಆ ಸಂದರ್ಭದ ಫೋಟೋವನ್ನೇ ಬಳಸಿಕೊಂಡು ಈಗ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.
ಸ್ಟಾರ್ ನಟರ ಕುರಿತು ಈ ರೀತಿ ಅನೇಕ ಫೇಕ್ ನ್ಯೂಸ್ಗಳು ಹರಿದಾಡುತ್ತವೆ. ಹಾಗಾಗಿ ಅವುಗಳಿಗೆಲ್ಲ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಆದರೆ ಅಂಥ ಸುಳ್ಳು ಸುದ್ದಿಗಳು ಜನರ ಭಾವನೆಗೆ ಸಂಬಂಧಿಸಿದ್ದಾದರೆ ಖಂಡಿತವಾಗಿಯೂ ಸ್ಪಷ್ಟನೆ ನೀಡಬೇಕಾಗುತ್ತದೆ.
ಯಶ್ ಅವರು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಮೂಲಕ ದೊಡ್ಡ ಯಶಸ್ಸು ಪಡೆದಿದ್ದಾರೆ. ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುವ ನಟರಲ್ಲಿ ಅವರು ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಿವುಡ್ನ ಸ್ಟಾರ್ ಹೀರೋಗಳನ್ನೂ ಮೀರಿಸಿದೆ ಅವರ ಸಕ್ಸಸ್. ಅವರ ಮುಂದಿನ ಚಿತ್ರದ ಘೋಷಣೆಗಾಗಿ ಎಲ್ಲರೂ ಕಾಯುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.