ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸದ್ಯ CCB ವಶದಲ್ಲಿರುವ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಪಾಲ್ಗೊಳ್ಳುತ್ತಿದ್ದ ಬಹುತೇಕ ಪಾರ್ಟಿಗಳು ಐಷಾರಾಮಿ ಹೋಟೆಲ್‌ಗಳಲ್ಲಿ ಹಾಗೂ ನಗರದ ಹೊರವಲಯದ ರೆಸಾರ್ಟ್‌ಗಳಲ್ಲಿ ಆಯೋಜನೆಯಾಗುತ್ತಿತ್ತು ಎಂದು ತಿಳಿದುಬಂದಿದೆ.
ಕೋಡ್‌ವರ್ಡ್ ಮೂಲಕವೇ ಡ್ರಗ್ಸ್ ದಂಧೆ
ಅಷ್ಟೇ ಅಲ್ಲದೆ, ಕೋಡ್ ವರ್ಡ್ ಮೂಲಕವೇ ಕಿರಾತಕರಿಂದ ಡ್ರಗ್ಸ್ ದಂಧೆ ನಡೆಯುತ್ತಿತ್ತು ಎಂದು ವಿಚಾರಣೆ ವೇಳೆ ಮಾಹಿತಿ ದೊರೆತಿದೆ. ಮಾಹಿತಿ ಸೋರಿಕೆಯಾಗದ ರೀತಿ ಕೋಡ್ ವರ್ಡ್ ಬಳಸುತ್ತಿದ್ದ ಆರೋಪಿಗಳು ಅವರು ನಡೆಸಿರುವ ಚಾಟಿಂಗ್ ವಿವರ ಟಿವಿ 9ಗೆ ಲಭ್ಯವಾಗಿದೆ.
ಮೊದಲ ಹಂತದಲ್ಲಿ ರವಿಶಂಕರ್ ಸ್ಟಫ್, 1mg ಎಂಬ ಪದ ಬಳಕೆ ಮಾಡಿದ್ದನಂತೆ. ಜೊತೆಗೆ, ರವಿಶಂಕರ್ ಹಾಗೂ ಲೂಮ್ ಪೆಪ್ಪರ್ ಇಂಥದ್ದೇ ಪದಗಳನ್ನ ಬಳಸುತ್ತಿದ್ದರು ಎಂದು ಹೇಳಲಾಗಿದೆ. ರಾಗಿಣಿ ಮೊಬೈಲ್‌ನಲ್ಲೂ ಇದೇ ರೀತಿ ಕೋಡ್ ವರ್ಡ್ ಇರುವ ಚಾಟ್ಗಳು ಪತ್ತೆಯಾಗಿದ್ದವಂತೆ. ಹೀಗಾಗಿ, ಡ್ರಗ್ಸ್ ಖರೀದಿ ಮಾಡುತ್ತಿದ್ದ ಬಗ್ಗೆ CCB ಗೆ ಮಾಹಿತಿ ಸಿಕ್ಕಿದೆ.
ದಾಳಿ ನಡೆದ ವೇಳೆ ಮೊಬೈಲ್ ಸೀಜ್ ಮಾಡಿ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಕೋಡ್ ವರ್ಡ್ ಬಳಸಿರುವ ಬಗ್ಗೆ ದೃಢಮಾಹಿತಿ ಸಿಕ್ಕಿದೆ. ನಟಿ ರಾಗಿಣಿ ಮತ್ತು ರವಿಶಂಕರ್ ಕೋಡ್‌ವರ್ಡ್ ಮೂಲಕವೇ ಚಾಟ್ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
Published On - 11:27 am, Fri, 11 September 20