ರಾಗಿಣಿ CCB ಕಸ್ಟಡಿ ಅವಧಿ ಇಂದಿಗೆ ಮುಕ್ತಾಯ, ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್​ಗೆ ಹಾಜರು

  • Publish Date - 6:52 am, Fri, 11 September 20
ರಾಗಿಣಿ CCB ಕಸ್ಟಡಿ ಅವಧಿ ಇಂದಿಗೆ ಮುಕ್ತಾಯ, ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್​ಗೆ ಹಾಜರು

ಬೆಂಗಳೂರು: ಡ್ರಗ್ಸ್ ಮಾಫಿಯಾದೊಂದಿಗೆ ಶಾಮೀಲಾದ ಆರೋಪ ಹೊತ್ತ ರಾಗಿಣಿ ಅಲಿಯಾಸ್ ಗಿಣಿ ಅಲಿಯಾಸ್ ರಾಗ್ಸ್ ಇಂದು ಜೈಲು ಸೇರ್ತಾರಾ. ರಾಗಿಣಿ ಜಾಮೀನು ಅರ್ಜಿ ಇವತ್ತು ಕೋರ್ಟ್ ನಲ್ಲಿ ವಿಚಾರಣೆಗೆ ಬರುತ್ತಾ. ಜಾಮೀನು ಸಿಗೋದು ಸುಲಭಾನಾ ಕಷ್ಟಾನಾ ಅನ್ನೋ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ.

ಕಸ್ಟಡಿನಾ, ಜೈಲು ಪಾಲು ಆಗ್ತಾರಾ ನಟಿ ರಾಗಿಣಿ?
ಮಾದಕ ಲೋಕದಲ್ಲಿ ತಾನೂ ತೇಲಾಡಿ, ಹಲವರನ್ನು ತೇಲಿಸಿದ್ದ ರಾಗಿಣಿ ದ್ವಿವೇದಿ ಇದೀಗ ಪೊಲೀಸ್ ವಶದಲ್ಲಿದ್ದಾರೆ. 7 ನೇ ಆರೋಪಿ ಲೂಮ್ ಪೆಪ್ಪರ್ ಸಂಬಾ ರಾಗಿಣಿಗೆ ಡ್ರಗ್ಸ್ ಪೂರೈಸಿದ್ದೇನೆಂದು ಹೇಳಿ ನಟಿಗೆ ಸಂಕಷ್ಟ ತಂದೊಡ್ಡಿದ್ದ. ರಾಜ್ಯದ, ದೇಶದ ಹಲವಾರು ಪಾರ್ಟಿಗಳಲ್ಲಿ ಡ್ರಗ್ಸ್ ಸರಬರಾಜು ಮಾಡಿರೋ ಮಾಹಿತಿಯ ಬೆನ್ನು ಬಿದ್ದಿರೋ ಸಿಸಿಬಿ ಪೊಲೀಸರ ವಿಚಾರಣೆಗೆ ರಾಗಿಣಿ ಸಹಕರಿಸಿರಲಿಲ್ಲ.

ಆರಂಭದಲ್ಲಿ ತನಗೇನೂ ಗೊತ್ತಿಲ್ಲ. ನೆನಪಿಲ್ಲ ಎಂದು ಹಾರಿಕೆ ಉತ್ತರ ಕೊಟ್ಟಿದ್ದ ನಟಿಗೆ ಸಿಸಿಬಿ ಪೊಲೀಸರು ಡ್ರಿಲ್ ಮುಂದುವರಿಸಿದ್ದಾರೆ‌. ವಾಟ್ಸ್ ಆ್ಯಪ್ ಚಾಟ್ ಮುಂದಿಟ್ಟು ರಾಗಿಣಿಯಿಂದ ಉತ್ತರ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಕೋರ್ಟ್ ನೀಡಿದ್ದ ಸಿಸಿಬಿ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾಗುತ್ತೆ. ವಿಚಾರಣೆ ಇನ್ನೂ ಮುಗಿಯದಿದ್ದರೆ ಸಿಸಿಬಿ ಮತ್ತಷ್ಟು ದಿನಗಳ ಕಾಲ ರಾಗಿಣಿ ಕಸ್ಟಡಿ ಕೇಳಬಹುದು. ಬೇಡವೆನ್ನಿಸಿದರೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲು ಮನವಿ ಮಾಡಬಹುದು.

ಪಂಜರದ ‘ಗಿಣಿ’ ಭವಿಷ್ಯ!
ಕೋರ್ಟ್ ಇವತ್ತು ರಾಗಿಣಿಯನ್ನು ಜೈಲಿಗೆ ಕಳುಹಿಸುತ್ತಾ..? ಅಥವಾ ಮತ್ತಷ್ಟು ದಿನ ಪೊಲೀಸ್ ಕಸ್ಟಡಿಗೆ ನೀಡುತ್ತಾ ಅನ್ನೋ ಬಗ್ಗೆ ಇಂದು ನಿರ್ಧಾರ. ಯಾಕೆಂದರೆ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಇವತ್ತು ನಡೆಯೋ ಸಾಧ್ಯತೆ ಕಡಿಮೆ. ರಾಗಿಣಿ ಹೊಸದಾಗಿ ಸಲ್ಲಿಸಿರೋ ಜಾಮೀನು ಅರ್ಜಿ ವಿಚಾರಣೆ ಇವತ್ತು ನಡೆದರೂ ಕೋರ್ಟ್ ಇಂದೇ ಆದೇಶ ನೀಡೋ ಸಾಧ್ಯತೆ ಇಲ್ಲ. ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಲಿದ್ದಾರೆ. ಹೀಗಾಗಿ ಇಂದು ರಾಗಿಣಿ ಜಾಮೀನು ಅರ್ಜಿ ಭವಿಷ್ಯ ನಿರ್ಧಾರ ಆಗೋದಿಲ್ಲ.

ಇವತ್ತೂ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಕೋರ್ಟ್ ಗೆ ರಾಗಿಣಿ ಹಾಜರುಪಡಿಸೋ ಸಾಧ್ಯತೆ ಇದೆ. ಕೋರ್ಟ್ ಗೆ ರಿಮಾಂಡ್ ಅರ್ಜಿ ಸಲ್ಲಿಸೋ ಸಿಸಿಬಿ ಕಸ್ಟಡಿಗೆ ಕೇಳ್ತಾರಾ ಅಥವಾ ಕೋರ್ಟ್ ರಾಗಿಣಿಯನ್ನು ನ್ಯಾಯಾಂಗ ಬಂಧನಕ್ಕೆ ವಹಿಸುತ್ತಾ ಅನ್ನೋದೇ ಸದ್ಯದ ಕುತೂಹಲ.

Click on your DTH Provider to Add TV9 Kannada