ನಾವೇ ಜಗಳವಾಡಿಕೊಂಡ್ರೆ CCBಗೇ ಲಾಭವಾಗುತ್ತೆ, ಒಂದಾಗೋಣ ಬಾ ಅಂದ್ರು ಅವರಿಬ್ಬರೂ!

ನಾವೇ ಜಗಳವಾಡಿಕೊಂಡ್ರೆ CCBಗೇ ಲಾಭವಾಗುತ್ತೆ, ಒಂದಾಗೋಣ ಬಾ ಅಂದ್ರು ಅವರಿಬ್ಬರೂ!

[lazy-load-videos-and-sticky-control id=”TQmdz-iQ_I”]

ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಬಂಧಿಯಾಗಿರುವ ನಟಿ ರಾಗಿಣಿ ಹಾಗೂ ಸಂಜನಾ ಇಬ್ಬರೂ ಮತ್ತೆ ಒಂದಾಗಿದ್ದಾರೆ. ಅನೇಕ ಕಾರಣಗಳಿಂದ ಇವರಿಬ್ಬರಲ್ಲಿ ಪುರಾತನ ಭಿನ್ನಮತ ಇತ್ತು. ಆದ್ರೆ ಈ ಪ್ರಕರಣದಿಂದಾಗಿ ಇವರಿಬ್ಬರಲ್ಲಿ ಹೊಂದಾಣಿಕೆ ನಡೆದಿದೆ.

ಕೆಲವು ವರ್ಷಗಳಿಂದ ಒಬ್ಬರ ಮುಖ ಒಬ್ಬರು ನೋಡದಂತೆ ಹಾವು ಮುಂಗಸಿಯಂತೆ ಇದ್ದ ನಟಿಯರು ಈಗ ಗೆಳತಿಯರಾಗಿದ್ದಾರೆ. ಮೊದಲ ದಿನ ಮುಖಾಮುಖಿಯಾದಾಗ ಒಬ್ಬರಿಗೊಬ್ಬರು ಟಾಂಗ್ ಕೊಟ್ಟಿದ್ದರು. ಮಹಿಳಾ ಸಾಂತ್ವನ ಕೇಂದ್ರದಲ್ಲಿ ಗಲಾಟೆ ಮಾಡಿಕೊಂಡಿದ್ದರು. ಮಹಿಳಾ ಪೊಲೀಸರೇ ಮಧ್ಯಪ್ರವೇಶಿಸಿ ಎರಡು ಮೂರು ಬಾರಿ ಸಮಾಧಾನ ಪಡಿಸಿದ್ರು. ಈಗ ಇವರಿಬ್ಬರೂ ಒಂದು ನಿರ್ಣಯ ತೆಗೆದುಕೊಂಡಿದ್ದಾರೆ.

ನಾವೇ ಜಗಳವಾಡಿಕೊಂಡ್ರೆ CCB ಪೊಲೀಸರಿಗೆ ಲಾಭವಾಗುತ್ತೆ. ಮತ್ತಷ್ಟು ದಂಧೆಯ ವಿಚಾರಗಳು ಬಯಲಿಗೆ ಬರುತ್ತೆ. ಹೀಗಾಗಿ ನಾವು ಈ ವಿಚಾರದಲ್ಲಿ ಒಂದಾದ್ರೆ ಸೇಫ್ ಆಗುತ್ತೇವೆ. ಯಾವುದೇ ವಿಚಾರಗಳು ಬಯಲಿಗೆ ಬರುವುದಿಲ್ಲ ಎಂದು ಹಳೆ ವಿಚಾರಗಳನ್ನ ಮರೆತು ಗಂಟೆಗಟ್ಟಲೆ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಪೊಷಕರು, ವಕೀಲರು ಹಾಗೂ ಹಿತೈಷಿಗಳು ಸಹ ತಿಳಿಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.

Click on your DTH Provider to Add TV9 Kannada