ಐಷಾರಾಮಿ ಹೋಟೆಲ್‌ಗಳಲ್ಲಿ ಪಾರ್ಟಿ, ಕೋಡ್‌ ವರ್ಡ್ ಮೂಲಕ Drugs ಚಾಟಿಂಗ್​

ಐಷಾರಾಮಿ ಹೋಟೆಲ್‌ಗಳಲ್ಲಿ ಪಾರ್ಟಿ, ಕೋಡ್‌ ವರ್ಡ್ ಮೂಲಕ Drugs ಚಾಟಿಂಗ್​

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸದ್ಯ CCB ವಶದಲ್ಲಿರುವ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಪಾಲ್ಗೊಳ್ಳುತ್ತಿದ್ದ ಬಹುತೇಕ ಪಾರ್ಟಿಗಳು ಐಷಾರಾಮಿ ಹೋಟೆಲ್‌ಗಳಲ್ಲಿ ಹಾಗೂ ನಗರದ ಹೊರವಲಯದ ರೆಸಾರ್ಟ್‌ಗಳಲ್ಲಿ ಆಯೋಜನೆಯಾಗುತ್ತಿತ್ತು ಎಂದು ತಿಳಿದುಬಂದಿದೆ.
ಕೆಲವೊಮ್ಮೆ ಹೌಸ್ ಪಾರ್ಟಿ ಸಹ ಆಯೋಜನೆ ಮಾಡುತ್ತಿದ್ದರಂತೆ. ಇವೆಂಟ್‌ ಮುಗಿದ ಬಳಿಕ ವಿರೇನ್ ಖನ್ನಾ ಆಫ್ಟರ್​ ಪಾರ್ಟಿ ಆಯೋಜಿಸುತ್ತಿದ್ದನಂತೆ. ಇದೇ ಆಫ್ಟರ್​ ಪಾರ್ಟಿಗಳಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇಂಥ ಪಾರ್ಟಿಗಳಿಗಾಗಿ ಇಡೀ ರೆಸಾರ್ಟ್ ಬುಕ್ ಮಾಡುತ್ತಿದ್ದರಂತೆ. ರೆಸಾರ್ಟ್‌ಗೆ ಈ ವೇಳೆ ಬೇರೆಯವರಿಗೆ ಪ್ರವೇಶವಿರುತ್ತಿರಲಿಲ್ಲ. ಒಂದು ವೇಳೆ ಹೋಟೆಲ್‌ಗಳಲ್ಲಾದರೆ ಇಡೀ ಫ್ಲೋರ್ ಬುಕ್ ಮಾಡ್ತಿದ್ದರು. ಒಂದು ದಿನಕ್ಕೆ 4-5 ಲಕ್ಷ ರೂಪಾಯಿ ನೀಡಿ ರೆಸಾರ್ಟ್ ಮತ್ತು ಹೋಟೆಲ್ ಬುಕ್ ಮಾಡುತ್ತಿದ್ದರು ಎಂಬ ಮಾಹಿತಿ ದೊರೆತಿದೆ.

ಕೋಡ್​ವರ್ಡ್ ಮೂಲಕವೇ ಡ್ರಗ್ಸ್ ದಂಧೆ
ಅಷ್ಟೇ ಅಲ್ಲದೆ, ಕೋಡ್‌ ವರ್ಡ್ ಮೂಲಕವೇ ಕಿರಾತಕರಿಂದ ಡ್ರಗ್ಸ್ ದಂಧೆ ನಡೆಯುತ್ತಿತ್ತು ಎಂದು ವಿಚಾರಣೆ ವೇಳೆ ಮಾಹಿತಿ ದೊರೆತಿದೆ. ಮಾಹಿತಿ ಸೋರಿಕೆಯಾಗದ ರೀತಿ ಕೋಡ್ ವರ್ಡ್ ಬಳಸುತ್ತಿದ್ದ ಆರೋಪಿಗಳು ಅವರು ನಡೆಸಿರುವ ಚಾಟಿಂಗ್ ವಿವರ ಟಿವಿ 9ಗೆ ಲಭ್ಯವಾಗಿದೆ.
ಡ್ರಗ್ಸ್ ಅನ್ನೋ ಪದ ಎಲ್ಲೂ ಕೂಡ ಬಳಸದ ಆರೋಪಿಗಳು ಯಾವುದೇ ಹೆಸರಿನ ಮೂಲಕ ಡ್ರಗ್ಸ್​ ಖರೀದಿ ಮಾಡ್ತಿರಲಿಲ್ಲ. ಎಲ್ಲದಕ್ಕೂ ಕೋಡ್‌ ವರ್ಡ್ ಬಳಸಿಯೇ ಖರೀದಿಸುತ್ತಿದ್ದರು ಎಂದು ತಿಳಿದುಬಂದಿದೆ. Where is it? When will it come? How Much is This? Why Less? Why delay? ಅನ್ನೋ ಪ್ರಶ್ನೆಗಳ ಮೂಲಕವೇ ತಮ್ಮ ವ್ಯವಹಾರ ಮುಗಿಸುತ್ತಿದ್ದರಂತೆ.

ಮೊದಲ ಹಂತದಲ್ಲಿ ರವಿಶಂಕರ್ ಸ್ಟಫ್​, 1mg ಎಂಬ ಪದ ಬಳಕೆ ಮಾಡಿದ್ದನಂತೆ. ಜೊತೆಗೆ, ರವಿಶಂಕರ್ ಹಾಗೂ ಲೂಮ್‌ ಪೆಪ್ಪರ್ ಇಂಥದ್ದೇ ಪದಗಳನ್ನ ಬಳಸುತ್ತಿದ್ದರು ಎಂದು ಹೇಳಲಾಗಿದೆ. ರಾಗಿಣಿ ಮೊಬೈಲ್‌ನಲ್ಲೂ ಇದೇ ರೀತಿ ಕೋಡ್ ವರ್ಡ್ ಇರುವ ಚಾಟ್​ಗಳು ಪತ್ತೆಯಾಗಿದ್ದವಂತೆ. ಹೀಗಾಗಿ, ಡ್ರಗ್ಸ್‌ ಖರೀದಿ ಮಾಡುತ್ತಿದ್ದ ಬಗ್ಗೆ CCB ಗೆ ಮಾಹಿತಿ ಸಿಕ್ಕಿದೆ.

ದಾಳಿ ನಡೆದ ವೇಳೆ ಮೊಬೈಲ್ ಸೀಜ್‌ ಮಾಡಿ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಕೋಡ್ ವರ್ಡ್ ಬಳಸಿರುವ ಬಗ್ಗೆ ದೃಢಮಾಹಿತಿ ಸಿಕ್ಕಿದೆ. ನಟಿ ರಾಗಿಣಿ ಮತ್ತು ರವಿಶಂಕರ್ ಕೋಡ್‌ವರ್ಡ್‌ ಮೂಲಕವೇ ಚಾಟ್ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Click on your DTH Provider to Add TV9 Kannada