ಡ್ರಗ್ಸ್ ದಂಧೆ: ‘ತುಪ್ಪದ ಬೆಡಗಿ’ಗೂ ನೋಟಿಸ್, ಸಿಸಿಬಿಯಿಂದ ಆಪ್ತ ರವಿಗೆ ಫುಲ್ ಡ್ರಿಲ್

|

Updated on: Sep 03, 2020 | 12:45 PM

[lazy-load-videos-and-sticky-control id=”WHM48MIcDI8″] ಡ್ರಗ್ಸ್ ದುನಿಯಾದ ನಂಟು ಚಂದನವನವನ್ನೇ ದಂಗಾಗಿಸಿದೆ. ಅಮಲಿನ ಜಾಲ ಬೇಧಿಸಲು ಅಧಿಕಾರಿಗಳು ಹೊರಟಿದ್ದು, ಹೊತ್ತಿಗೊಂದು ವಿಷ್ಯ ಬಯಲಾಗ್ತಿದೆ. ಅದ್ರಲ್ಲೂ, ನಟಿ ರಾಗಿಣಿಗೆ ಶಾಕ್​ ತಟ್ಟಿದೆ. ಯಾಕಂದ್ರೆ, ನಟಿಯ ಸ್ನೇಹಿತನನ್ನ ಸಿಸಿಬಿ ವಶಕ್ಕೆ ಪಡೆದಿದೆ. ಜತೆಗೆ ರಾಗಿಣಿಗೂ ವಿಚಾರಣೆ ಭಯ ಶುರುವಾಗಿದೆ. ಕೌಂಟ್​ಡೌನ್.. ಕಿಕ್ಕೇರಿಸಿಕೊಂಡು ಕುಣಿದವ್ರಿಗೆ.. ಮತ್ತಿನ ಅಮಲಲ್ಲಿ ತೇಲಾಡಿದವ್ರಿಗೆ.. ನಂಜಿನ ನಂಟು ಹೊಂದಿರೋ ನಟ-ನಟಿಯರಿಗೆ ಕೌಂಟ್​ಡೌನ್​​ ಶುರುವಾಗಿದೆ. ಯಾಕಂದ್ರೆ, ಡ್ರಗ್ಸ್ ದುನಿಯಾದ ಇಂಚಿಂಚನ್ನೂ ಜಾಲಾಡ್ತಿರೋ ಅಧಿಕಾರಿಗಳು ತಮ್ಮ ಶಿಕಾರಿ ಶುರುಮಾಡಿದ್ದಾರೆ. ಈ ಪೈಕಿ ಸ್ಟಾರ್​​ […]

ಡ್ರಗ್ಸ್ ದಂಧೆ: ‘ತುಪ್ಪದ ಬೆಡಗಿ’ಗೂ ನೋಟಿಸ್, ಸಿಸಿಬಿಯಿಂದ ಆಪ್ತ ರವಿಗೆ ಫುಲ್ ಡ್ರಿಲ್
Follow us on

[lazy-load-videos-and-sticky-control id=”WHM48MIcDI8″]

ಡ್ರಗ್ಸ್ ದುನಿಯಾದ ನಂಟು ಚಂದನವನವನ್ನೇ ದಂಗಾಗಿಸಿದೆ. ಅಮಲಿನ ಜಾಲ ಬೇಧಿಸಲು ಅಧಿಕಾರಿಗಳು ಹೊರಟಿದ್ದು, ಹೊತ್ತಿಗೊಂದು ವಿಷ್ಯ ಬಯಲಾಗ್ತಿದೆ. ಅದ್ರಲ್ಲೂ, ನಟಿ ರಾಗಿಣಿಗೆ ಶಾಕ್​ ತಟ್ಟಿದೆ. ಯಾಕಂದ್ರೆ, ನಟಿಯ ಸ್ನೇಹಿತನನ್ನ ಸಿಸಿಬಿ ವಶಕ್ಕೆ ಪಡೆದಿದೆ. ಜತೆಗೆ ರಾಗಿಣಿಗೂ ವಿಚಾರಣೆ ಭಯ ಶುರುವಾಗಿದೆ.

ಕೌಂಟ್​ಡೌನ್.. ಕಿಕ್ಕೇರಿಸಿಕೊಂಡು ಕುಣಿದವ್ರಿಗೆ.. ಮತ್ತಿನ ಅಮಲಲ್ಲಿ ತೇಲಾಡಿದವ್ರಿಗೆ.. ನಂಜಿನ ನಂಟು ಹೊಂದಿರೋ ನಟ-ನಟಿಯರಿಗೆ ಕೌಂಟ್​ಡೌನ್​​ ಶುರುವಾಗಿದೆ. ಯಾಕಂದ್ರೆ, ಡ್ರಗ್ಸ್ ದುನಿಯಾದ ಇಂಚಿಂಚನ್ನೂ ಜಾಲಾಡ್ತಿರೋ ಅಧಿಕಾರಿಗಳು ತಮ್ಮ ಶಿಕಾರಿ ಶುರುಮಾಡಿದ್ದಾರೆ. ಈ ಪೈಕಿ ಸ್ಟಾರ್​​ ನಟಿಯ ಸ್ನೇಹಿತನನ್ನ ವಶಕ್ಕೆ ಪಡೆದಿದ್ದಾರೆ.

ಡ್ರಗ್ಸ್​​ ಜಾಲದ ನಂಟಿನ ಶಂಕೆ.. ನಟಿ ರಾಗಿಣಿ ಸ್ನೇಹಿತ ವಶಕ್ಕೆ
ಡ್ರಗ್ಸ್​ ದುನಿಯಾದ ನಂಟು, ಚಂದನವನಕ್ಕೆ ಕಪ್ಪು ಚುಕ್ಕೆ ಯಾಗ್ತಿದೆ. ಅಮಲಿನ ಜಾಲದ ಆಳ-ಅಗಲವನ್ನ ಬಗೆಯುತ್ತಿರೋ ಸಿಸಿಬಿ ಪಡೆ, ತನ್ನ ಮೊದಲ ಬೇಟೆಯಾಡಿದೆ. ಸ್ಯಾಂಡಲ್​ವುಡ್​ ನಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸ್ನೇಹಿತ ರವಿಶಂಕರ್​ರನ್ನ ವಶಕ್ಕೆ ಪಡೆದಿದ್ದಾರೆ. ಹಾಗೇ, ರಾಗಿಣಿಗೂ ವಿಚಾರಣೆ ತೂಗುಗತ್ತಿ ಎದುರಾಗಿದೆ.

ಸ್ನೇಹಿತನ ವಿಚಾರಣೆ.. ರಾಗಿಣಿಗೂ ನೋಟಿಸ್..!?
ಕನ್ನಡದ ಕೆಲ ಸಿನಿಮಾಗಳಲ್ಲಿ ರವಿಶಂಕರ್​ ನಟಿಸಿದ್ದು, ಸದ್ಯ ಆತನನ್ನ ವಶಕ್ಕೆ ಪಡೆದು ಸಿಸಿಬಿ ವಿಚಾರಣೆ ನಡೆಸ್ತಿದೆ. ಇನ್ನು, ರಾಗಿಣಿಗೂ ನೋಟಿಸ್​ ನೀಡುವ ಸಾಧ್ಯತೆ ಇದ್ದು, ನಾಳೆ ಬೆಳಗ್ಗೆ 10 ಗಂಟೆಗೆ ಅವ್ರು ಸಿಸಿಬಿ ಕಚೇರಿಗೆ ಬರಲಿದ್ದಾರೆ ಎನ್ನಲಾಗ್ತಿದೆ. ಅಂದಹಾಗೇ, ಈ ಹಿಂದೆ ಅಶೋಕ್​ನಗರದ ಪಬ್​ವೊಂದ್ರಲ್ಲಿ ಗಲಾಟೆಯಾಗಿತ್ತು. ಈ ವೇಳೆ ರವಿಶಂಕರ್ ಮತ್ತು​​​​​ ರಾಗಿಣಿಯ ಮತ್ತೊಬ್ಬ ಸ್ನೇಹಿತನ ನಡುವೆ ಗಲಾಟೆಯಾಗಿತ್ತು.

ವಿಚಾರಣೆಗೆ ಬರುವಂತೆ ನಟ-ನಟಿಯರಿಗೆ ನೋಟಿಸ್
ಇನ್ನು, ನಂಜಿನ ನಂಟು ಹೊಂದಿರುವ ಆರೋಪದಡಿ ಹಲವು ನಟ-ನಟಿಯರಿಗೆ ಸಿಸಿಬಿ ನೋಟಿಸ್​ ಕೊಟ್ಟಿದೆ. ಎರಡು ದಿನದೊಳಗೆ ಅವ್ರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಮತ್ತೊಂದೆಡೆ, ಡ್ರಗ್ಸ್​ ದಂಧೆಯಲ್ಲಿ ಬಂಧಿತನಾಗಿರೋ ಅನೂಪ್​ಗೆ ಮಲಯಾಳಂ ನಟರ ಜತೆ ಲಿಂಕ್​ ಇರೋದು ಗೊತ್ತಾಗಿದೆ. ಅನೂಪ್​​​​ ನಡೆಸ್ತಿದ್ದ ರೆಸ್ಟೋರೆಂಟ್​​ಗೆ ನಟ ಬಿನೀಶ್​ ಕೊಡಿಯೇರಿ ಫಂಡಿಂಗ್​ ಮಾಡಿರೋದು ಎನ್​​ಸಿಬಿ ವಿಚಾರಣೆಯಲ್ಲಿ ಗೊತ್ತಾಗಿದೆ. ಅಲ್ಲದೆ, 2015ರಲ್ಲಿ ಕಮ್ಮನಹಳ್ಳಿಯಲ್ಲಿ ಅನೂಪ್ ರೆಸ್ಟೋರೆಂಟ್​​​​​​​​​ ಆರಂಭಿಸಿದ್ದು, ಆಫ್ರಿಕನ್​ ಪ್ರಜೆಗಳಿಂದ ಎಂಡಿಎಂಎ ಖರೀದಿ ಮಾಡ್ತಿದ್ದೆ ಅಂತ ಬಾಯ್ಬಿಟ್ಟಿದ್ದಾನೆ.

ಒಟ್ನಲ್ಲಿ, ಡ್ರಗ್ಸ್​ ದಂಧೆ ಪ್ರಕರಣದಿಂದಾಗಿ ಗಂಧದಗುಡಿಗೆ ಗರಬಡಿದಂತೆ ಆಗ್ಬಿಟ್ಟಿದೆ. ಪ್ರಕರಣದಲ್ಲಿ ಸದ್ಯ ಸಿಸಿಬಿ ಶಿಕಾರಿ ಆರಂಭಿಸಿದ್ದು, ಅದ್ಯಾವ ನಟರ ಹೆಸ್ರು ಹೊರ ಬರುತ್ತೋ ನೋಡ್ಬೇಕು.

Published On - 7:29 am, Thu, 3 September 20