’ಎಲ್ಲೂ ಓಡಿಹೋಗಿಲ್ಲ, ಓಡಿ ಹೋಗೊಕ್ಕೆ ನಾನೇನು ಟೆರರಿಸ್ಟಾ? CCBಯಿಂದ ನನಗೇನೂ ಕರೆ ಬರೋಲ್ಲ’

’ಎಲ್ಲೂ ಓಡಿಹೋಗಿಲ್ಲ, ಓಡಿ ಹೋಗೊಕ್ಕೆ ನಾನೇನು ಟೆರರಿಸ್ಟಾ? CCBಯಿಂದ ನನಗೇನೂ ಕರೆ ಬರೋಲ್ಲ’

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಲ್ ಚಲ್ ಎಬ್ಬಿಸಿರುವ, ಅನೇಕ ತಿರುವುಗಳನ್ನು ಪಡೆಯುತ್ತಿರುವ ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಟಿವಿ9ಗೆ ನಟಿ ಸಂಜನಾ ಗಲ್ರಾನಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಪ್ರಕರಣದಲ್ಲಿ ಸಂಜನಾ ಅವರ ಆಪ್ತ ರಾಹುಲ್​ನನ್ನು ಸಿಸಿಬಿ ಪೊಲೀಸರು ನಿನ್ನೆ ವಶಕ್ಕೆ ಪಡೆದು ಮಾಹಿತಿ ಕಲೆ ಹಾಕಿದ್ದಾರೆ. ಈ ನಿಟ್ಟಿನಲ್ಲಿ ಕೆಲ ನಟ ನಟಿಯರು ಬೆಂಗಳೂರು ಬಿಟ್ಟು ಹೊರಟ್ಟಿದ್ದಾರೆ ಎಂಬ ಮಾತುಗಳು ಸಹ ಹೇಳಿ ಬಂದಿವೆ. ಈ ಬಗ್ಗೆ ಮಾತನಾಡಿದ ನಟಿ ಸಂಜನಾ ನಾನು ಎಲ್ಲೂ ಓಡಿಹೋಗಿಲ್ಲ, ಮನೆಯಲ್ಲಿ ಆರಾಮಾಗಿದ್ದೇನೆ. ಓಡಿ ಹೋಗುವುದಕ್ಕೆ ನಾನೇನಾದ್ರೂ ಟೆರರಿಸ್ಟಾ ಎಂದು ಪ್ರಶ್ನಿಸಿದ್ದಾರೆ.

ರಾಹುಲ್ ನನಗೆ ಸಹೋದರನಿದ್ದಂತೆ ಅಷ್ಟೇ. ರಾಹುಲ್‌ನನ್ನು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಹಾಗಂತ ಅದು ಅಪರಾಧವಲ್ಲ, ಅದಕ್ಕೂ ನನಗೆ ಸಂಬಂಧವಿಲ್ಲ. ನನಗೆ ಸಿಸಿಬಿಯಿಂದ ಕರೆ ಬಂದಿಲ್ಲ, ಬರುವುದೂ ಇಲ್ಲ ಎಂದು ಟಿವಿ9ಗೆ ನಟಿ ಸಂಜನಾ ಗಲ್ರಾನಿ ತಿಳಿಸಿದ್ದಾರೆ. ಸದ್ಯ ಗಲ್ರಾನಿ ತಮ್ಮ ಹೈದರಾಬಾದ್ ನಿವಾಸದಲ್ಲಿದ್ದಾರೆ.

Click on your DTH Provider to Add TV9 Kannada