AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ಸ್ ದಂಧೆ: ‘ತುಪ್ಪದ ಬೆಡಗಿ’ಗೂ ನೋಟಿಸ್, ಸಿಸಿಬಿಯಿಂದ ಆಪ್ತ ರವಿಗೆ ಫುಲ್ ಡ್ರಿಲ್

[lazy-load-videos-and-sticky-control id=”WHM48MIcDI8″] ಡ್ರಗ್ಸ್ ದುನಿಯಾದ ನಂಟು ಚಂದನವನವನ್ನೇ ದಂಗಾಗಿಸಿದೆ. ಅಮಲಿನ ಜಾಲ ಬೇಧಿಸಲು ಅಧಿಕಾರಿಗಳು ಹೊರಟಿದ್ದು, ಹೊತ್ತಿಗೊಂದು ವಿಷ್ಯ ಬಯಲಾಗ್ತಿದೆ. ಅದ್ರಲ್ಲೂ, ನಟಿ ರಾಗಿಣಿಗೆ ಶಾಕ್​ ತಟ್ಟಿದೆ. ಯಾಕಂದ್ರೆ, ನಟಿಯ ಸ್ನೇಹಿತನನ್ನ ಸಿಸಿಬಿ ವಶಕ್ಕೆ ಪಡೆದಿದೆ. ಜತೆಗೆ ರಾಗಿಣಿಗೂ ವಿಚಾರಣೆ ಭಯ ಶುರುವಾಗಿದೆ. ಕೌಂಟ್​ಡೌನ್.. ಕಿಕ್ಕೇರಿಸಿಕೊಂಡು ಕುಣಿದವ್ರಿಗೆ.. ಮತ್ತಿನ ಅಮಲಲ್ಲಿ ತೇಲಾಡಿದವ್ರಿಗೆ.. ನಂಜಿನ ನಂಟು ಹೊಂದಿರೋ ನಟ-ನಟಿಯರಿಗೆ ಕೌಂಟ್​ಡೌನ್​​ ಶುರುವಾಗಿದೆ. ಯಾಕಂದ್ರೆ, ಡ್ರಗ್ಸ್ ದುನಿಯಾದ ಇಂಚಿಂಚನ್ನೂ ಜಾಲಾಡ್ತಿರೋ ಅಧಿಕಾರಿಗಳು ತಮ್ಮ ಶಿಕಾರಿ ಶುರುಮಾಡಿದ್ದಾರೆ. ಈ ಪೈಕಿ ಸ್ಟಾರ್​​ […]

ಡ್ರಗ್ಸ್ ದಂಧೆ: ‘ತುಪ್ಪದ ಬೆಡಗಿ’ಗೂ ನೋಟಿಸ್, ಸಿಸಿಬಿಯಿಂದ ಆಪ್ತ ರವಿಗೆ ಫುಲ್ ಡ್ರಿಲ್
ಆಯೇಷಾ ಬಾನು
|

Updated on:Sep 03, 2020 | 12:45 PM

Share

[lazy-load-videos-and-sticky-control id=”WHM48MIcDI8″]

ಡ್ರಗ್ಸ್ ದುನಿಯಾದ ನಂಟು ಚಂದನವನವನ್ನೇ ದಂಗಾಗಿಸಿದೆ. ಅಮಲಿನ ಜಾಲ ಬೇಧಿಸಲು ಅಧಿಕಾರಿಗಳು ಹೊರಟಿದ್ದು, ಹೊತ್ತಿಗೊಂದು ವಿಷ್ಯ ಬಯಲಾಗ್ತಿದೆ. ಅದ್ರಲ್ಲೂ, ನಟಿ ರಾಗಿಣಿಗೆ ಶಾಕ್​ ತಟ್ಟಿದೆ. ಯಾಕಂದ್ರೆ, ನಟಿಯ ಸ್ನೇಹಿತನನ್ನ ಸಿಸಿಬಿ ವಶಕ್ಕೆ ಪಡೆದಿದೆ. ಜತೆಗೆ ರಾಗಿಣಿಗೂ ವಿಚಾರಣೆ ಭಯ ಶುರುವಾಗಿದೆ.

ಕೌಂಟ್​ಡೌನ್.. ಕಿಕ್ಕೇರಿಸಿಕೊಂಡು ಕುಣಿದವ್ರಿಗೆ.. ಮತ್ತಿನ ಅಮಲಲ್ಲಿ ತೇಲಾಡಿದವ್ರಿಗೆ.. ನಂಜಿನ ನಂಟು ಹೊಂದಿರೋ ನಟ-ನಟಿಯರಿಗೆ ಕೌಂಟ್​ಡೌನ್​​ ಶುರುವಾಗಿದೆ. ಯಾಕಂದ್ರೆ, ಡ್ರಗ್ಸ್ ದುನಿಯಾದ ಇಂಚಿಂಚನ್ನೂ ಜಾಲಾಡ್ತಿರೋ ಅಧಿಕಾರಿಗಳು ತಮ್ಮ ಶಿಕಾರಿ ಶುರುಮಾಡಿದ್ದಾರೆ. ಈ ಪೈಕಿ ಸ್ಟಾರ್​​ ನಟಿಯ ಸ್ನೇಹಿತನನ್ನ ವಶಕ್ಕೆ ಪಡೆದಿದ್ದಾರೆ.

ಡ್ರಗ್ಸ್​​ ಜಾಲದ ನಂಟಿನ ಶಂಕೆ.. ನಟಿ ರಾಗಿಣಿ ಸ್ನೇಹಿತ ವಶಕ್ಕೆ ಡ್ರಗ್ಸ್​ ದುನಿಯಾದ ನಂಟು, ಚಂದನವನಕ್ಕೆ ಕಪ್ಪು ಚುಕ್ಕೆ ಯಾಗ್ತಿದೆ. ಅಮಲಿನ ಜಾಲದ ಆಳ-ಅಗಲವನ್ನ ಬಗೆಯುತ್ತಿರೋ ಸಿಸಿಬಿ ಪಡೆ, ತನ್ನ ಮೊದಲ ಬೇಟೆಯಾಡಿದೆ. ಸ್ಯಾಂಡಲ್​ವುಡ್​ ನಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸ್ನೇಹಿತ ರವಿಶಂಕರ್​ರನ್ನ ವಶಕ್ಕೆ ಪಡೆದಿದ್ದಾರೆ. ಹಾಗೇ, ರಾಗಿಣಿಗೂ ವಿಚಾರಣೆ ತೂಗುಗತ್ತಿ ಎದುರಾಗಿದೆ.

ಸ್ನೇಹಿತನ ವಿಚಾರಣೆ.. ರಾಗಿಣಿಗೂ ನೋಟಿಸ್..!? ಕನ್ನಡದ ಕೆಲ ಸಿನಿಮಾಗಳಲ್ಲಿ ರವಿಶಂಕರ್​ ನಟಿಸಿದ್ದು, ಸದ್ಯ ಆತನನ್ನ ವಶಕ್ಕೆ ಪಡೆದು ಸಿಸಿಬಿ ವಿಚಾರಣೆ ನಡೆಸ್ತಿದೆ. ಇನ್ನು, ರಾಗಿಣಿಗೂ ನೋಟಿಸ್​ ನೀಡುವ ಸಾಧ್ಯತೆ ಇದ್ದು, ನಾಳೆ ಬೆಳಗ್ಗೆ 10 ಗಂಟೆಗೆ ಅವ್ರು ಸಿಸಿಬಿ ಕಚೇರಿಗೆ ಬರಲಿದ್ದಾರೆ ಎನ್ನಲಾಗ್ತಿದೆ. ಅಂದಹಾಗೇ, ಈ ಹಿಂದೆ ಅಶೋಕ್​ನಗರದ ಪಬ್​ವೊಂದ್ರಲ್ಲಿ ಗಲಾಟೆಯಾಗಿತ್ತು. ಈ ವೇಳೆ ರವಿಶಂಕರ್ ಮತ್ತು​​​​​ ರಾಗಿಣಿಯ ಮತ್ತೊಬ್ಬ ಸ್ನೇಹಿತನ ನಡುವೆ ಗಲಾಟೆಯಾಗಿತ್ತು.

ವಿಚಾರಣೆಗೆ ಬರುವಂತೆ ನಟ-ನಟಿಯರಿಗೆ ನೋಟಿಸ್ ಇನ್ನು, ನಂಜಿನ ನಂಟು ಹೊಂದಿರುವ ಆರೋಪದಡಿ ಹಲವು ನಟ-ನಟಿಯರಿಗೆ ಸಿಸಿಬಿ ನೋಟಿಸ್​ ಕೊಟ್ಟಿದೆ. ಎರಡು ದಿನದೊಳಗೆ ಅವ್ರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಮತ್ತೊಂದೆಡೆ, ಡ್ರಗ್ಸ್​ ದಂಧೆಯಲ್ಲಿ ಬಂಧಿತನಾಗಿರೋ ಅನೂಪ್​ಗೆ ಮಲಯಾಳಂ ನಟರ ಜತೆ ಲಿಂಕ್​ ಇರೋದು ಗೊತ್ತಾಗಿದೆ. ಅನೂಪ್​​​​ ನಡೆಸ್ತಿದ್ದ ರೆಸ್ಟೋರೆಂಟ್​​ಗೆ ನಟ ಬಿನೀಶ್​ ಕೊಡಿಯೇರಿ ಫಂಡಿಂಗ್​ ಮಾಡಿರೋದು ಎನ್​​ಸಿಬಿ ವಿಚಾರಣೆಯಲ್ಲಿ ಗೊತ್ತಾಗಿದೆ. ಅಲ್ಲದೆ, 2015ರಲ್ಲಿ ಕಮ್ಮನಹಳ್ಳಿಯಲ್ಲಿ ಅನೂಪ್ ರೆಸ್ಟೋರೆಂಟ್​​​​​​​​​ ಆರಂಭಿಸಿದ್ದು, ಆಫ್ರಿಕನ್​ ಪ್ರಜೆಗಳಿಂದ ಎಂಡಿಎಂಎ ಖರೀದಿ ಮಾಡ್ತಿದ್ದೆ ಅಂತ ಬಾಯ್ಬಿಟ್ಟಿದ್ದಾನೆ.

ಒಟ್ನಲ್ಲಿ, ಡ್ರಗ್ಸ್​ ದಂಧೆ ಪ್ರಕರಣದಿಂದಾಗಿ ಗಂಧದಗುಡಿಗೆ ಗರಬಡಿದಂತೆ ಆಗ್ಬಿಟ್ಟಿದೆ. ಪ್ರಕರಣದಲ್ಲಿ ಸದ್ಯ ಸಿಸಿಬಿ ಶಿಕಾರಿ ಆರಂಭಿಸಿದ್ದು, ಅದ್ಯಾವ ನಟರ ಹೆಸ್ರು ಹೊರ ಬರುತ್ತೋ ನೋಡ್ಬೇಕು.

Published On - 7:29 am, Thu, 3 September 20

ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ
ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ
ಗಂಡನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ
ಗಂಡನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ
ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ: ಗುಡುಗಿದ ಹೆಚ್​​ಡಿ ಕುಮಾರಸ್ವಾಮಿ
ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ: ಗುಡುಗಿದ ಹೆಚ್​​ಡಿ ಕುಮಾರಸ್ವಾಮಿ
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ