ಕ್ರೈಂ ಪ್ರಕರಣಗಳು ಚೇಂಬರ್​ ವ್ಯಾಪ್ತಿಗೆ ಬರೋಲ್ಲ: ಫಿಲಂ ಚೇಂಬರ್​ಗೆ ತಿರುಗೇಟು ನೀಡಿದ ಇಂದ್ರಜಿತ್

Ayesha Banu

| Edited By: ಸಾಧು ಶ್ರೀನಾಥ್​

Updated on:Sep 03, 2020 | 11:11 AM

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟಿದೆ ಎಂಬ ಆರೋಪ ಮಾಡಿ ಧ್ವನಿ ಎತ್ತಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ನಶೆಯ ವಿಚಾರಕ್ಕೆ ಸಂಬಂಧಿಸಿ ಮಾದಕ ಲೋಕದ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ನನ್ನ ಹೇಳಿಕೆಗಳಿಗೆ ನಾನು ಬದ್ಧನಾಗಿದ್ದೇನೆ. ಸಿಸಿಬಿಗೆ ಏನು ದಾಖಲೆ ನೀಡಿದ್ದೇನೆಂದು ನನ್ನನ್ನು ಕೇಳಬೇಡಿ. ಸಿಸಿಬಿ ವಿಚಾರಣೆಗೆ ನಾನು ಸಹಕಾರ ನೀಡುತ್ತೇನೆ. ಆದ್ರೆ ನಾನು ಏನು ದಾಖಲೆ ಕೊಟ್ಟಿದ್ದೇನೆಂಬುದರ ಬಗ್ಗೆ ಹೇಳಲ್ಲ. ನನಗೆ ಗೊತ್ತಿರುವ ಮಾಹಿತಿಯನ್ನು ಸಿಸಿಬಿಗೆ ಹೇಳಿದ್ದೇನೆ. ನನ್ನ ಬ್ಯಾಗ್‌ನಲ್ಲಿ ಹಾರ್ಡ್‌ಡಿಸ್ಕ್, ಐಪ್ಯಾಡ್ ಮಾತ್ರ […]

ಕ್ರೈಂ ಪ್ರಕರಣಗಳು ಚೇಂಬರ್​ ವ್ಯಾಪ್ತಿಗೆ ಬರೋಲ್ಲ: ಫಿಲಂ ಚೇಂಬರ್​ಗೆ ತಿರುಗೇಟು ನೀಡಿದ ಇಂದ್ರಜಿತ್
Follow us

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟಿದೆ ಎಂಬ ಆರೋಪ ಮಾಡಿ ಧ್ವನಿ ಎತ್ತಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ನಶೆಯ ವಿಚಾರಕ್ಕೆ ಸಂಬಂಧಿಸಿ ಮಾದಕ ಲೋಕದ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ನನ್ನ ಹೇಳಿಕೆಗಳಿಗೆ ನಾನು ಬದ್ಧನಾಗಿದ್ದೇನೆ. ಸಿಸಿಬಿಗೆ ಏನು ದಾಖಲೆ ನೀಡಿದ್ದೇನೆಂದು ನನ್ನನ್ನು ಕೇಳಬೇಡಿ. ಸಿಸಿಬಿ ವಿಚಾರಣೆಗೆ ನಾನು ಸಹಕಾರ ನೀಡುತ್ತೇನೆ. ಆದ್ರೆ ನಾನು ಏನು ದಾಖಲೆ ಕೊಟ್ಟಿದ್ದೇನೆಂಬುದರ ಬಗ್ಗೆ ಹೇಳಲ್ಲ. ನನಗೆ ಗೊತ್ತಿರುವ ಮಾಹಿತಿಯನ್ನು ಸಿಸಿಬಿಗೆ ಹೇಳಿದ್ದೇನೆ. ನನ್ನ ಬ್ಯಾಗ್‌ನಲ್ಲಿ ಹಾರ್ಡ್‌ಡಿಸ್ಕ್, ಐಪ್ಯಾಡ್ ಮಾತ್ರ ಇದೆ.ಅದರೊಳಗೆ ಏನಿದೆ ಎಂಬುದನ್ನು ನಾನು ಹೇಳುವುದಿಲ್ಲ. ದಾಖಲೆ ನೀಡಿಲ್ಲ ಎಂದರೆ ಸಿಸಿಬಿಯವರನ್ನೇ ಕೇಳಬೇಕು ಎಂದಿದ್ದಾರೆ,

ಶೇಕಡಾ 95ರಷ್ಟು ಕನ್ನಡ ಚಿತ್ರರಂಗ ಕ್ಲೀನ್ ಆಗಿದೆ: ಆರೋಪಗಳು ಸುರಿ ಮಳೆ ಸುರಿಸಿದ್ದ ಇಂದ್ರಜಿತ್ ಶೇಕಡಾ 95ರಷ್ಟು ಕನ್ನಡ ಚಿತ್ರರಂಗ ಕ್ಲೀನ್ ಆಗಿದೆ. ಕೇವಲ ಶೇ.5ರಷ್ಟು ಕನ್ನಡ ಚಿತ್ರರಂಗದವರು ಜಾಲದಲ್ಲಿದ್ದಾರೆ ಎಂದಿದ್ದಾರೆ. ಅಲ್ಲದೆ ಈಗ ಬಂದಿರುವ 3ನೇ ಪೀಳಿಗೆಯ ಕೆಲವರು ಮಾತ್ರ ಇದರಲ್ಲಿ ಸಕ್ರಿಯರಾಗಿದ್ದಾರೆ. ಕಿಂಗ್‌ಪಿನ್ ಅನಿಕಾ 4 ಪುಟಗಳ ಹೇಳಿಕೆಯನ್ನು ನೀಡಿದ್ದಾರೆ. ಡ್ರಗ್ಸ್ ಜಾಲದಲ್ಲಿ ಭಾಗಿಯಾದವರ ಮಾಹಿತಿ ನೀಡಿದ್ದಾರೆ. ನಾನು ಕೂಡ ನನಗೆ ತಿಳಿದಿರುವ ಮಾಹಿತಿಯನ್ನು ನೀಡಿದ್ದೇನೆ. ನಾನು ಕೂಡ ಈಗ ಮುಂದೆ ಬರುತ್ತಿರಲಿಲ್ಲ. 3-4 ಪ್ರಕರಣಗಳು ಮರುಕಳಿಸಿದಾಗ ನಾನು ಮುಂದೆ ಬಂದೆ. ಕನ್ನಡ ಚಿತ್ರರಂಗದವರೇ ಡ್ರಗ್ಸ್ ಜಾಲದ ಬಗ್ಗೆ ತನಿಖೆ ಮಾಡುವುದಕ್ಕೆ ಸಿಸಿಬಿಗೆ ಸಹಕಾರ ನೀಡಿದರೆ ಒಳ್ಳೆಯದು.

ಕ್ರೈಂ ಪ್ರಕರಣಗಳು ಚೇಂಬರ್​ ವ್ಯಾಪ್ತಿಗೆ ಬರೋಲ್ಲ: ನಮ್ಮ ಫಿಲ್ಮ್ ಚೇಂಬರ್ ಕನ್ನಡ ಸಿನಿಮಾಗಳು, ನಿರ್ಮಾಪಕರು, ನಟರ ಬಗ್ಗೆ ಮಾತ್ರ ನೋಡಿಕೊಳ್ತಾರೆ. ಕ್ರೈಂ ಅಂತ ಬಂದಾಗ ಅವರ ವ್ಯಾಪ್ತಿಗೆ ಇದು ಬರುವುದಿಲ್ಲ ಎಂದು ಬೆಂಗಳೂರಲ್ಲಿ ಸುದ್ದಿಗೋಷ್ಠಿ ವೇಳೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರಸ್ಥಾಪಿಸಿದ್ರು.

ತಾಜಾ ಸುದ್ದಿ

Related Stories

Click on your DTH Provider to Add TV9 Kannada