ನೋಟಿಸ್​ ನೀಡಲು CCB ಅಧಿಕಾರಿಗಳ ಕೈಗೆ ಸಿಗ್ತಿಲ್ವಾ ಌಂಕರ್​ ಅನುಶ್ರೀ?

| Updated By: ಸಾಧು ಶ್ರೀನಾಥ್​

Updated on: Sep 24, 2020 | 4:19 PM

ಬೆಂಗಳೂರು: ಮಂಗಳೂರಲ್ಲಿ ಡ್ಯಾನ್ಯರ್ ಕಂ ಬಾಲಿವುಡ್ ನಟ ಕಿಶೋರ್ ಶೆಟ್ಟಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಌಂಕರ್ ಅನುಶ್ರೀಗೆ ಸಿಸಿಬಿಯಿಂದ ನೋಟಿಸ್​ ಜಾರಿಯಾಗಿದೆ. ಹೀಗಾಗಿ, ಇಂದು WhatsApp ಮೂಲಕ ಌಂಕರ್ ಅನುಶ್ರೀಗೆ ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್ ಜಾರಿಮಾಡಿರುವ ಜೊತೆಗೆ ಅಧಿಕಾರಿಗಳ ತಂಡವೊಂದು ಬೆಂಗಳೂರಿಗೆ ಆಗಮಿಸಿದೆ. 4-5 ಸಿಸಿಬಿ ಪೊಲೀಸರ ತಂಡವು ಅನುಶ್ರೀ ನಿವಾಸಕ್ಕೆ ಆಗಮಿಸಿತು. ಆದರೆ, ಮನೆಯಲ್ಲಿ ಅನುಶ್ರೀ ಸಿಗದ ಕಾರಣ ಬೆಂಗಳೂರಿನ ಅನುಶ್ರೀ ಕಚೇರಿಯತ್ತ ಸಿಸಿಬಿ ತಂಡವು ತೆರಳಿದೆ. ‘ನನಗೆ ಸಿಸಿಬಿಯಿಂದ ಯಾವುದೇ ನೋಟಿಸ್​ […]

ನೋಟಿಸ್​ ನೀಡಲು CCB ಅಧಿಕಾರಿಗಳ ಕೈಗೆ ಸಿಗ್ತಿಲ್ವಾ ಌಂಕರ್​ ಅನುಶ್ರೀ?
Follow us on

ಬೆಂಗಳೂರು: ಮಂಗಳೂರಲ್ಲಿ ಡ್ಯಾನ್ಯರ್ ಕಂ ಬಾಲಿವುಡ್ ನಟ ಕಿಶೋರ್ ಶೆಟ್ಟಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಌಂಕರ್ ಅನುಶ್ರೀಗೆ ಸಿಸಿಬಿಯಿಂದ ನೋಟಿಸ್​ ಜಾರಿಯಾಗಿದೆ.

ಹೀಗಾಗಿ, ಇಂದು WhatsApp ಮೂಲಕ ಌಂಕರ್ ಅನುಶ್ರೀಗೆ ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್ ಜಾರಿಮಾಡಿರುವ ಜೊತೆಗೆ ಅಧಿಕಾರಿಗಳ ತಂಡವೊಂದು ಬೆಂಗಳೂರಿಗೆ ಆಗಮಿಸಿದೆ.

4-5 ಸಿಸಿಬಿ ಪೊಲೀಸರ ತಂಡವು ಅನುಶ್ರೀ ನಿವಾಸಕ್ಕೆ ಆಗಮಿಸಿತು. ಆದರೆ, ಮನೆಯಲ್ಲಿ ಅನುಶ್ರೀ ಸಿಗದ ಕಾರಣ ಬೆಂಗಳೂರಿನ ಅನುಶ್ರೀ ಕಚೇರಿಯತ್ತ ಸಿಸಿಬಿ ತಂಡವು ತೆರಳಿದೆ.

‘ನನಗೆ ಸಿಸಿಬಿಯಿಂದ ಯಾವುದೇ ನೋಟಿಸ್​ ಬಂದಿಲ್ಲ’
ಈ ನಡುವೆ ನನಗೆ ಸಿಸಿಬಿಯಿಂದ ಯಾವುದೇ ನೋಟಿಸ್​ ಬಂದಿಲ್ಲ ಎಂದು ಟಿವಿ 9ಗೆ ಌಂಕರ್​ ಅನುಶ್ರೀ ಪ್ರತಿಕ್ರಿಯಿಸಿದ್ದಾರೆ. ನಾನು ಮನೆಯಲ್ಲೇ ಇದ್ದೇನೆ. ನಮ್ಮ ಮನೆಗೆ ಯಾರೂ ಬಂದಿಲ್ಲ. ಪ್ರತೀಕ್ ಶೆಟ್ಟಿ ಮತ್ತು ಕಿಶೋರ್​ ಇಬ್ಬರೂ ನನಗೆ ಪರಿಚಯ. ನಾನು ಇವರ ಯಾವುದೇ ಪಾರ್ಟಿಗಳಿಗೆ ಹೋಗಿರಲಿಲ್ಲ. ನಾನು ಯಾವ ತಪ್ಪೂ ಮಾಡಿಲ್ಲ, ನನಗೆ ಯಾವುದೇ ಆತಂಕವಿಲ್ಲ. ಎಂದು ಅನುಶ್ರೀ ಹೇಳಿದ್ದಾರೆ.

ಪ್ರತೀಕ್ ಶೆಟ್ಟಿ ಮತ್ತು ಕಿಶೋರ್​ಗೆ ಕಾಲ್ ಮಾಡಿ ವರ್ಷಗಳೇ ಆಗಿವೆ. ಕಳೆದ 2-3 ವರ್ಷಗಳಿಂದ ನಾನು ಅವರನ್ನು ಭೇಟಿಯಾಗಿಲ್ಲ. ಪ್ರತೀಕ್ ಶೆಟ್ಟಿ ಮತ್ತು ಕಿಶೋರ್ ವ್ಯವಹಾರಗಳ ಬಗ್ಗೆ ಮಾಹಿತಿ ಇಲ್ಲ. ಸಿಸಿಬಿ ನೋಟಿಸ್​ ಸಿಕ್ಕ ಕೂಡಲೇ ವಿಚಾರಣೆಗೆ ಹಾಜರಾಗ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕೊರೊನಾದಿಂದ ಕಂಗೆಟ್ಟ ಜೀವನ! ವಿಡಿಯೋದಲ್ಲಿ ಅನುಶ್ರೀ ಭಾವನೆಗಳ ಮೆರವಣಿಗೆ!