ರಾಗಿಣಿ ಹಾದಿಯಲ್ಲೇ ಸಂಜನಾಗೂ CCB ಬಲೆ? ನಟಿ ಆಪ್ತ ರಾಹುಲ್ ಬಂಧನ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ CCB ಅಧಿಕಾರಿಗಳಿಂದ ನಟಿ ಸಂಜನಾ ಗಲ್ರಾನಿ ಆಪ್ತ ಎಂದು ಹೇಳಲಾಗುವ ರಾಹುಲ್ ಬಂಧನವಾಗಿದೆ. ನಿನ್ನೆಯಿಂದ ರಾಹುಲ್​ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಗಳು ಇಂದು ಆತನನ್ನ ಅಧಿಕೃತವಾಗಿ ಬಂಧಿಸಿದ್ದಾರೆ. ರಾಹುಲ್ ಬಂಧನ ಪ್ರಕ್ರಿಯೆ ಮಾಡಿಕೊಳ್ತಿರುವ ಅಧಿಕಾರಿಗಳು ಬಳಿಕ ನ್ಯಾಯಾಧೀಶರ ಮುಂದೆ ಆರೋಪಿ ರಾಹುಲ್​ನ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಿದ್ದಾರೆ. ಇದೀಗ, ನಟಿ ರಾಗಿಣಿ ಮಾದರಿಯಲ್ಲೇ CCB ಸಂಜನಾಗೂ ಬಲೆ ಬೀಸಿದ್ದು ರಾಹುಲ್ ಬಂಧನದ ಬಳಿಕ ನಟಿಗೂ ನೋಟಿಸ್ ನೀಡುವ […]

ರಾಗಿಣಿ ಹಾದಿಯಲ್ಲೇ ಸಂಜನಾಗೂ CCB ಬಲೆ? ನಟಿ ಆಪ್ತ ರಾಹುಲ್ ಬಂಧನ
Edited By:

Updated on: Sep 04, 2020 | 4:30 PM

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ CCB ಅಧಿಕಾರಿಗಳಿಂದ ನಟಿ ಸಂಜನಾ ಗಲ್ರಾನಿ ಆಪ್ತ ಎಂದು ಹೇಳಲಾಗುವ ರಾಹುಲ್ ಬಂಧನವಾಗಿದೆ. ನಿನ್ನೆಯಿಂದ ರಾಹುಲ್​ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಗಳು ಇಂದು ಆತನನ್ನ ಅಧಿಕೃತವಾಗಿ ಬಂಧಿಸಿದ್ದಾರೆ. ರಾಹುಲ್ ಬಂಧನ ಪ್ರಕ್ರಿಯೆ ಮಾಡಿಕೊಳ್ತಿರುವ ಅಧಿಕಾರಿಗಳು ಬಳಿಕ ನ್ಯಾಯಾಧೀಶರ ಮುಂದೆ ಆರೋಪಿ ರಾಹುಲ್​ನ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಿದ್ದಾರೆ.

ಇದೀಗ, ನಟಿ ರಾಗಿಣಿ ಮಾದರಿಯಲ್ಲೇ CCB ಸಂಜನಾಗೂ ಬಲೆ ಬೀಸಿದ್ದು ರಾಹುಲ್ ಬಂಧನದ ಬಳಿಕ ನಟಿಗೂ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಸಂಜೆಯೊಳಗೆ ನಟಿ ಸಂಜನಾಗೆ ನೋಟಿಸ್ ನೀಡುವ ಸಾಧ್ಯತೆಯಿದ್ದು ಅದಕ್ಕೆ ಸಿಸಿಬಿ‌ ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಎಲ್ಲೂ ಓಡಿಹೋಗಿಲ್ಲ, ಓಡಿ ಹೋಗೊಕ್ಕೆ ನಾನೇನು ಟೆರರಿಸ್ಟಾ? CCBಯಿಂದ ನನಗೇನೂ ಕರೆ ಬರೋಲ್ಲ’

Published On - 4:13 pm, Fri, 4 September 20