[lazy-load-videos-and-sticky-control id=”UdX3iNLS-_0″]
ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ಗೂ ಡ್ರಗ್ಸ್ ದಂಧೆಗೂ ಲಿಂಕ್ ಇರುವ ಸಾಧ್ಯತೆ ಕಂಡುಬಂದಿದ್ದು ಇದರ ಬಗ್ಗೆಯೂ CCB ಪೊಲೀಸರ ತಂಡ ತನಿಖೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ನಶೆ ನಂಟಿನ ಆರೋಪದ ಜೊತೆ ರಾಗಿಣಿಗೆ ಎದುರಾಗುತ್ತಾ ಮತ್ತೊಂದು ತಲೆನೋವು?
ಸದ್ಯ CCB ವಶದಲ್ಲಿರುವ ನಟಿ ರಾಗಿಣಿ ದ್ವಿವೇದಿ KPLನ ಬಳ್ಳಾರಿ ಟಸ್ಕರ್ಸ್ ತಂಡದ ಸಹ ಮಾಲೀಕತ್ವ ಹೊಂದಿದ್ದರು ಎಂದು ತಿಳಿದುಬಂದಿದೆ. ಹಾಗಾಗಿ, KPL ಆಟಗಾರರಿಗೂ ಡ್ರಗ್ಸ್ ಸಪ್ಲೈ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಜೊತೆಗೆ, ಈ ಹಿಂದೆ ಬಳ್ಳಾರಿ ತಂಡದ ಹಲವು ಆಟಗಾರರು ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಬಂಧನಕ್ಕೆ ಒಳಗಾಗಿದ್ದರು. ಬುಕ್ಕಿಂಗ್‌ನಲ್ಲಿ ಕೆಲವು ಆಟಗಾಗರರನ್ನ ಮತ್ತು ಟೀಮ್ ಮಾಲೀಕರನ್ನ ಸಹ ಬಂಧಿಸಿದ್ದರು. ಹೀಗಾಗಿ, CCB ಅಧಿಕಾರಿಗಳು ಸಂಪೂರ್ಣ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.
ಇದಲ್ಲದೆ, ಹನಿಟ್ರ್ಯಾಪ್ ಆಗಿರುವುದು ಸಹ ಬೆಳಕಿಗೆ ಬಂದಿತ್ತು. ಮಾಡೆಲ್ ಮತ್ತು ಕೆಲವು ನಟಿಯರನ್ನ ಬಳಸಿ ಹನಿಟ್ರ್ಯಾಪ್ ಮಾಡಿಸಿರುವ ಪ್ರಕರಣವು ನಡೆದಿತ್ತು. ಹಾಗಾಗಿ, CCB ಅಧಿಕಾರಿಗಳು ಎಲ್ಲಾ ಆಯಾಮಗಳನ್ನು ಕುರಿತು ಸಮಗ್ರ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Published On - 11:21 am, Mon, 7 September 20