ಬೆಂಗಳೂರು: ಎಂಟು ತಿಂಗಳ ನಂತರ ಸಿನಿಮಾ ಚಟುವಟಿಕೆ ಆರಂಭವಾಗಿರೋದು ಖುಷಿ ಕೊಟ್ಟಿದೆ. ಸೆಟ್ಟಲ್ಲಿ ನಮಗೆಲ್ಲಾ ಕೊಡುತ್ತಿದ್ದ ಇಡ್ಲಿ, ವಡೆ ಮಿಸ್ ಮಾಡಿಕೊಂಡಿದ್ದೆ ಎಂದು ನಟ ದರ್ಶನ್ ಹೇಳಿದರು.
ರಾಜರಾಜೇಶ್ವರಿನಗರದ ಶೃಂಗಗಿರಿ ಷಣ್ಮುಖ ದೇವಸ್ಥಾನದಲ್ಲಿ ನಡೆದ ಭಗವಾನ್ ಶ್ರೀಕೃಷ್ಣಪರಮಾತ್ಮ ಸಿನಿಮಾದ ಮುಹೂರ್ತದಲ್ಲಿ ಭಾಗಿಯಾಗಿದ್ದರು.
ಎಲ್ಲವೂ ಸರಿ ಹೋದ್ಮೇಲೆ ರಾಬರ್ಟ್ ರಿಲೀಸ್ ಆಗಲಿದೆ. ಇನ್ನು ದಸರಾ ಮಿಸ್ ಮಾಡಿಕೊಳ್ಳೋ ಬಗ್ಗೆ ಮಾತನಾಡಿದ ನಟ ಎಲ್ಲರೂ ದಸರಾ ಮಿಸ್ ಮಾಡ್ಕೊಂಡಿದ್ದಾರೆ. ಆದರೆ, ನಾನ್ ಮಾತ್ರ ಅಲ್ಲ ಎಂದು ದರ್ಶನ್ ಹೇಳಿದರು.