ದರ್ಶನ್ರಿಂದ ನೀಲಕಂಠೇಶ್ವರನಿಗೆ ಮೊದಲ ಪೂಜೆ, ಅಭಿಮಾನಿಗಳಿಂದ ಡಿ ಬಾಸ್ ಜಪ
ಚಿತ್ರದುರ್ಗ: ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲಿ ಆಳವಾಗಿ ಬೇರೂರಿರುವ ಕೋಟೆನಾಡು ಚಿತ್ರದುರ್ಗಕ್ಕೆ ಅದರದ್ದೇ ಆದ ಇತಿಹಾಸ, ಮಹತ್ವ, ಸ್ಥಳ ಮಹಾತ್ಮೆ ಇದೆ. ಚಿತ್ರದುರ್ಗ ಬೆಟ್ಟಕ್ಕೇ ಒಂದು ಪಾತ್ರ ರೂಪ ತಂದುಕೊಟ್ಟು ಜನಮನದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಿದ ಕೀರ್ತಿ ಕೀರ್ತಿಶೇಷ ಪುಟ್ಟಣ್ಣ ಕಣಗಾಲ್ ಅವರದ್ದು. ಅಂತಹ ಸ್ಥಳಕ್ಕೆ ನಮ್ಮ ಚಿತ್ರೋದ್ಯಮದವರು ಆಗಾಗ ಭೇಟಿ ನೀಡಿ, ಶೂಟಿಂಗ್ ನಡೆಸುವುದು ಸಾಮಾನ್ಯ. ತಾಜಾ ಆಗಿ, ಗಂಡುಗಲಿ ಮದಕರಿನಾಯಕ ಚಿತ್ರತಂಡ ಆಗಮಿಸಿದೆ. ನೀಲಕಂಠೇಶ್ವರನಿಗೆ ಮೊದಲ ಪೂಜೆ, ಅಭಿಮಾನಿಗಳಿಂದ ಡಿ ಬಾಸ್ ಜಪ: ನಟ ಚಾಲೆಂಜಿಂಗ್ […]
ಚಿತ್ರದುರ್ಗ: ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲಿ ಆಳವಾಗಿ ಬೇರೂರಿರುವ ಕೋಟೆನಾಡು ಚಿತ್ರದುರ್ಗಕ್ಕೆ ಅದರದ್ದೇ ಆದ ಇತಿಹಾಸ, ಮಹತ್ವ, ಸ್ಥಳ ಮಹಾತ್ಮೆ ಇದೆ. ಚಿತ್ರದುರ್ಗ ಬೆಟ್ಟಕ್ಕೇ ಒಂದು ಪಾತ್ರ ರೂಪ ತಂದುಕೊಟ್ಟು ಜನಮನದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಿದ ಕೀರ್ತಿ ಕೀರ್ತಿಶೇಷ ಪುಟ್ಟಣ್ಣ ಕಣಗಾಲ್ ಅವರದ್ದು. ಅಂತಹ ಸ್ಥಳಕ್ಕೆ ನಮ್ಮ ಚಿತ್ರೋದ್ಯಮದವರು ಆಗಾಗ ಭೇಟಿ ನೀಡಿ, ಶೂಟಿಂಗ್ ನಡೆಸುವುದು ಸಾಮಾನ್ಯ. ತಾಜಾ ಆಗಿ, ಗಂಡುಗಲಿ ಮದಕರಿನಾಯಕ ಚಿತ್ರತಂಡ ಆಗಮಿಸಿದೆ.
ನೀಲಕಂಠೇಶ್ವರನಿಗೆ ಮೊದಲ ಪೂಜೆ, ಅಭಿಮಾನಿಗಳಿಂದ ಡಿ ಬಾಸ್ ಜಪ: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಪೋಷಕ ನಟ ದೊಡ್ಡಣ್ಣ, ಶ್ರೀನಿವಾಸ್ ಮೂರ್ತಿ ಆಗಮಿಸಿದ್ದಾರೆ. ಕಾದಂಬರಿಕಾರರೂ ಆದ ಸ್ಥಳೀಯ ಬಿ.ಎಲ್.ವೇಣು ಅವರೂ ಸಹ ಈ ಸಂದರ್ಭದಲ್ಲಿ ಉಪಸ್ಥಿತಿರಿದ್ದರು. ಆರಂಭದಲ್ಲಿ ನೀಲಕಂಠೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಆವರಣದಲ್ಲಿ ದರ್ಶನ್ ಅಭಿಮಾನಿಗಳು ವಾದ್ಯದ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿ ಸಂಭ್ರಮಿಸಿದರು. ಡಿ ಬಾಸ್ ಗೆ ಜೈಕಾರದ ಘೋಷಣೆ ಮೂಲಕ ಆದರದ ಸ್ವಾಗತ ಕೋರಿದರು. ಈ ವೇಳೆ, ಅಭಿಮಾನಿಗಳನ್ನು ನಿಯಂತ್ರಿಸಲು ಪೋಲಿಸರು ಹರಸಾಹಸಪಟ್ಟರು.