ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ‘ದಚ್ಚು-ಕಿಚ್ಚ’ನ ಫ್ಯಾನ್ಸ್ ಕಿತ್ತಾಟ ಜೋರಾಗಿಯೇ ಇದೆ. ದರ್ಶನ್ ಫ್ಯಾನ್ಸ್ ಸುದೀಪ್ ವಿರುದ್ಧ ಆರೋಪ ಮಾಡಿದ್ರೆ, ಸುದೀಪ್ ಫ್ಯಾನ್ಸ್ ದರ್ಶನ್ ವಿರುದ್ಧ ಪ್ರತ್ಯಾರೋಪ ಮಾಡ್ತಿದ್ದಾರೆ.
ಇದೀಗ ಇವರಿಬ್ಬರ ನಡುವೆ ಫ್ಯಾನ್ಸ್ ವಾರ್ ಹುಟ್ಟಿಕೊಳ್ಳಲು ಕಾರಣವೇನೆಂದರೆ, ಇತ್ತೀಚೆಗೆ ತೆರೆಕಂಡ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಪೈರಸಿಯಾಗಿತ್ತು. ಇದಕ್ಕೆ ದರ್ಶನ್ ಅಭಿಮಾನಿಗಳೇ ಕಾರಣ ಎಂದು ಸುದೀಪ್ ಅಭಿಮಾನಿಗಳು ದೂರಿದ್ದರು. ಇದರಿಂದ ಕೆರಳಿದ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್ ಹೆಸರು ಬಳಸದೆ ಬಹಿರಂಗ ಪತ್ರ ಬರೆದು ಪರೋಕ್ಷವಾಗಿ ಟಾಂಗ್ ನೀಡಿದ್ರು. ಇದಕ್ಕೆ ಮತ್ತೆ ಕಿಚ್ಚನ ಫ್ಯಾನ್ಸ್ ಬಹಿರಂಗ ಪತ್ರ ಬರೆದು ದರ್ಶನ್ ಫ್ಯಾನ್ಸ್ಗೆ ಟಕ್ಕರ್ ನೀಡಿದ್ದಾರೆ.
ಆದ್ರೆ ಇದೀಗ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವಿಟ್ಟರ್ನಲ್ಲಿ ಪರೋಕ್ಷವಾಗಿ ವಾರ್ನಿಂಗ್ ನೀಡಿದ್ದಾರೆ. ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದೇನೆ. ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು, ಪ್ರಚೋದಿಸಲು ಬರದಿರಿ ಎಂದು ಕೆಲ ವ್ಯಕ್ತಿಗಳಿಗೆ ದರ್ಶನ್ ಕಿವಿಮಾತು ಹೇಳಿದ್ದಾರೆ.
ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು – ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ ?
— Darshan Thoogudeepa (@dasadarshan) September 17, 2019
Published On - 2:57 pm, Tue, 17 September 19