ಗ್ರ್ಯಾಂಡ್​ ಆಗಿ ನೆರವೇರಿದ ಚಂದನ್​-ಕವಿತಾ ನಿಶ್ಚಿತಾರ್ಥ; ಇಲ್ಲಿವೆ ನೋಡಿ ಫೋಟೋಗಳು

|

Updated on: Apr 01, 2021 | 8:25 PM

ಏಪ್ರಿಲ್​ 1ರಂದೇ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

1 / 7
ಅನೇಕ ವರ್ಷಗಳಿಂದ ಪ್ರೀತಿ ಮಾಡುತ್ತಾ ಇದ್ದ ಜೋಡಿ ಚಂದನ್​ ಕುಮಾರ್​ ಹಾಗೂ ಕವಿತಾ ಗೌಡ. ಇಬ್ಬರ ಪ್ರೀತಿ ವಿಚಾರ ಎಲ್ಲಿಯೂ ಬಹಿರಂಗಗೊಂಡಿರಲಿಲ್ಲ. ಈಗ ಇವರ ಪ್ರೀತಿಗೆ ನಿಶ್ಚಿತಾರ್ಥದ ಮುದ್ರೆ ಬಿದ್ದಿದೆ.

2 / 7
ಕಿರುತೆರೆ ಪ್ರೇಕ್ಷಕರ ವಲಯದಲ್ಲಿ ಸಖತ್​ ಜನಪ್ರಿಯವಾಗಿದ್ದ ‘ಲಕ್ಷ್ಮೀ ಬಾರಮ್ಮ’ ಸೀರಿಯಲ್​ನಲ್ಲಿ ಚಂದನ್​ ಕುಮಾರ್​ ಮತ್ತು ಕವಿತಾ ಜೋಡಿಯಾಗಿ ನಟಿಸಿದ್ದರು. ಆಗಿನಿಂದಲೇ ಅವರಿಬ್ಬರ ನಡುವೆ ಸ್ನೇಹ ಚಿಗುರಿತ್ತು.

3 / 7
ನಂತರದ ದಿನಗಳಲ್ಲಿ ಅವರಿಬ್ಬರ ಆಪ್ತತೆ ಹೆಚ್ಚಾಯಿತು. ಆದರೆ ಎಂದೂ ಕೂಡ ಅವರು ತಮ್ಮ ಪ್ರೀತಿ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಹಾಗಿದ್ದರೂ ನೆಟ್ಟಿಗರಿಗೆ ಗುಮಾನಿ ಶುರುವಾಗಿತ್ತು.

4 / 7
ಕವಿತಾ ಮತ್ತು ಚಂದನ್​ ಕುಮಾರ್​ ನೇರವಾಗಿ ಏನನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಹಾಗಿದ್ದರೂ ಕೂಡ ಅವರ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಅನೇಕ ಸಾಕ್ಷಿಗಳು ಸಿಗಲು ಆರಂಭಿಸಿದವು. ಇಬ್ಬರೂ ಜೊತೆಯಾಗಿ ಸುತ್ತಾಡುತ್ತಿದ್ದರು.

5 / 7
ಇತ್ತೀಚೆಗೆ ಹೊಸ ಪೋಸ್ಟ್​ ಹಾಕಿಕೊಳ್ಳುವ ಮೂಲಕ ಎಂಗೇಜ್​ಮೆಂಟ್​ ಮಾಡಿಕೊಳ್ಳುತ್ತೇನೆ ಎಂದಿದ್ದರು.

6 / 7
ಅಂತೆಯೇ ಏಪ್ರಿಲ್​ 1ರಂದೇ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

7 / 7
ಮದುವೆ ದಿನಾಂಕ ಇನ್ನಷ್ಟೇ ಅಧೀಕೃತಗೊಳ್ಳಬೇಕಿದೆ.