ಮೊಮ್ಮಗನ ಸ್ಮಾರಕದ ಮೇಲೆ ಹೂವಿನ ಮಳೆಗೆರೆದ ಅಜ್ಜಿ, ಕಣ್ಣಾಲಿಗಳು ತೇವ ತೇವ

ಬೆಂಗಳೂರು: ನಟ ಚಿರಂಜೀವಿ ಸರ್ಜಾ‌ಗೆ 36ನೇ ಹುಟ್ಟುಹಬ್ಬ ಇಂದು. ಚಿರು ನಿಧನರಾದ ನಂತರದ ಮೊದಲ ಹುಟ್ಟುಹಬ್ಬವೂ ಇದಾಗಿದೆ. ಸಂಭ್ರಮ ನೆಲೆಸಬೇಕಿದ್ದ ಜಾಗದಲ್ಲಿ ದುಃಖ ಮಡುವುಗಟ್ಟಿದೆ. ಆದರೂ ತಕ್ಕಮಟ್ಟಿಗೆ ನೆಲಗುಳಿ ಗ್ರಾಮದ ಬೃಂದಾವನ ಫಾರ್ಮ್​ ಹೌಸ್ ನಲ್ಲಿ ಚಿರು ಸಮಾಧಿಗೆ ಪೂಜೆ ನೆರವೇರಿಸುವ ಮೂಲಕ ಕುಟುಂಬಸ್ಥರು ತಮ್ಮ ದುಃಖವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಚಿರಂಜೀವಿ ಸಮಾಧಿ ಬಳಿ ಆಗಮಿಸಿದ ಚಿರಂಜೀವಿ ಸರ್ಜಾ ಅಜ್ಜಿ ಲಕ್ಷ್ಮಿದೇವಿ ಅವರು ಮೊಮ್ಮಗನ ಸ್ಮಾರಕ್ಕೆ ಹೂವುಗಳನ್ನ ಹಾಕಿ, ಪ್ರೀತಿಯ ಮಳೆಗೆರೆದರು. ಚಿರು ಹುಟ್ಟುಹಬ್ಬದ ವಿಶೇಷವಾಗಿ ಸಾಕಷ್ಟು […]

ಮೊಮ್ಮಗನ ಸ್ಮಾರಕದ ಮೇಲೆ ಹೂವಿನ ಮಳೆಗೆರೆದ ಅಜ್ಜಿ, ಕಣ್ಣಾಲಿಗಳು ತೇವ ತೇವ
Follow us
ಸಾಧು ಶ್ರೀನಾಥ್​
|

Updated on: Oct 17, 2020 | 10:36 AM

ಬೆಂಗಳೂರು: ನಟ ಚಿರಂಜೀವಿ ಸರ್ಜಾ‌ಗೆ 36ನೇ ಹುಟ್ಟುಹಬ್ಬ ಇಂದು. ಚಿರು ನಿಧನರಾದ ನಂತರದ ಮೊದಲ ಹುಟ್ಟುಹಬ್ಬವೂ ಇದಾಗಿದೆ. ಸಂಭ್ರಮ ನೆಲೆಸಬೇಕಿದ್ದ ಜಾಗದಲ್ಲಿ ದುಃಖ ಮಡುವುಗಟ್ಟಿದೆ. ಆದರೂ ತಕ್ಕಮಟ್ಟಿಗೆ ನೆಲಗುಳಿ ಗ್ರಾಮದ ಬೃಂದಾವನ ಫಾರ್ಮ್​ ಹೌಸ್ ನಲ್ಲಿ ಚಿರು ಸಮಾಧಿಗೆ ಪೂಜೆ ನೆರವೇರಿಸುವ ಮೂಲಕ ಕುಟುಂಬಸ್ಥರು ತಮ್ಮ ದುಃಖವನ್ನು ಕಡಿಮೆ ಮಾಡಿಕೊಂಡಿದ್ದಾರೆ.

ಚಿರಂಜೀವಿ ಸಮಾಧಿ ಬಳಿ ಆಗಮಿಸಿದ ಚಿರಂಜೀವಿ ಸರ್ಜಾ ಅಜ್ಜಿ ಲಕ್ಷ್ಮಿದೇವಿ ಅವರು ಮೊಮ್ಮಗನ ಸ್ಮಾರಕ್ಕೆ ಹೂವುಗಳನ್ನ ಹಾಕಿ, ಪ್ರೀತಿಯ ಮಳೆಗೆರೆದರು. ಚಿರು ಹುಟ್ಟುಹಬ್ಬದ ವಿಶೇಷವಾಗಿ ಸಾಕಷ್ಟು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿರೋ ಕುಟುಂಬಸ್ಥರು ಸಮಾಧಿ ಬಳಿ ಪೂಜೆ ಹಾಗೂ ಅನ್ನದಾನ ಕಾರ್ಯಕ್ರಮವಿಟ್ಟುಕೊಂಡಿದ್ದಾರೆ.

ಚಿರು ಹುಟ್ಟುಹಬ್ಬ ಅಂಗವಾಗಿ ಪುಟ್ಟ ಅಭಿಮಾನಿಗಳು ಬರ್ತ್ ಡೇ ಸೆಲೆಬ್ರೇಷನ್ ಮಾಡುತ್ತಿದ್ದಾರೆ. ನೆಲಗುಳಿ ಗ್ರಾಮದಲ್ಲಿರೋ ಚಿರು ಸಮಾಧಿಯತ್ತ ಆಗಮಿಸಿದ ಅಭಿಮಾನಿಗಳು ತುಸು ನಿರಾಶೆಗೊಂಡಿದ್ದಾರೆ. ಯಾರನ್ನೂ ಒಳಗೆ ಬಿಡದ ಕಾರಣ ಗೇಟಲ್ಲಿಯೇ ನಿಂತು ಅಭಿಮಾನಿಗಳು ಕೇಕ್ ಕತ್ತರಿಸುವ ಮೂಲಕ ತಮ್ಮ ನಾಯಕನಿಗೆ ಅಭಿಮಾನ ಸಲ್ಲಿಸಿದ್ದಾರೆ.

ಪತ್ನಿ ಮೇಘನಾರಿಂದ ಸಮಾಧಿ ಪೂಜೆ ಚಿರಂಜೀವಿ ಹುಟ್ಟು ಹಬ್ಬದ ಹಿನ್ನೆಲೆ ಚಿರು ಸಮಾಧಿ ಬಳಿ ಅವರ ಪತ್ನಿ ಮೇಘನಾ ರಾಜ್ ಇನ್ನೇನು ಕೆಲವೇ ಕ್ಷಣಗಳಲ್ಲಿ ಆಗಮಿಸಲಿದ್ದಾರೆ. ಹೆಣ್ಣುಕೊಟ್ಟ ಮಾವ ಸುಂದರ್ ರಾಜ್ ಕುಟುಂಬವೂ ಸಮಾಧಿ ಬಳಿ ಬಂದು ಪೂಜೆ ಮಾಡಲಿದೆ. ಮೇಘನಾ ರಾಜ್ ಸದ್ಯ ಜೆಪಿ ನಗರ ಮನೆಯಲ್ಲೆ ಇದ್ದಾರೆ. ಸಮಾಧಿಗೆ ತೆರಳಿ ಪೂಜೆ ಸಲ್ಲಿಸುತ್ತೇವೆ ಎಂದು ಸುಂದರ್ ರಾಜ್ ಇದೇ ವೇಳೆ ತಿಳಿಸಿದ್ದಾರೆ.

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ