ನಟಿ ಮೇಘನಾ ರಾಜ್ (Meghana Raj) ಅವರು ಸಿನಿಮಾ ಕೆಲಸಗಳ ಜೊತೆಯಲ್ಲೇ ಮಗನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪುತ್ರ ರಾಯನ್ ರಾಜ್ ಸರ್ಜಾ (Raayan Raj Sarja) ಫೋಟೋ ಮತ್ತು ವಿಡಿಯೋಗಳನ್ನು ಮೇಘನಾ ಅವರು ಆಗಾಗ ಹಂಚಿಕೊಳ್ಳುತ್ತಾರೆ. ಈಗ ಅವರೊಂದು ಹೊಸ ವಿಡಿಯೋ ಶೇರ್ ಮಾಡಿಕೊಂಡಿದ್ದು, ಚಿರಂಜೀವಿ ಸರ್ಜಾ (Chiranjeevi Sarja) ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬಂತೆ ರಾಯನ್ ರಾಜ್ ಸರ್ಜಾಗೆ ಮೇಘನಾ ರಾಜ್ ಅವರು ಅನೇಕ ವಿಚಾರಗಳನ್ನು ಕಲಿಸುತ್ತಿದ್ದಾರೆ. ‘ಅಮ್ಮ’ ಎಂದು ಕರೆಯುವುದನ್ನು ಅವರು ಹೇಳಿಕೊಟ್ಟಿದ್ದಾರೆ. ಆದರೆ ಒಂದೆರಡು ಬಾರಿ ಅಮ್ಮ ಎಂದು ಕರೆದ ಬಳಿಕ ಮತ್ತೆ ‘ಅಪ್ಪ’ ಎಂದು ಕೂಗಿದ್ದಾನೆ ರಾಯನ್. ಈ ವಿಡಿಯೋ ಈಗ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ.
ಪತಿಯ ನಿಧನ, ಮಗುವಿನ ಆಗಮನ, ಕೊವಿಡ್ ಕಿರಿಕಿರಿ ಸೇರಿದಂತೆ ಹಲವು ಕಾರಣಗಳಿಂದಾಗಿ ಚಿತ್ರರಂಗದಿಂದ ಬ್ರೇಕ್ ಪಡೆದುಕೊಂಡಿದ್ದ ಮೇಘನಾ ರಾಜ್ ಅವರು ಈಗಾಗಲೇ ನಟನೆಗೆ ಮರಳಿದ್ದಾರೆ. ಕಿರುತೆರೆಯ ರಿಯಾಲಿಟಿ ಶೋಗೆ ಜಡ್ಜ್ ಆಗಿ ಪಾಲ್ಗೊಳ್ಳುವ ಮೂಲಕವೂ ಅವರು ಗಮನ ಸೆಳೆದಿದ್ದಾರೆ. ಸದ್ಯ ಬ್ಯುಸಿ ಆಗಿರುವ ಅವರು ಮಗನ ಆರೈಕೆಗೂ ಹೆಚ್ಚು ಸಮಯ ನೀಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಆಗಾಗ ಅಪ್ಡೇಟ್ ನೀಡುತ್ತಿರುತ್ತಾರೆ.
ಚಿರಂಜೀವಿ ಸರ್ಜಾ ನಟಿಸಿರುವ ‘ರಾಜಮಾರ್ತಾಂಡ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇದರ ಟೀಸರ್ ಅನ್ನು ರಾಯನ್ ರಾಜ್ ಸರ್ಜಾ ಕೈಯಿಂದ ರಿಲೀಸ್ ಮಾಡಿಸುವ ಮೂಲಕ ನಿರ್ದೇಶಕ ರಾಮ್ ನಾರಾಯಣ್ ಅವರು ಅಭಿಮಾನ ಮೆರೆದಿದ್ದರು. ಅಷ್ಟೇ ಅಲ್ಲ, ಈ ಚಿತ್ರದ ಒಂದು ದೃಶ್ಯದಲ್ಲಿ ರಾಯನ್ ರಾಜ್ ಸರ್ಜಾ ಕಾಣಿಸಿಕೊಳ್ಳಲಿರುವುದು ವಿಶೇಷ. ಹಾಗಾಗಿ ‘ರಾಜಮಾರ್ತಾಂಡ’ ಬಿಡುಗಡೆ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಕಟೌಟ್ ಜೊತೆಗೆ ರಾಯನ್ನ ಕಟೌಟ್ ಕೂಡ ನಿಲ್ಲಿಸಬೇಕು ಎಂದು ಅವರು ಆಸೆ ಇಟ್ಟುಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:20 pm, Wed, 15 June 22