ಬೆಂಗಳೂರು: ಸ್ಯಾಂಡಲ್ವುಡ್ನ ಉತ್ತುಂಗಕ್ಕೆ ಏರುತ್ತಿದ್ದ ಯುವ ನಟ, ಅಗಾಧ ಪ್ರತಿಭೆ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾರ ಹಠಾತ್ ನಿಧನ ಎಲ್ಲರನ್ನೂ ದಂಗು ಬಡಿಸಿತ್ತು. ತನ್ನ ಸರಳ ಸ್ವಭಾವ ಹಾಗೂ ಸಹಜ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದ ಚಿರು ಈಗ ಎಲ್ಲರನ್ನು ಬಿಟ್ಟು ಬಹುದೂರ ಹೋಗಿದ್ದಾರೆ.
ಈ ಮಧ್ಯೆ ತಾವು ನಟಿಸುತ್ತಿದ್ದ ಕೆಲವು ಸಿನಿಮಾಗಳು ಅಪೂರ್ಣವಾಗಿ ಉಳಿದಿವೆ. ಅವುಗಳಲ್ಲಿ ರಾಜ ಮಾರ್ತಾಂಡ ಸಿನಿಮಾ ಕೂಡಾ ಒಂದು. ಶೂಟಿಂಗ್ ಭಾಗ ಮುಗಿದಿದ್ದ ಚಿತ್ರಕ್ಕೆ ಲಾಕ್ಡೌನ್ ಎದುರಾಗಿ ಡಬ್ಬಿಂಗ್ ಮಾಡುವುದು ಮಾತ್ರ ಬ್ಯಾಲೆನ್ಸ್ ಉಳಿದಿತ್ತು. ಆದ್ರೆ ಚಿರು ಕೊನೆಯುಸಿರೆಳೆದ ಹಿನ್ನೆಲೆಯಲ್ಲಿ ಅವರ ವಾಯ್ಸ್ ಡಬ್ಬಿಂಗ್ ಭಾಗವು ಹಾಗೇ ಉಳಿದುಬಿಟ್ಟಿತ್ತು. ಹೀಗಾಗಿ ಚಿತ್ರದ ನಿರ್ಮಾಪಕರಿಗೆ ತುಸು ಚಿಂತೆ ಶುರುವಾಗಿತ್ತು.
ರಾಜ ಮಾರ್ತಾಂಡನಿಗೆ ವಾಯ್ಸ್ ನೀಡಲಿದ್ದಾರೆ ದರ್ಶನ್, ಧ್ರುವ
ಆದರೆ, ಅಗಲಿದ ಅಣ್ಣನಿಗೆ ಬಲಗೈ ಭಂಟನಂತಿದ್ದ ತಮ್ಮ ಧ್ರುವ ಇದೀಗ ಸಿನಿಮಾದ ನಿರ್ಮಾಪಕರಿಗೆ ಅರ್ಧಕ್ಕೆ ನಿಂತ ಚಿತ್ರವನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಚಿರು ಪುಣ್ಯತಿಥಿ ನಡೆದ ದಿನದಂದು ಧ್ರುವ ನಿರ್ಮಾಪಕರಿಗೆ ಮಾತು ಕೊಟ್ಟಿದ್ದಾರೆ. ಇದರ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ನೆರವಿನ ಹಸ್ತ ಚಾಚಿದ್ದು ಅಗತ್ಯ ಬಿದ್ದರೆ ಸ್ವತಃ ತಾವೇ ವಾಯ್ಸ್ ಡಬ್ ಮಾಡೋದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಚಿತ್ರದ ನಿರ್ಮಾಪಕರು ಹೇಳಿದ್ದಾರೆ. ಹೀಗಾಗಿ ನೋವಲ್ಲೂ ಸ್ಟಾರ್ ನಟರು ನೀಡಿರೋ ಮಾತಿಗೆ ಚಿತ್ರತಂಡ ಸಂತಸಗೊಂಡಿದೆ.
Published On - 4:52 pm, Sun, 28 June 20