ಮಗನ ನೆನಪಿಗಾಗಿ ಸುಶಾಂತ್ ಸಿಂಗ್ ರಾಜಪೂತ್ ಫೌಂಡೇಷನ್ ತೆರೆಯಲು ಕುಟುಂಬಸ್ಥರ ಸಿದ್ಧತೆ

  • Updated On - 12:33 pm, Sun, 28 June 20 Edited By:
ಮಗನ ನೆನಪಿಗಾಗಿ ಸುಶಾಂತ್ ಸಿಂಗ್ ರಾಜಪೂತ್ ಫೌಂಡೇಷನ್ ತೆರೆಯಲು ಕುಟುಂಬಸ್ಥರ ಸಿದ್ಧತೆ

ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಬಗೆಗಿನ ಆಕ್ರೋಶ ಇನ್ನೂ ನಿಂತಿಲ್ಲ. ಸುಶಾಂತ್ ಸಿಂಗ್ ರಾಜಪೂತ್ ಸಾವು ಪೂರ್ವ ನಿಯೋಜಿತ ಕೊಲೆ ಅಂತ ಬಾಲಿವುಡ್​ನ ಕೆಲ ಮಂದಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸುಶಾಂತ್ ಸಾವಿನ ಪ್ರಕರಣವನ್ನ ಸಿಬಿಐಗೆ ಒಪ್ಪಿಸಬೇಕು ಅಂತ ಅಭಿಯಾನವೇ ಶುರುವಾಗಿದೆ. ಆದ್ರೆ, ಇತ್ತ ಕುಟುಂಬ ಭಾವನಾತ್ಮಕ ಪತ್ರ ಬರೆದು ಸುಶಾಂತ್ ಸಿಂಗ್ ರಾಜಪೂತ್​ಗೆ ವಿದಾಯ ಹೇಳಿದೆ.

ಸುಶಾಂತ್ ಫ್ಯಾಮಿಲಿ ಬರೆದ ಈ ಪತ್ರದಲ್ಲಿ ನಟನ ಬದುಕಿನ ಮಧುರ ಕ್ಷಣಗಳಿವೆ. ಕುತೂಹಲಗಳಿಗೆ ಸದಾ ತೆರೆದುಕೊಳ್ಳುತ್ತಿದ್ದ ನಟ ಅದ್ಭುತ ಮಾತುಗಾರನಾಗಿದ್ದ. ತನ್ನ ಕನಸುಗಳನ್ನ ಬೆನ್ನಟ್ಟುತ್ತಿದ್ದ ರೀತಿ, ಆತನ ನಗು, ನಕ್ಷತ್ರಗಳ ಮೇಲಿದ್ದ ಸುಶಾಂತ್​ಗಿದ್ದ ಕುತೂಹಲ, ಸದಾ ಆ ನಕ್ಷತ್ರಗಳನ್ನ ನೋಡುತ್ತಿದ್ದ ಟೆಲಿಸ್ಕೋಪ್ ಎಲ್ಲವೂ ನಟನ ನೆನಪು.

ಮರೆಯಾದ ಮಗನ ನೆನೆಪಿಗೆ ಫೌಂಡೇಷನ್ ಸ್ಥಾಪನೆ
ಸುಶಾಂತ್ ಅನುಪಸ್ಥಿತಿ ಕುಟುಂಬವನ್ನ ಸದಾ ಕಾಡುತ್ತಲೇ ಇರುತ್ತೆ. ಹೀಗಾಗಿ ಸುಶಾಂತ್ ಸಿಂಗ್ ರಾಜಪುತ್ ನೆನಪು ಹಾಗೂ ಪರಂಪರೆಯನ್ನ ಮುಂದುವರೆಸಲು ಸುಶಾಂತ್ ಸಿಂಗ್ ರಾಜಪೂತ್ ಫೌಂಡೇಷನ್(SSRP) ಅನ್ನ ತೆರೆಯಲು ಕುಟುಂಬ ನಿರ್ಧರಿಸಿದೆ. ಈ ಫೌಂಡೇಷನ್ ಸಿನಿಮಾ, ಕ್ರೀಡೆ ಹಾಗೂ ವಿಜ್ಞಾನ ವಿಭಾಗದ ಯುವ ಪ್ರತಿಭೆಗಳಿಗೆ ಅಗತ್ಯ ನೆರವು ನೀಡಲಿದೆ.

ಇಷ್ಟೇ ಅಲ್ಲ.. ಸುಶಾಂತ್ ಸಿಂಗ್ ರಾಜಪೂತ್ ಬಾಲ್ಯ ಕಳೆದ ಪಾಟ್ನಾದ ರಾಜೀವ್​ನಗರದ ಮನೆಯನ್ನ ಸ್ಮಾರಕವನ್ನಾಗಿ ಪರಿವರ್ತಿಸಲಾಗುತ್ತಿದೆ. ಇಲ್ಲಿ ಸುಶಾಂತ್ ಅಭಿಮಾನಿಗಳಿಗಾಗಿ ಸ್ಮರಣಿಕೆಗಳು, ವಸ್ತುಗಳು, ಸಾವಿರಾರು ಪುಸ್ತಕಗಳು, ಟೆಲಿಸ್ಕೋಪ್, ಫ್ಲೈಟ್ ಸಿಮ್ಯೂಲೇಟರ್ ಇತ್ಯಾದಿಗಳು ಇರಿಸಲಾಗುತ್ತೆ. ಅಲ್ಲದೆ ಸುಶಾಂತ್ ಸಿಂಗ್ ರಾಜಪೂತ್ ನೆನಪುಗಳನ್ನ ಜೀವಂತವಾಗಿರಿಸಲು ಇನ್ಸ್​ಟಾಗ್ರಾಂ, ಟ್ವಿಟರ್, ಫೇಸ್​ಬುಕ್ ಖಾತೆಯನ್ನ ಜೀವಂತವಾಗಿಡಲು ತೀರ್ಮಾನಿಸಲಾಗಿದ್ದು, ಕುಟುಂಬಸ್ಥರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.