ಅಗಲಿದ ‘ರಾಜ ಮಾರ್ತಾಂಡ’ನಿಗೆ ದನಿಗೂಡಿಸಲಿದ್ದಾರೆ ದರ್ಶನ್, ಧ್ರುವ

ಬೆಂಗಳೂರು: ಸ್ಯಾಂಡಲ್​ವುಡ್​ನ ಉತ್ತುಂಗಕ್ಕೆ ಏರುತ್ತಿದ್ದ ಯುವ ನಟ, ಅಗಾಧ ಪ್ರತಿಭೆ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾರ ಹಠಾತ್​ ನಿಧನ ಎಲ್ಲರನ್ನೂ ದಂಗು ಬಡಿಸಿತ್ತು. ತನ್ನ ಸರಳ ಸ್ವಭಾವ ಹಾಗೂ ಸಹಜ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದ ಚಿರು ಈಗ ಎಲ್ಲರನ್ನು ಬಿಟ್ಟು ಬಹುದೂರ ಹೋಗಿದ್ದಾರೆ. ಈ ಮಧ್ಯೆ ತಾವು ನಟಿಸುತ್ತಿದ್ದ ಕೆಲವು ಸಿನಿಮಾಗಳು ಅಪೂರ್ಣವಾಗಿ ಉಳಿದಿವೆ. ಅವುಗಳಲ್ಲಿ ರಾಜ ಮಾರ್ತಾಂಡ ಸಿನಿಮಾ ಕೂಡಾ ಒಂದು. ಶೂಟಿಂಗ್​ ಭಾಗ ಮುಗಿದಿದ್ದ ಚಿತ್ರಕ್ಕೆ ಲಾಕ್​ಡೌನ್ ಎದುರಾಗಿ ಡಬ್ಬಿಂಗ್ ಮಾಡುವುದು ಮಾತ್ರ ಬ್ಯಾಲೆನ್ಸ್ […]

ಅಗಲಿದ ‘ರಾಜ ಮಾರ್ತಾಂಡ’ನಿಗೆ ದನಿಗೂಡಿಸಲಿದ್ದಾರೆ ದರ್ಶನ್, ಧ್ರುವ
Follow us
KUSHAL V
| Updated By:

Updated on:Jun 28, 2020 | 4:53 PM

ಬೆಂಗಳೂರು: ಸ್ಯಾಂಡಲ್​ವುಡ್​ನ ಉತ್ತುಂಗಕ್ಕೆ ಏರುತ್ತಿದ್ದ ಯುವ ನಟ, ಅಗಾಧ ಪ್ರತಿಭೆ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾರ ಹಠಾತ್​ ನಿಧನ ಎಲ್ಲರನ್ನೂ ದಂಗು ಬಡಿಸಿತ್ತು. ತನ್ನ ಸರಳ ಸ್ವಭಾವ ಹಾಗೂ ಸಹಜ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದ ಚಿರು ಈಗ ಎಲ್ಲರನ್ನು ಬಿಟ್ಟು ಬಹುದೂರ ಹೋಗಿದ್ದಾರೆ.

ಈ ಮಧ್ಯೆ ತಾವು ನಟಿಸುತ್ತಿದ್ದ ಕೆಲವು ಸಿನಿಮಾಗಳು ಅಪೂರ್ಣವಾಗಿ ಉಳಿದಿವೆ. ಅವುಗಳಲ್ಲಿ ರಾಜ ಮಾರ್ತಾಂಡ ಸಿನಿಮಾ ಕೂಡಾ ಒಂದು. ಶೂಟಿಂಗ್​ ಭಾಗ ಮುಗಿದಿದ್ದ ಚಿತ್ರಕ್ಕೆ ಲಾಕ್​ಡೌನ್ ಎದುರಾಗಿ ಡಬ್ಬಿಂಗ್ ಮಾಡುವುದು ಮಾತ್ರ ಬ್ಯಾಲೆನ್ಸ್ ಉಳಿದಿತ್ತು. ಆದ್ರೆ ಚಿರು ಕೊನೆಯುಸಿರೆಳೆದ ಹಿನ್ನೆಲೆಯಲ್ಲಿ ಅವರ ವಾಯ್ಸ್​ ಡಬ್ಬಿಂಗ್​ ಭಾಗವು ಹಾಗೇ ಉಳಿದುಬಿಟ್ಟಿತ್ತು. ಹೀಗಾಗಿ ಚಿತ್ರದ ನಿರ್ಮಾಪಕರಿಗೆ ತುಸು ಚಿಂತೆ ಶುರುವಾಗಿತ್ತು.

ರಾಜ ಮಾರ್ತಾಂಡನಿಗೆ ವಾಯ್ಸ್​ ನೀಡಲಿದ್ದಾರೆ ದರ್ಶನ್​, ಧ್ರುವ ಆದರೆ, ಅಗಲಿದ ಅಣ್ಣನಿಗೆ ಬಲಗೈ ಭಂಟನಂತಿದ್ದ ತಮ್ಮ ಧ್ರುವ ಇದೀಗ ಸಿನಿಮಾದ ನಿರ್ಮಾಪಕರಿಗೆ ಅರ್ಧಕ್ಕೆ ನಿಂತ ಚಿತ್ರವನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಚಿರು ಪುಣ್ಯತಿಥಿ ನಡೆದ ದಿನದಂದು ಧ್ರುವ ನಿರ್ಮಾಪಕರಿಗೆ ಮಾತು ಕೊಟ್ಟಿದ್ದಾರೆ. ಇದರ ಜೊತೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಕೂಡ ನೆರವಿನ ಹಸ್ತ ಚಾಚಿದ್ದು ಅಗತ್ಯ ಬಿದ್ದರೆ ಸ್ವತಃ ತಾವೇ ವಾಯ್ಸ್ ಡಬ್ ಮಾಡೋದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಚಿತ್ರದ ನಿರ್ಮಾಪಕರು ಹೇಳಿದ್ದಾರೆ. ಹೀಗಾಗಿ ನೋವಲ್ಲೂ ಸ್ಟಾರ್ ನಟರು ನೀಡಿರೋ ಮಾತಿಗೆ ಚಿತ್ರತಂಡ ಸಂತಸಗೊಂಡಿದೆ.

Published On - 4:52 pm, Sun, 28 June 20

ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ